ತುಮಕೂರು: ನಗರದ ಆರ್.ಟಿ.ನಗರದ ಹೋರಿ ಮುದ್ದಣ್ಣ ಕಾಂಪೌAಡ್ನ ಶ್ರೀ ಸಿದ್ಧಿಗಣಪತಿ ಸೇವಸ್ಥಾನದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಗಣಪತಿಗೆ ಕನ್ನಡ ಬಾವುಟದ ಬಣ್ಣದ ವಿಶೇಷ ಅಲಂಕಾರ ಮಾಡಲಾಗಿತ್ತು.
ಹಿರೇಮಠದ ಅರ್ಚಕರಾದ ಸುನೀಲ್ ಶಾಸ್ತಿç ಅವರು ಈ ವಿಶೇಷ ಅಲಂಕಾರ ಮಾಡಿದ್ದರು.
ಭಕ್ತರಾದ ಮಂಗಳಮ್ಮ ಗಿರಿಧರ್ ಅವರು ದೇವಸ್ಥಾನಕ್ಕೆ ಪ್ರಭಾವಳಿಯನ್ನು ಕಾಣಿಕೆಯಾಗಿ ನೀಡಿದರು. ಸಂಕಷ್ಟಿ ಪ್ರಯುಕ್ತ ಸಿದ್ಧಿ ಗಣಪತಿಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪೂಜಾಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ದರ್ಶನ ಮಾಡಿದರು.
ಹೋರಿ ಮುದ್ದಣ್ಣ ಕಾಂಪೌAಡಿನ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಂಜಣ್ಣ, ಕಾರ್ಯದರ್ಶಿ ರೇಣುಕಾ ಪ್ರಸಾದ್, ಮುಖಂಡರಾದ ಮಹೇಶ್, ಬಸವರಾಜು, ಶಿವಾನಂದ್, ನಾಗರಾಜು, ಶಿವಕುಮಾರ್ ಮೊದಲಾದವರು ಭಾಗವಹಿಸಿದ್ದರು.
ಹೋರಿ ಮುದ್ದಣ್ಣ ಕಂಪುಂಡ್ ದೇವಸ್ಥಾನದಲ್ಲಿ ವಿಶೇಷ ಪೂಜೆ
Leave a comment
Leave a comment