ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ(ರಿ) ೨೦ವಸಂತಗಳನ್ನು ಪೂರೈಸಿರುವ ಅಂಗವಾಗಿ ಸ್ಲಂ ಜನರ ನಡಿಗೆ ಸಂವಿಧಾನದೆಡೆಗೆ ಹಾಗೂ ಸಂಸ್ಕೃತಿ ಸಂಭ್ರಮ ವಿಶ್ವಮಾನವ ಹಕ್ಕುಗಳ ದಿನದ ಅಂಗವಾಗಿ ನಗರ ವಂಚಿತ ಸಮುದಾಯಗಳ ಮಾನವ ಹಕ್ಕುಗಳ ರಕ್ಷಣೆಗಾಗಿ ಶ್ರಮಿಸಿರುವ ಜಿಲ್ಲೆಯ ಕೆ.ದೊರೈರಾಜ್ ರವರಿಗೆ ಬುದ್ಧಮಾರ್ಗಿ ಪ್ರಶಸ್ತಿ, ರಾಜ್ಯದಲ್ಲಿ ಸ್ಲಂ ಜನರ ಸಂಘಟನೆಗೆ ಮಾರ್ಗದರ್ಶನ ನೀಡಿದ ಪ್ರೊ.ವೈ.ಜೆ ರಾಜೇಂದ್ರರವರಿಗೆ ಬಸವಮಾರ್ಗಿ ಪ್ರಶಸ್ತಿ, ಮತ್ತು ತೃತೀಯ ಲಿಂಗಿಗಳ ಘನತೆಗಾಗಿ ಹೋರಾಡುತ್ತಿರುವ ದೀಪಿಕಾರವರಿಗೆ ಶ್ರಮಶ್ರೀ ಪ್ರಶಸ್ತಿ ಹಾಗೂ ಉಡುಪಿ ಜಿಲ್ಲಾಧಿಕಾರಿಗಳಾದ ಡಾ.ಕೆ. ವಿದ್ಯಾಕುಮಾರಿ ಯವರಿಗೆ ಈ ಹಿಂದೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಣಾಧಿಕಾರಿಯಾಗಿ ಜನಪರ ಆಡಳಿತ ನೀಡಿದಕ್ಕಾಗಿ ನಾಗರೀಕ ಸನ್ಮಾನವನ್ನು ಡಿಸೆಂಬರ್ ೧೦ರಂದು ತುಮಕೂರಿನ ಬಾಲಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಎಂದು ಸ್ಲಂ ಜನಾಂದೋಲನ ಕರ್ನಾಟಕ ಎ.ನರಸಿಂಹಮೂರ್ತಿ ಇಂದು ಕರೆದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು,
ತುಮಕೂರು ಜಿಲ್ಲೆಯಲ್ಲಿ ಪ್ರಾರಂಭವಾದ ಸ್ಲಂ ಜನರ ಮಾನವ ಘನತೆಯ ಹೋರಾಟ ರಾಜ್ಯಕ್ಕೆ ವಿಸ್ತಾರಗೊಂಡು ೧೮ ಜಿಲ್ಲೆಗಳಲ್ಲಿ ಸ್ಲಂ ಜನಾಂದೋಲನದ ರೂಪ ಪಡೆದುಕೊಂಡು ಹಲವಾರು ಮಹತ್ತರ ಸಾಮಾಜಿಕ ಬದಲಾವಣೆಗಳನ್ನು ತರುವಲ್ಲಿ ಶ್ರಮಿಸುತ್ತಿದ್ದು ಇದುವೆರವಿಗೂ ಸರ್ಕಾರಗಳು ನಮ್ಮನ್ನು ನಿರಾಶ್ರಿತರನ್ನಾಗಿ ನೋಡಿದ್ದಾರೆ ಹೊರತು ಈ ದೇಶದ ನಾಗರೀಕರನ್ನಾಗಿ ಕಾಣಲಿಲ್ಲ ಹಾಗಾಗಿ ಸಂವಿಧಾನ ಖಾತ್ರಿ ಮಾಡಿರುವ ಬದುಕುವ ಹಕ್ಕು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಮನೆ ಮನಗೆ ಸಂವಿಧಾನವನ್ನು ತಲುಪಿಸುವ ಜೊತೆಗೆ ಸಂವಿಧಾನದೆಡೆಗೆ ಸ್ಲಂ ಜನರ ನಡಿಗೆಯನ್ನು ಕೈಗೊಳ್ಳಲಾಗುತ್ತಿದ್ದು ತುಮಕೂರು ಕೊಳಗೇರಿ ಸಮಿತಿಗೆ ೨೦ ವರ್ಷ ಸಂದ ಸಂದರ್ಭದಲ್ಲಿ ಕಳೆದ ೩ ತಿಂಗಳಲ್ಲಿ ೩೦ ಕೊಳಚೆ ಪ್ರದೇಶಗಳಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಆಯೋಜನೆ ಮಾಡಿದ್ದು ಇದರಲ್ಲಿ ೮೦೦ ಕ್ಕೂ ಹೆಚ್ಚು ಯುವಜನರು ಭಾಗವಹಿಸಿ ೧೭೦ ಜನರು ವಿಜೇತರಾಗಿದ್ದು ಇವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಒತ್ತಾಯಗಳನ್ನು ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಮತ್ತು ಸಹಕಾರಿ ಸಚಿವರಾದ ಕೆ.ಎನ್.ರಾಜಣ್ಣನವರಿಗೆ ಸಲ್ಲಿಸುತ್ತಿದ್ದು ನಗರದಲ್ಲಿರುವ ನಿವೇಶನ ರಹಿತರಿಗೆ ವಸತಿ ಕಲ್ಪಿಸಲು ಜಿಲ್ಲಾಧಿಕಾರಿಗಳಾದ ಕೆ.ಶ್ರೀನಿವಾಸ್, ನಗರ ಶಾಸಕರಾದ ಜ್ಯೋತಿಗಣೇಶ್, ಮತ್ತು ನಗರಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಕಾರ್ಯದರ್ಶಿ ಅರುಣ್, ಉಪಾಧ್ಯಕ್ಷರಾದ ಶಂಕ್ರಯ್ಯ. ಶಾರದಮ್ಮ, ಖಜಾಂಚಿ ಕಣ್ಣನ್, ಸ್ವಾಗತ ಸಮಿತಿಯ ತಿರುಮಲಯ್ಯ, ಧನಂಜಯ್, ಗಣೇಶ್, ಗೋವಿಂದ, ಗಂಗಾ, ಅನುಪಮಾ, ಲಕ್ಷಿö್ಮÃಪತಿ, ಮೋಹನ್, ಕೃಷ್ಣಮೂರ್ತಿ, ಚಕ್ರಪಾಣಿ, ಉಪಸ್ಥಿತರಿದ್ದರು.
ಸ್ಲಂ ಜನರ ನಡಿಗೆ ಸಂವಿಧಾನದೆಡೆಗೆ

Leave a comment
Leave a comment