Tumkur ನಗರದ ಪಿ.ಕೆ.ಎಸ್ ಕಾಲೋನಿ ಸ್ಲಂ ಸಮಿತಿ ಕಚೇರಿಗೆ ಭೇಟಿ ನೀಡಿ ತುಮಕೂರು ಸ್ಲಂ ಸಮಿತಿಯ ಮುಖಂಡರೊAದಿಗೆ ಸಮಾಲೋಚನೆ ನಡೆಸಿದ ಸ್ವಾಭಿಮಾನಿ ಅಭ್ಯರ್ಥಿ ಸೊಗಡು ಶಿವಣ್ಣ ನನ್ನ ೨೦ ವರ್ಷ ಅವಧಿಯಲ್ಲಿ ಕೊಳಚೆ ಪ್ರದೇಶಗಳು ಅವರ ಶಿಕ್ಷಣಕ್ಕೆ ಒತ್ತು ನೀಡಿದ್ದೇನೆ ಸ್ಥಳೀಯ ನಿವಾಸಿಯಾಗಿರುವ ನಾನು ಕೊಳಗೇರಿ ಸಮಿತಿಯ ಹೋರಾಟವನ್ನು ತುಂಬಾ ಹತ್ತಿರದಿಂದ ಕಂಡಿದ್ದೇನೆ, ಸಮಿತಿ ಪಕ್ಷಾತೀತವಾಗಿ ಬಡಜನರ ಪರವಾಗಿ ಕೆಲಸ ಮಾಡುತ್ತಿದೆ, ನಗರದ ನಿವೇಶ ವಂಚಿತ ಕುಟುಂಬಗಳನ್ನು ಸಂಘಟಿಸಿ ಸರ್ಕಾರದ ಮೇಲೆ ಒತ್ತಡ ತಂದು ೧೭ ಎಕರೆ ಸರ್ಕಾರಿ ಭೂಮಿಯನ್ನು ಗುರತಿಸಿದ್ದು ಗಮನಕ್ಕಿದೆ ಆದರೆ ಕೆಲವು ಸ್ವಾರ್ಥ ರಾಜಕಾರಣಿಗಳು ವಂಚಿತ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ. ನಾನು ವಸತಿ ವಂಚಿತ ಕುಟುಂಬಗಳಿಗೆ ವಸತಿ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಿಮ್ಮೆಲ್ಲ ಕಷ್ಟ ಸುಖಗಳಿಗೆ ೨೪*೭ ನಾನು ಜೊತೆಯಾಗಿರುತ್ತೇನೆ. ಪಕ್ಷ ನನ್ನನ್ನು ಕೈಬಿಟ್ಟಿದೆ ಆದರೆ ತುಮಕೂರು ಎಲ್ಲಾ ಸಮುದಾಯದ ಜನ ನನ್ನ ಕೈಬಿಡದೆ ನನ್ನ ನಿಸ್ವಾರ್ಥ ಸೇವೆ ಮಾಡಲು ಬೆಂಬಲಿಸಬೇಕೆAದು ಮನವಿ ಮಾಡಿದ ಅವರು ಸ್ಲಂ ಜನರ ಪ್ರಣಾಳಿಕೆ ಸ್ವೀಕರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕರಾದ ಎ,ನರಸಿಂಹಮೂರ್ತಿರವರು ಸೊಗಡು ಶಿವಣ್ಣನವರಿಗೆ ನಗರದ ಸ್ಲಂ ನಿವಾಸಿಗಳ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಸ್ಲಂ ಸಮಿತಿಯ ಪದಾಧಿಕಾರಿಗಳಾದ ಶಂಕ್ರಯ್ಯ, ಅರುಣ್, ಗಣೇಶ್, ಅಶ್ವಥ್, ಪುಟ್ಟರಾಜು, ಮುಂತಾದವರು ಪಾಲ್ಗೊಂಡಿದ್ದರು.



