ಕಲ್ಬುರ್ಗಿ: ನೀಲಕಂಠ ಜಮಾದಾರ್ ಅವರ ಅಧ್ಯಕ್ಷತೆಯಲ್ಲಿ ಕಲಬುರ್ಗಿ ಜಿಲ್ಲಾ ಕೋಲಿ ಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಸಮಾವೇಶ ಹಾಗೂ ಪರಿಸ್ಕೃತ ಸ್ನೇಹ ಸಂಗಮ ಪರಿಚಯ ಗ್ರಂಥ ಬಿಡುಗಡೆ ಸಮಾರಂಭ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಜರುಗಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ಜಗದ್ಗುರು ಪೂಜ್ಯಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು, ಉದ್ಘಾಟನೆಯನ್ನು ಎಂ ಶ್ರೀನಿವಾಸ್ ಕರ್ನಾಟಕ ರಾಜ್ಯ ಗಂಗಾಮತ ನೌಕರರ ಸಂಘದ ರಾಜ್ಯಾಧ್ಯಕ್ಷರು ಬೆಂಗಳೂರು ನೆರವೇರಿಸಿದರು, ಪರಿಸ್ಕೃತ “ಸ್ನೇಹ ಸಂಗಮ” ಪರಿಚಯ ಗ್ರಂಥ ಬಿಡುಗಡೆಯನ್ನು ಶ್ರೀ ಡಾ. ಬಸವರಾಜ್ ಸಿದ್ಧಾಶ್ರಮ ಅಧ್ಯಕ್ಷರು ಅಂತರಾಷ್ಟ್ರೀಯ ಸಾಮಾಜಿಕ ದರ್ಶನ ಕಾಂಗ್ರೆಸ್ಸು ಮತ್ತು ಅಂತರಾಷ್ಟ್ರೀಯ ಯೋಗವಿಜ್ಞಾನ ಕಾಂಗ್ರೆಸ್ಸು ಇವರು ನೆರವೇರಿಸಿದರು, ಗುರುತಿನ ಚೀಟಿ ಬಿಡುಗಡೆ ಡಾಕ್ಟರ್ ನಾಗಬಾಯಿ ಬುಳ್ಳಾ ಸಾಹಿತಿಗಳು ಮಾಜಿ ಸದಸ್ಯರು ಕರ್ನಾಟಕ ಲೋಕಸೇವಾ ಆಯೋಗ ಬೆಂಗಳೂರು ನೆರವೇರಿಸಿದರು, ಈ ಕಾರ್ಯಕ್ರಮದ ಘನ ಉಪಸ್ಥಿತಿ ಎ ಹಾಲೇಶಪ್ಪ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು, ನಾಮದೇವ್ ಕಡಕೋಳ ಗೌರವಅಧ್ಯಕ್ಷರು ಜಿಲ್ಲಾ ಕೋಲಿ ಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಕಲ್ಬುರ್ಗಿ, ಮತ್ತು ಧರ್ಮರಾಜ್ ಜವಳಿ ಕಾರ್ಯಾಧ್ಯಕ್ಷರು ಜಿಲ್ಲಾ ಕೋಲಿ ಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಕಲ್ಬುರ್ಗಿ.
ಮುಖ್ಯ ಅತಿಥಿ ಸ್ನಾನವನ್ನು ಡಾ. ಮಲ್ಲಿಕಾರ್ಜುನ್ ಮುಕ್ಕಾ ಮಾಜಿ ಕಾರ್ಯಾಧ್ಯಕ್ಷರು ಅಖಿಲ ಕರ್ನಾಟಕ ಸ್ನೇಹ ಗಂಗವಾಹಿನಿ ಕಲಬುರ್ಗಿ ಹಾಗೂ ಅಧ್ಯಕ್ಷರು ಮಹರ್ಷಿ ವೇದವ್ಯಾಸ ಮಂಥನ ಮತ್ತು ಪ್ರೇರಣಾ ಟ್ರಸ್ಟ್ ಇವರು ವಹಿಸಿ ಕೋಂಡಿದ್ದರು.
ಇದೇ ಸಂದರ್ಭದಲ್ಲಿ ಡಾಕ್ಟರ್ ಆಫ್ ಫಿಲೋಸಫಿ ಸಾಧಕರಿಗೆ, ವಿಶೇಷ ಸಾಧನೆಗೈದ ಸಾಧಕರಿಗೆ , ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ತದನಂತರ ಶ್ರೀ ಶಾಂತಭೀಷ್ಮ ಸ್ವಾಮೀಜಿಗಳು ಮಾತನಾಡುತ್ತಾ ಶೋಷಣೆಗೆ ಒಳಗಾದಂತಹ ಸಮಾಜವನ್ನು ಸುಧಾರಿಸಲು ಅನುಕೂಲಸ್ತ ನೌಕರರು ಸಮಾಜದ ಕಡುಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳುವುದರ ಮುಖಾಂತರ ಸಹಾಯ ಸಹಕಾರ ನೀಡಿ ಮುಂದು ತರುವಂತ ಕೆಲಸ ಮಾಡಿ ಎಂದರು. ಈ ಭಾಗದಲ್ಲಿ ಬಹುದೊಡ್ಡ ನಮ್ಮ ಸಮಾಜದ ಜನ ಇರುವುದರಿಂದ ಈ ಪುಣ್ಯಭೂಮಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಚೌಡಾಪೂರ್ ಬಳಿ 16 ಎಕರೆ ಭೂಮಿ ಖರೀದಿ ಮಾಡಿದ್ದೇವೆ ಎಂದರು. ಇದು ಸ್ನೇಹ ಸಂಗಮ ಪರಿಚಯ ಗ್ರಂಥ ಬಿಡುಗಡೆ ಕಾರ್ಯಕ್ರಮ ಮಾಡಿದ್ದು ಅತ್ಯಂತ ಸ್ಲಾಂಗನೀಯವಾದದ್ದು ಎಂದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಘನ
ಅಧ್ಯಕ್ಷತೆ ವಹಿಸಿದಂತ ನೀಲಕಂಠ ಜಮಾದಾರ್ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಸಮಾಜ ನೌಕರರನ್ನು ಒಂದು ಗೂಡಿಸುವ ಕಾರ್ಯಕ್ರಮ,ಸಮಾಜದಲ್ಲಿ ಒಬ್ಬರಿಗೊಬ್ಬರು ಪರಿಚಯಿಸುವ ಕಾರ್ಯಕ್ರಮ.
ಸ್ನೇಹ ಸಂಗಮದಿಂದ ಹೊಸ ಹೊಸ ವಿಚಾರಗಳ ಮುಖಾಂತರ ಹಿಂದುಳಿದ ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅವಿನಾಶ್ ಸಂಗೋಳಗಿ,ಚಂದ್ರಾಮ ಅಮಣಗಡೆ, ಅಮೃತ ಮಾಲಿಪಾಟೀಲ್, ಮಲ್ಲಿಕಾರ್ಜುನ್ ಜಮಾದಾರ್, ಶಾಂತಮಲ್ಲ ಶಿವಭೊ, ಮಲ್ಲೇಶಪ್ಪ ಬಿಜ್ಜರಗಿ, ಜಯಪ್ಪ ಚಾಪರ್, ಅಮರಪ್ಪ ಹುಸನಗೋಳ,ಸುಭಾಷ್ ಆರ್ಬೋಳ್,ನಿಂಗಣ್ಣ ಮಾಗಣಗೇರಾ ಸೇರಿದಂತೆ ಸಮಾಜದ ಮುಖಂಡರು ನೌಕರಸ್ಥರು ಉಪಸ್ಥಿತರಿದ್ದರು.