೩೦ ದಿನದ ನವಜಾತ ಶಿಶುವಿಗೆ ಯಶಸ್ವಿ ಹೃದಯ ಶಸ್ತçಚಿಕಿತ್ಸೆ-ಮರುಹುಟ್ಟು ನೀಡಿದ ಸಿದ್ಧಾರ್ಥ ಆಸ್ಪ್ಪತ್ರೆಯಿಂದ ಮಗದೊಂದು ಮೈಲಿಗಲ್ಲು.
ತುಮಕೂರು: ಸಂಕೀರ್ಣವಾದ ಹೃದಯದ, ಜನ್ಮಜಾತ ಹೃದಯರೋಗ (ಖಿಂPಗಿಅ) ಸಮಸ್ಯೆಗೆ ತುತ್ತಾಗಿದ್ದ ೩೦ ದಿನದ ಹೆಣ್ಣು ಮಗುವಿಗೆ ಹೃದಯ ಶಸ್ತçಚಿಕಿತ್ಸೆಯನ್ನು ಯಶಸ್ವಿಯಾಗಿ ಮುಗಿಸಿ, ಮಗುವಿಗೆ ಮರುಹುಟ್ಟು ನೀಡಿರುವ ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ‘ಸಿದ್ಧಾರ್ಥ ಅಡ್ವಾನ್ಸ್÷್ಡ ಹಾರ್ಟ್ ಸೆಂಟರ್ ವೈದ್ಯರ ತಂಡ ಇನ್ನೊಂದು ಮೈಲಿಗಲ್ಲು ಸ್ಥಾಪಿಸಿದೆ ಎಂದು ಕಾರ್ಡಿಯಾಕ್ ಪ್ರಾಂಟೀಡಾ ಮತ್ತು ಸಿದ್ಧಾರ್ಥ ಅಡ್ವಾನ್ಸ್÷್ಡ ಹಾರ್ಟ್ ಸೆಂಟರ್ನ ನಿರ್ದೇಶಕರಾದ ಡಾ.ತಮೀಮ್ ಅಹಮ್ಮದ್ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ತುಮಕೂರು ಜಿಲ್ಲೇಯ ಚಿಕ್ಕನಾಯಕನಹಳ್ಳಿ ತಾಲೂಕಿನ ಪಂಕಜನಹಳ್ಳಿ ನಿವಾಸಿಯಾದ ಸವಿತಾ ಮತ್ತು ಮಲ್ಲಿಕಾರ್ಜುನ ಸ್ವಾಮಿ ಇವರಿಗೆ ಅಕಾಲಿಕವಾಗಿ ಜನಿಸಿದ ಹೆಣ್ಣು ಮಗುವು ಹುಟ್ಟಿನಿಂದಲೇ ಜನ್ಮಜಾತ ಹೃದಯರೋಗ (ಖಿಂPಗಿಅ) ಸಮಸ್ಯೆಯಿಂದ ಬಳಲುತ್ತಿತ್ತು. ಈ ಮಗುವಿಗೆ ಆಗಿರುವ ಹೃದಯ ಶಸ್ತçಚಿಕಿತ್ಸೆ ಅತೀ ಸೂಕ್ಷö್ಮವಾಗಿದ್ದು, ಶಸ್ತç ಚಿಕಿತ್ಸೆ ಯಶಸ್ವಿಯಾಗಿದೆ. ಹುಟ್ಟಿದಾಗ ೧.೪ಕಿ.ಗ್ರಾಂ ತೂಕವಿರುವ ಈ ಮಗುವು ಖರ್ಜೂರ ಗಾತ್ರದ ಹೃದಯವನ್ನು ತೆರೆದ ಹೃದಯ ಶಸ್ತçಚಿಕತ್ಸೆ ಮಾಡುವ ಮೂಲಕ ಮಗುವಿನ ಬಾಳಿಗೆ ಸಿದ್ಧಾರ್ಥ ಅಡ್ವಾನ್ಸ್÷್ಡ ಹಾರ್ಟ್ ಸೆಂಟರ್ ಬೆಳಕಾಗಿದೆ ಎಂದರು.
ವೈದ್ಯರ ತಂಡ :
ಸಿದ್ಧಾರ್ಥ ಅಡ್ವಾನ್ಸ್÷್ಡ ಹಾರ್ಟ್ಸೆಂಟರ್’ನ ಮೇಲ್ವಿಚಾರಕರಾದ ಹಾಗೂ “ಕಾರ್ಡಿಯಾಕ್ ಫ್ರಾಂಟಿಡಾ” ಸಂಸ್ಥೆಯ ನಿರ್ದೇಶಕ ಡಾ.ತಮೀಮ್ಅಹಮ್ಮದ್ ನೇತೃತ್ವದಲ್ಲಿ ಡಾ.ಅಮೀತ್ ಲಾಲ್, ಡಾ.ತಹೂರ್, ಡಾ.ಸುರೇಶ್, ಡಾ.ಶ್ರೀನಿವಾಸ್, ಡಾ.ಮಸ್ತಾನ್, ವಿವೇಕ್, ಕ್ರಿಸ್ಟೀನಾ ಹಾಗೂ ತಾಂತ್ರಿಕ ಸಿಬ್ಬಂದಿಗಳನ್ನು ಒಳಗೆÆಂಡ ತಂಡ ಸರ್ವಸನ್ನದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಹಾರ್ಟ್ ಸೆಂಟರ್ನ ಸಿಇಓ ಹಾಗೂ ಪ್ರಾಂಶುಪಾಲರಾದ ಡಾ.ಪ್ರಭಾಕರ್ ಅವರು ವಿವರಿಸಿದರು.
ಭಾರತದಿಂದ ವಿದೇಶಕ್ಕೆ ಹೋಗಿ ಶಸ್ತçಚಿಕಿತ್ಸೆ ಮಾಡಿಸಿಕೊಳ್ಳುವ ಬದಲಾಗಿ ತುಮಕೂರಿನಂತ ಪ್ರದೇಶದಲ್ಲಿಯೇ ಅಂತಾರಾಷ್ಟಿçÃಯ ಮಟ್ಟದ ವೈದ್ಯಕೀಯ ಸೌಲಭ್ಯ, ಆಧುನಿಕ ಉಪಕÀರಣಗಳ ಅಳವÀಡಿಕೆ, ನುರಿತ ತಜ್ಞ ವೈದ್ಯರತಂಡ ತುಮಕೂರಿನಂತಹ ಪ್ರದೇಶದಲ್ಲಿ ಇದ್ದು ಅತೀ ಸೂಕ್ಷö್ಮರೀತಿಯ ಹೃದಯ ಶಸ್ತçç ಚಿಕಿತ್ಸೆಗಳನ್ನು ಇಲ್ಲಿ ಯಶಸ್ವಿಯಾಗಿ ಮಾಡಲಾಗುತ್ತಿದೆ ಎಂಬುವುದನ್ನು ‘ಕಾರ್ಡಿಯಾಕ್ ಫ್ರಾಂಟಿಡಾ ಹಾಗೂ ಸಿದ್ಧಾರ್ಥ ಹಾರ್ಟ್ ಸೆಂಟರ್’ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರತಂಡ ಸಾಬೀತು ಪಡಿಸಿದೆ ಎಂದು ಡಾ. ಪ್ರಭಾಕರ ತಿಳಿಸಿದರು.
ಹೃದಯದ ಜನ್ಮಜಾತ ದೋಷ:
ಹೃದಯದÀ ಜನ್ಮ ಜಾತ ದೋಷ ರೋಗಕ್ಕೆ ತುತ್ತಾಗಿ ಜನಿಸಿದ ಮಗುವಿಗೆ ತಕ್ಷಣ ಶಸ್ತçಚಿಕಿತ್ಸೆ ಮಾಡಿ ಹೃದಯರೋಗ ಸರಿಪಡಿಸಿದರೆ, ಭವಿಷ್ಯದಲ್ಲಿ ಆರೋಗ್ಯವಂತ ಸಾಮಾನ್ಯ ವ್ಯಕ್ತಿಯಾಗಿ ಬೆಳೆಯಬಹುದು. ಹಣಕಾಸು, ಸೌಲಭ್ಯಗಳ ಕೊರತೆ ಮತ್ತು ಅಗತ್ಯವಿರುವ ವೈದ್ಯರ ಸಂಪರ್ಕದ ಕೊರತೆಯಿಂದ ಶಸ್ತçಚಿಕಿತ್ಸೆಯಿಂದ ದೂರ ಉಳಿದು ರೋಗ ಸರಿಪಡಿಸದಿದ್ದರೆ ರೋಗಿ ಬದುಕುಳಿಯುವುದಿಲ್ಲ ಎನ್ನುತ್ತಾರೆ ಸಿದ್ಧಾರ್ಥ ಅಡ್ವಾನ್ಸ್÷್ಡ ಹಾರ್ಟ್ ಸೆಂಟರ್ನ ನಿರ್ದೇಶಕರಾದ ಡಾ.ತಮೀಮ್ ಅಹಮ್ಮದ್ ಅವರು.
ಟೋಟಲ್ ಅನಾಮಲಸ್ ಪಲ್ಮನರಿ ವೇಯ್ನ್÷್ಸ ಕನೆಕ್ಷನ್ (ಖಿಂPಗಿಅ) ಹೃದಯದ ಜನ್ಮಜಾತ ದೋಷ ಹೊಂದಿರುವ ಮಗುವಿನ ಹೃದಯವು ಶ್ವಾಸಕೋಶಕ್ಕೆ ಸರಿಯಾಗಿ ಸಂಪರ್ಕ ಹೊಂದಿರುವುದಿಲ್ಲ. ಈ ಸಮಸ್ಯೆ ಹೊಂದಿರುವ ಮಗುವು ಆಕ್ಸಿಜನ್ ಮತ್ತು ರಕ್ತ ಸೇರ್ಪಡೆಯಾಗುತ್ತದೆ. ಖಿಂPಗಿಅ ಹೊಂದಿರುವ ಮಗುವಿನಲ್ಲಿ, ಆಮ್ಲಜನಕ-ಭರಿತ ರಕ್ತವು ಶ್ವಾಸಕೋಶದಿಂದ ಎಡ ಹೃತ್ಕರ್ಣಕ್ಕೆ ಹಿಂತಿರುಗುವುದಿಲ್ಲ. ಇದಕ್ಕೆ ಬದಲಾಗಿ, ಆಮ್ಲಜನಕ- ಶುದ್ಧ ರಕ್ತವು ಹೃದಯದ ಬಲಭಾಗಕ್ಕೆ ಮರಳುತ್ತದೆ. ಆಗ ಆಮ್ಲಜನಕ-ಶುದ್ಧ ರಕ್ತವು ಆಮ್ಲಜನಕದ ಅಶುದ್ಧ ರಕ್ತದೊಂದಿಗೆ ಬೆರೆÉಯುತ್ತದೆ. ಇದರಿಂದ ಮಗುವಿನ ದೇಹಕ್ಕೆ ಅಗತ್ಯಕ್ಕಿಂತ ಕಡಿಮೆ ಆಮ್ಲಜನಕ ಪೂರೈಕೆಯಾಗುತ್ತದೆ ಎಂದು ೩೦ ದಿನದ ಹೆಣ್ಣು ಮಗುವಿನ ಸಮಸ್ಯೆಯನ್ನು ಡಾ.ತಮೀಮ್ ಅಹಮ್ಮದ್ ವಿವರಿಸಿದರು.
. ಈ ದೋಷದೊಂದಿಗೆ ಬದುಕಲು ಸಾಧ್ಯವಿಲ್ಲ. ಖಿಂPಗಿಅ ಹೊಂದಿರುವ ಶಿಶುಗಳು ಸಾಮಾನ್ಯವಾಗಿ ಬಲºÈÀತ್ಕರ್ಣ ಮತ್ತು ಎಡ ಹೃತ್ಕರ್ಣದ ನಡುವೆ ರಂಧ್ರವನ್ನು ಹೊಂದಿರುತ್ತವೆ. (ಹೃತ್ಕರ್ಣದ ಸೆಪ್ಟಲ್ ದೋಷ) ಇದು ಅಶುದ್ಧ ರಕ್ತವನ್ನು ಹೃದಯದ ಎಡಭಾಗಕ್ಕೆ ಮತ್ತು ದೇಹದ ಉಳಿದ ಭಾಗಗಳಿಗೆ ಪಂಪ್ ಮಾಡುತ್ತದೆ. ಕೆಲವು ಮಕ್ಕಳು ಹೃತ್ಕರ್ಣದ ಸೆಪ್ಟಲ್ ದೋಷವನ್ನು ಹೊರತುಪಡಿಸಿ ಖಿಂPಗಿಅ ಜೊತೆಗೆ ಇತರ ಹೃದಯ ದೋಷಗಳನ್ನು ಹೊಂದಿರಬಹುದು. ಈ ಸಮಸ್ಯೆಯಿಂದ ಬಳಲುವ ಜನ್ಮಜಾತ ಮಗುವಿನ ಚರ್ಮ, ತುಟಿ ಹಾಗೂ ಉಗುರುಗಳು ನೀಲಿ ಬಣ್ಣಕ್ಕೆ ತಿರುಗುತ್ತದೆ. ಜೊತೆಗೆ ಉಸಿರಾಟದ ಸಮಸ್ಯೆ, ಸುಸ್ತು ಮತ್ತು ಸರಿಯಾಗಿ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಇಂತಹ ಗಂಭೀರ ಸಮಸ್ಯೆ ಎದುರಿಸಿದ ಮಗುವಿಗೆ ಶಸ್ತçಚಿಕಿತ್ಸೆ ಮೂಲಕ ಮುಕ್ತಿ ನೀಡಲಾಗಿದೆ. ಆಕೆ ಭವಿಷ್ಯದ ಬದುಕು ಕಾಣಬಹುದಾಗಿದೆ ಎಂದು ಡಾ.ತಮೀಮ್ ಅಹಮ್ಮದ್ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಾಹೇ ವಿಶ್ವ ವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ ಲಿಂಗೇಗೌಡ, ರಿಜಿಸ್ಟಾçರ್ ಡಾ. ಎಂ.ಝೆಡ್ ಕುರಿಯನ್, ಡಾ.ಅಶೋಕ, ಹೆಣ್ಣುಶಿಶುವಿನ ಪೋಷಕರಾದ ಮಲ್ಲಿಕಾರ್ಜುನ ಸ್ವಾಮಿ ಅವರು ಪತ್ರಿಕಾ ಗೋಷ್ಠಿಯಲ್ಲಿ ಭಾಗಿಯಾಗಿದ್ದರು.