ತುಮಕೂರು- ಸಿದ್ದಗಂಗಾ ಮಠ ಒಳ್ಳೆಯ ಕೆಲಸಗಳಿಗೆ ಸ್ಪೂರ್ತಿ ನೀಡುವಂತಹ ಮಠ. ಹಾಗಾಗಿಯೇ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದು ನನ್ನ ಶಾಸಕ ಜವಾಬ್ದಾರಿಯನ್ನು ಇಂದಿನಿAದ ಆರಂಭಿಸುತ್ತಿದ್ದೇನೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶಗೌಡ ತಿಳಿಸಿದರು.
ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಹಿರಿಯ ಶ್ರೀಗಳಾದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ಪೂಜೆ ಸಲ್ಲಿಸಿ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ೨೦೦೮ರಲ್ಲಿ ಶಾಸಕನಾಗಿ ಆಯ್ಕೆಯಾದ ಸಂದರ್ಭದಲ್ಲಿಯೂ ಡಾ. ಶ್ರೀ ಶಿವಕುಮಾರಸ್ವಾಮಿಜೀಗಳ ಆಶೀರ್ವಾದ ಪಡೆದು ಕೆಲಸ ಆರಂಭಿಸಿದ್ದೆ. ಈಗಲೂ ಕೂಡ ಅದೇ ಕೆಲಸವನ್ನು ಮುಂದುವರೆಸಿದ್ದೇನೆ ಎಂದರು.
ಸಿದ್ದಗAಗಾ ಮಠದ ಆಶೀರ್ವಾದಿಂದ ೨೦೦೮ ಮತ್ತು ೨೦೧೩ ರಲ್ಲಿ ಶಾಸಕನಾಗಿ ಆಯ್ಕೆಯಾಗಲು ಅವಕಾಶವಾಯಿತು. ಆ ವೇಳೆ ಕ್ಷೇತ್ರದ ಜನರು ಬಹುದಿನದ ಬೇಡಿಕೆಯಾಗಿದ್ದ ಹೆಬ್ಬೂರು-ಗೂಳೂರು ಏತನೀರಾವರಿ ಜಾರಿ, ಶಾಲೆಗಳ ಅಭಿವೃದ್ದಿ, ರೈತರಿಗೆ ನಿರಂತರ ವಿದ್ಯುತ್ ಹೀಗೆ, ಹತ್ತು ಹಲವು ಅಭಿವೃದ್ದಿ ಕಾರ್ಯಕ್ರಮಗಳನ್ನು ಕ್ಷೇತ್ರದಲ್ಲಿ ನಡೆಸಲು ಸಹಕಾರಿಯಾಯಿತು. ಇದಕ್ಕೆಲ್ಲಾ ಸ್ಫೂರ್ತಿ ನೀಡಿದ್ದು ಸಿದ್ದಗಂಗಾ ಮಠ ಎಂದರು.




