ತುಮಕೂರು: ಉತ್ತಮವಾಗಿ ಬದುಕಿ ವಿಕಾಸ ಹೊಂದಲು ಅಗತ್ಯವಿರುವ ಎಲ್ಲ ಮಕ್ಕಳ ಹಕ್ಕುಗಳನ್ನು ಸಮಾಜ ಪಾಲಿಸಬೇಕು, ರಕ್ಷಿಸಬೇಕು ಎಂದು ಬೆಂಗಳೂರಿನ ಚೈಲ್ಡ್ರೈಟ್ಸ್ ಟ್ರಸ್ಟ್ನ ಕಾರ್ಯಕಾರಿ ನಿರ್ದೇಶಕ ಡಾ. ವಾಸುದೇವ ಶರ್ಮ ಎನ್. ವಿ. ಹೇಳಿದರು.
ತುಮಕೂರು ವಿವಿ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಚೈಲ್ಡ್ರೈಟ್ಸ್ ಟ್ರಸ್ಟ್ ಮತ್ತು ಅಮಲಗೊಂದಿಯ ಚಿಗುರು ಯುವಜನ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ‘ಕಲ್ಪನೆಯಿಂದ ಸಾಧ್ಯತೆಯೆಡೆಗೆ ಮಕ್ಕಳ ಹಕ್ಕುಗಳು’ ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
1992ರಲ್ಲಿ ಭಾರತ ಅಳವಡಿಸಿಕೊಂಡ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿರುವAತೆ- ಮಕ್ಕಳ ಮೇಲೆ ದಬ್ಬಾಳಿಕೆ, ತೊಂದರೆ, ಕಿರುಕುಳ ನೀಡುವಂತಿಲ್ಲ. ಮಕ್ಕಳನ್ನು ದುಡಿಮೆಗೆ ದೂಡುವುದು, ಮಾರಾಟ, ಸಾಗಣೆ ಹಾಗೂ ಲೈಂಗಿಕ, ದೈಹಿಕ, ಮಾನಸಿಕ ಶೋಷಣೆಗೆ ಈಡು ಮಾಡಬಾರದು ಎಂದು ತಿಳಿಸಿದರು.
ನ್ಯಾಯಸಮ್ಮತವಾಗಿ ಮಕ್ಕಳಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳು, ಶಿಕ್ಷಣ, ಆರೋಗ್ಯ ಸೌಲಭ್ಯಗಳ ಕೊರತೆಯುಂಟಾಗದoತೆ ಪಾಲಕರು, ಪೋಷಕರು ನೋಡಿಕೊಳ್ಳಬೇಕು ಎಂದರು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ವಿವಿ ಹಣಕಾಸು ಅಧಿಕಾರಿ ಪ್ರೊ. ಪರಮಶಿವಯ್ಯ ಪಿ., 2023ರ ವೇಳೆಗೆ ಭಾರತದಲ್ಲಿ ದುಡಿಯುವ ಜನಸಂಖ್ಯೆಯು ಶೇ.76ರಷ್ಟಿರುತ್ತದೆ. ಗುಣಮಟ್ಟ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕಾಗಿದೆ. ಮಕ್ಕಳ ಮೇಲಾಗುವ ದೌರ್ಜನ್ಯಗಳನ್ನು ಸಂಪೂರ್ಣವಾಗಿ ಇಲ್ಲವಾಗಿಸಿದರೆ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಮಕ್ಕಳ ಹಕ್ಕುಗಳ ಕಾಯಿದೆಗಳನ್ನು ಪಾಲಿಸಬೇಕು. ಭಾರತದಲ್ಲಿ 47 ಕೋಟಿ ಮಕ್ಕಳಿದ್ದಾರೆ. ಇದರಲ್ಲಿ 33ಲಕ್ಷ ಮಕ್ಕಳು ಬಾಲ ಕಾರ್ಮಿಕರಾಗಿ ದೇಶದ ಗಲ್ಲಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳ ಕಳ್ಳ ಸಾಗಣೆ, ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.
ವಿವಿ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ. ರಮೇಶ್ ಬಿ., ಪ್ರಾಧ್ಯಾಪಕ ಪ್ರೊ. ಪರಮಶುರಾಮ ಕೆ. ಜಿ., ಅಮಲಗೊಂದಿಯ ಚಿಗುರು ಯುವಜನ ಸಂಘದ ಮುಖ್ಯಸ್ಥ ಮಂಜುನಾಥ್ ಉಪಸ್ಥಿತರಿದ್ದರು.
ಮಕ್ಕಳ ಹಕ್ಕುಗಳನ್ನು ಸಮಾಜ ರಕ್ಷಿಸಬೇಕು ಡಾ. ವಾಸುದೇವ ಶರ್ಮ
Leave a comment
Leave a comment