ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಮತ್ತು ಸಮರ್ಥ್ ಫೌಂಡೇಷನ್ ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ ಕೇಂದ್ರ ಇವರ ಸಹಯೋಗದೊಂದಿಗೆ “ವಿಶ್ವ ಪರಿಸರ” ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮವವನ್ನು ತುಮಕೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀಮತಿ ಪ್ರಭಾವತಿ ಸುದೀಶ್ವರ್ ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟನಾ ನುಡಿಯಲ್ಲಿ ಪರಿಸರವನ್ನು ಸಂರಕ್ಷಿಸುವುದು ನಮ್ಮೆಲರ ಹೊಣೆ, ಸ್ಮಾರ್ಟ್ ಸಿಟಿ ತುಮಕೂರಿನ ಪರಿಸರವನ್ನು ಸ್ವಚ್ಚ ಹಾಗೂ ಸುಂದರವಾಗಿಸುವುದು ಎಲ್ಲಾ ನಾಗರೀಕರ ಜವಾಬ್ದಾರಿಯಾಗಿದೆ. ನಮ್ಮ ನಮ್ಮ ಮನೆಕಸವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಿದರೆ ಸಾಕು, ಅದೇ ನಾವು ನಮ್ಮ ಪರಿಸರಕ್ಕೆ ನೀಡುವ ಅದ್ಭುತ ಕೊಡುಗೆ. ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಫೌಂಡೇಷನ್ನಿನ ಅಧ್ಯಕ್ಷರೂ, ಮಹಾನಗರ ಪಾಲಿಕೆ ಸದಸ್ಯರೂ ಆದ ಮಲ್ಲಿಕಾರ್ಜುನ್ ರವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಇಂದು ಸರ್ಕಾರಿ ಶಾಲಾ ಮಕ್ಕಳಿಗೆ ಸ್ಥಳದಲ್ಲೇ ಚಿತ್ರಕಲೆ ಬಿಡಿಸುವ ಸ್ಪರ್ಧೆಯನ್ನು, ಹಾಗೂ ಜಾತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರಿಂದ ಮಕ್ಕಳಿಗೆ ತಮ್ಮ ಪರಿಸರದ ಸಂರಕ್ಷಣೆ ಬಗ್ಗೆ ಅರಿವನ್ನು ಮೂಡಿಸಿದಂತಾಗುತ್ತದೆ. ಎಂದರು.
ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ವಿಶ್ವೇಶ್ವರಯ್ಯ, ದೊಡ್ಡಾವಲಪ್ಪ, ಸಮರ್ಥ್ ಫೌಂಡೇಷನ್ನಿನ ಕಾರ್ಯದರ್ಶಿ ರಾಣಿ ಚಂದ್ರಶೇಖರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ಮಕ್ಕಳು ಹಾಗೂ ಹೊರಪೇಟೆ ಸರ್ಕಾರಿ ಶಾಲೆಯ ಮಕ್ಕಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕ್ರಮವಾಗಿ ಅಯಾನ್, ಅಸಿಬ್, ನಿರಂಜನ್ರವರು ಬಹುಮಾನ ಪಡೆದರು. ಸಮರ್ಥ್ ಫೌಂಡೇಷನ್ನಿನ ಶಿಬಿರಾರ್ಥಿಗಳು “ಮರ ಉಳಿಸಿ ನಾಡು ರಕ್ಷಿಸಿ” ಎಂಬ ನಾಟಕವನ್ನು ಮನೋಜ್ಞವಾಗಿ ಅಭಿನಯಿಸಿದರು. ಕಾರ್ಯಕ್ರಮದಲ್ಲಿ ಮರ್ಸಿ, ಷಾರೋನ್, ರಮಾಮಣಿ, ಹೇಮಾವತಿ, ಉಷಾ, ಜೀವಿತ, ಜಾನಕಿ, ಸುಹಾಸಿನಿ, ಪೂರ್ಣಶ್ರೀ, ಶಿವಗಂಗಮ್ಮ, ಹನ್ನ ಮುಂತಾದವರು ಉಪಸ್ಥಿತರಿದ್ದರು
ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ ಕೇಂದ್ರ ಇವರ ಸಹಯೋಗದೊಂದಿಗೆ “ವಿಶ್ವ ಪರಿಸರ” ದಿನಾಚರಣೆ
Leave a comment
Leave a comment