ಮೂಲತಹ ಕೊಡಗಿನ ಕುಶಾಲನಗರ ತಾಲೂಕು ಕೂಡಿಗೆ ಗ್ರಾಮದವರಾದ ಕೆವಿ ಸುಬ್ರಮಣ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ ಎರಡರಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಮಗನಾದ ಸಮರ್ಥ ನಾಯಕ್ ರ ಕ್ರಿಯಾಶೀಲತೆ ಮತ್ತು ಕಾರ್ಯ ಚಟುವಟಿಕೆಯನ್ನು ನೋಡಿ ಹಾಗೂ ಹಾಕಿ ಆಟದಲ್ಲಿ ಇರುವ ಆಸಕ್ತಿಯನ್ನು ಕಂಡ ಚಾಲಕ ಸುಬ್ರಹ್ಮಣ್ಯ ರವರು ಮಗನ ಆಸೆಗೆ ನೀರರೆದು ಪೋಷಿಸಿದ ಪರಿಣಾಮ ಇಂದು ಚೆನ್ನೈನಲ್ಲಿ ನಡೆದ ದಕ್ಷಿಣ ವಲಯದ ಪುರುಷರ ವಿಭಾಗದ ಹಾಕಿ ಚಾಂಪಿಯನ್ಶಿಪ್ ನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಹೊರಹೊಮ್ಮಿ ಹುಟ್ಟೂರು ಮತ್ತು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. ಹಾಕಿ ಇಂಡಿಯಾ ವತಿಯಿಂದ ಸಿದ್ದ ಪ್ರಥಮ ದಕ್ಷಿಣ ವಲಯದ ಹಾಕಿ ಜೂನಿಯರ್ ಪಂದ್ಯಾವಳಿಯಲ್ಲಿ ಬಹುತೇಕ ಕೊಡಗಿನವರೇ ಆಟಗಾರರು ಚಿನ್ನದ
ಬಹುಮಾನಕ್ಕೆ ಭಾಜನರಾಗಿದ್ದಾರೆ. ತಮಿಳುನಾಡಿನ ಚೆನ್ನೈನ ಯಗ್ಮರ್ ರಾಧಾಕೃಷ್ಣ ಕ್ರೀಡಾಂಗಣದಲ್ಲಿ ನಡೆದ ಹಾಕಿ ಪಂದ್ಯದಲ್ಲಿ ತಮಿಳುನಾಡು ತಂಡವನ್ನು 3 2 ಗೋಲುಗಳಿಂದ ಸೋಲಿಸಿ ಚಾಂಪಿಯನ್ಶಿಪ್ ಪಟ್ಟಗಳಿಸಿತು. ತಂಡದಲ್ಲಿ ಜಿಲ್ಲೆ ಆಟಗಾರರಾದ ನಿಶಾಂತ್ .ದೀಕ್ಷಿತ್. ಸೋಹನ್ . ತನಿಷ್. ಸಮರ್ಥ್ ನಾಯಕ್. ಚಿರಾಗ್. ದರ್ಶನ್ ತಮ್ಮಯ್ಯ ಧನುಷ್. ಶ್ರೇಯಸ್. ಸುಪ್ರೀತ್. ತೇಜಸ್. ರೋಹಿತ್. ರಾಜ್ಯಕ್ಕೆ ಕೀರ್ತಿ ತಂದವರಾಗಿದ್ದಾರೆ