
ಪ್ರಣಾಳಿಕೆ ಸ್ವೀಕರಿಸಿ ಹಾಗೂ ಸಂವಾದದಿAದ ಬಂದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಟಿ.ಬಿ ಜಯಂಚAದ್ರ ನಾನು ಸಿರಾದಲ್ಲಿ ಶಾಸಕನಾಗುವಾಗ ೬ ಕೊಳಚೆ ಪ್ರದೇಶಗಳಿದ್ದವು ೧೧ ಕೊಳಚೆ ಪ್ರದೇಶಗಳನ್ನು ಗುರಿತಿಸಿ ಕಾನೂನು ವ್ಯಾಪ್ತಿಗೆ ತಂದೆ ಉಳಿದಿರುವ ೬ ಕೊಳಚೆ ಪ್ರದೇಶಗಳನ್ನು ನನಗೆ ಅಧಿಕಾರ ನೀಡಲು ಬಿಡಲಿಲ್ಲ, ಸ್ಲಂ ವ್ಯಾಪ್ತಿಗೆ ಸೇರಿಸುವ ಪ್ರಯತ್ನ ಮಾಡುವೆ ಭವಾನಿ ನಗರ ಅಭಿವೃದ್ದಿಗೆ ೨೦ ಕೋಟಿ, ೧೦೦೮ ವಸತಿ ಸಮುಚ್ಛಯ ನಿರ್ಮಾಣಕ್ಕೆ ೬೫ ಕೋಟಿ , ರಂಗನಾಥ ನಗರ, ಅಂಬೇಡ್ಕರ್ ನಗರ ಅಭಿವೃದ್ಧಿಗೆ ೨೦ ಕೋಟಿ ಒಟ್ಟು ೧೦೫ ಕೋಟಿಗಳನ್ನು ಸ್ಲಂಗಳ ಅಭಿವೃದ್ಧಿಗೆ ನನ್ನ ಅವಧಿಯಲ್ಲಿ ದೊರಕಿಸಿಕೊಟ್ಟಿದ್ದೇನೆ, ೪ ಸಾವಿರ ಕುಟುಂಬಗಳಿಗೆ ೯೪ಸಿಸಿಯಲ್ಲಿ ಹಕ್ಕುಪತ್ರ ನೀಡಿದ್ದೇನೆ, ೫೭೦೦ ನಿವೇಶನ ರಹಿತರಿಗೆ ಸೈಟ್ ಮಂಜೂರು ಮಾಡಿದ್ದೇನೆ, ಆದರೆ ಇದನ್ನು ಹಂಚಿಕೆ ಮಾಡಲು ಬಿಟ್ಟಿಲ್ಲ ಈ ಬಾರೀ ನನ್ನ ಆಯ್ಕೆ ಮಾಡಿದ್ದಲ್ಲಿ ಹಂಚಿಕೆ ಮಾಡುತ್ತೇನೆ, ಸ್ಲಂ ಜನಾಂದೋಲನ ಸಂಘಟನೆ ನಡೆಸುತ್ತಿರುವ ಅಭಿಯಾನ ಸರಿಯಾಗಿದ್ದು ಸಂವಿಧಾನ ಉಳಿಸಲು ಸ್ಲಂ ನಿವಾಸಿಗಳು ಕಂಗ್ರೇಸ್ ಗೆ ಮತ ನೀಡಿ ಎಂದರು




