ತುಮಕೂರು: ರಾಷ್ಟçದಲ್ಲಿ ಉನ್ನತ ಶಿಕ್ಷಣ ಮಟ್ಟದಲ್ಲಿ ಹೆಸರು ಪಡೆದಿರುವ ನಗರದ ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಸಾಹೇ) ವಿಶ್ವವಿದ್ಯಾಲಯಕ್ಕೆ ನ್ಯಾಕ್ (ರಾಷ್ಟಿçÃಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ) ಂ+ ಶ್ರೇಣಿ ಮಾನ್ಯತೆ ದೊರೆತಿದೆ. ಈ ಮೌಲ್ಯಮಾಪನ ಮುಂದಿನ ೫ ವರ್ಷಗಳಿಗೆ ಅನ್ವಯವಾಗಲಿದೆ.
ಇತ್ತೀಚೆಗೆ (ಜುಲೈ ೩೧ರಿಂದ ಆಗಸ್ಟ್ ೨ರವರೆಗೆ) ನ್ಯಾಕ್ (ರಾಷ್ಟಿçÃಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ) ಭೇಟಿ ನೀಡಿತ್ತು. ನ್ಯಾಕ್ ಂ+ ಶ್ರೇಣಿ ನೀಡಿದ ಪ್ರಯುಕ್ತ ಸಾಹೇ ವಿವಿ ಕುಲಾಧಿಪತಿ ಡಾ.ಜಿ.ಪರಮೇಶ್ವರ ಅವರು ಎಲ್ಲಾ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಭೋದಕ ಮತ್ತು ಭೋದಕೇತರರಿಗೆ ಅಭಿನಂದನೆ ಸಲ್ಲಿಸಿದರು.
ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ಶಿಕ್ಷಣ ಗುಣಮಟ್ಟದ ಬಗ್ಗೆ ಮಾನ್ಯತೆ ನೀಡುವ ಈ ಮಂಡಳಿಯು, ಮೂರು ದಿನಗಳ ಭೇಟಿಯಲ್ಲಿ, ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಸಾಹೇ) ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಶ್ರೀ ಸಿದ್ಧಾರ್ಥ ವೈದ್ಯಕೀಯ, ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮತ್ತು ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
ಇದೇ ಸಂದರ್ಬದಲ್ಲಿ ಅವರು ತುಮಕೂರಿನಂತಹ ಗ್ರಾಮೀಣ ಪ್ರದೇಶದಲ್ಲಿ ಬಡ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ವಿದ್ಯಾಭ್ಯಾಸ ಅದರಲ್ಲಿಯೂ ಎಲ್ಲಾ ಆಧುನಿಕ ಸೌಲಭ್ಯಗಳೊಂದಿಗೆ ನೀಡುತ್ತಿರುವ ಸಾಹೇ ವಿಶ್ವವಿದ್ಯಾಲಯಕ್ಕೆ ನ್ಯಾಕ್ ಂ+ ಶ್ರೇಣಿ ಬಂದಿರುವುದು ಮತ್ತೊಂದು ಗರಿ. ಸಮಾಜದ ಕಟ್ಟೆಕಡೆಯ ವ್ಯಕ್ತಿಗೂ ಉನ್ನತ ಶಿಕ್ಷಣ ಸಿಗಬೇಕು ಎಂಬುದು ನನ್ನ ತಂದೆ ಶಿಕ್ಷಣ ಶಿಲ್ಪಿ ಡಾ.ಎಚ್.ಎಂ.ಗAಗಾಧರಯ್ಯ ಮತ್ತು ನನ್ನ ಸಹೋದರ ಡಾ.ಜಿ.ಶಿವಪ್ರಸಾದ್ ಅವರ ಕನಸಾಗಿತ್ತು. ಆ ನಿಟ್ಟಿನಲ್ಲಿಯೇ ಮುಂದೆ ಸಾಗುತ್ತಿದ್ದೇವೆ ಎಂದು ಡಾ.ಜಿ.ಪರಮೇಶ್ವರ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಸಾಹೇ ವಿಶ್ವವಿದ್ಯಾಲಯ ನ್ಯಾಕ್ ಂ+ ಶ್ರೇಣಿ ಮಾನ್ಯತೆ ಪಡೆದಿರುವುದು ಸಂತಸ. ಭಾರತದಾದ್ಯಂತ ಕೇವಲ ೩೬ ಸಂಸ್ಥೆಗಳು ನ್ಯಾಕ್ ಂ+ ಶ್ರೇಣಿ ಪಡೆದಿವೆ. ಅದರಲ್ಲಿ ಸಾಹೇ ವಿಶ್ವವಿದ್ಯಾಲಯ ಇರುವುದು ಸಂತಸದ ವಿಷಯ. ಪ್ರಾಧ್ಯಾಪಕರು ಮತ್ತು ಉಪನ್ಯಾಸಕರು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು. ಮುಂದಿನ ವರ್ಷಗಳಿಗೆ ಬೇಕಿರುವ ಇನ್ನೂ ಉನ್ನತೀಕರಣ ಮಾನ್ಯತೆಗೆ ಎಲ್ಲಾ ಅರ್ಹ ಮಾಹಿತಿಯನ್ನು ಈಗಿನಿಂದಲೇ ದಾಖಲೆ ಮಾಡಬೇಕು. ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಸಾಹೇ ವಿವಿ ಕುಲಾಧಿಪತಿ ಡಾ.ಜಿ.ಪರಮೇಶ್ವರ ಅವರು ಎಲ್ಲಾ ಪ್ರಾಧ್ಯಾಪಕರಿಗೆ ಸಲಹೆ ನೀಡಿದರು.
ರಾಷ್ಟಿçÃಯ ಮತ್ತು ಅಂತಾರಾಷ್ಟಿçÃಯ ಮಟ್ಟದಲ್ಲಿ ಸಂಶೋಧನಾ ಲೇಖನಗಳು, ಕಾರ್ಯಾಗಾರಗಳು, ಸಮ್ಮೇಳನಗಳಿಗೆ ಉಪನ್ಯಾಸಕರು ಭಾಗವಹಿಸಬೇಕು. ಇತ್ತೀಚಿನ ತಾಂತ್ರಿಕ ಆವಿಷ್ಕಾರಗಳು ಹಾಗೂ ಮಾಹಿತಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯಕ್ಷರು ಸೇರಿದಂತೆ ಹೊರ ರಾಜ್ಯಗಳಿಂದ ಬಂದಿದ್ದ ಆರು ಪರಿಣಿತರನ್ನು ಒಳಗೊಂಡ ತಂಡವು ವಿಶ್ವವಿದ್ಯಾಲಯ ಹಾಗೂ ಅದರ ಅದರ ಅಂಗ ಸಂಸ್ಥೆಗಳಿಗೆಲ್ಲಕ್ಕೂ ಭೇಟಿ ನೀಡಿ, ಶೈಕ್ಷಣಿಕ ಚಟುವಟಿಕೆಗಳು, ಕಾಲೇಜು ಮತ್ತು ಆಸ್ಪತ್ರೆಯಲ್ಲಿರುವ ಪ್ರಯೋಗಾಲಯ ಮತ್ತು ಅಗತ್ಯ ಇರುವ ಎಲ್ಲಾ ಸೌಲಭ್ಯಗಳನ್ನೂ ಪರಿಶೀಲಿಸಿತ್ತು. ಈ ವೇಳೆ, ವಿವಿಧ ವಿದ್ಯಾಲಯಗಳ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರಿಂದ ವೈದ್ಯಕೀಯ, ತಾಂತ್ರಿಕ ಶಿಕ್ಷಣದ ಕೌಶಲ್ಯ, ಶೈಕ್ಷಣಿಕ ಪ್ರಗತಿ, ಸಂಶೋಧನಾ ಮತ್ತು ಅಭಿವೃದ್ಧಿ ಯೋಜನೆಗಳ ಬಗ್ಗೆ ಕೂಲಂಕುಷ ಮಾಹಿತಿ ಪಡೆದರು. ವಿದ್ಯಾರ್ಥಿಗಳು, ಪೋಷಕರು ಹಳೆಯ ವಿದ್ಯಾರ್ಥಿಗಳು ಹಾಗೂ ನೌಕರ ವರ್ಗದವರೊಂದಿಗೆ ಸಂವಾದ ನಡೆಸಿ ಕಾಲೇಜುಗಳಲ್ಲಿ ಸಿಗುತ್ತಿರುವ ಶಿಕ್ಷಣ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ಪ್ರತಿಕ್ರಿಯೆ ಪಡೆದಿದ್ದರು.
ಸಾಹೇ ವಿಶ್ವವಿದ್ಯಾಲಯದಲ್ಲಿರುವ ಸೌಲಭ್ಯಗಳು ಮತ್ತು ಆಡಳಿತ ವ್ಯವಸ್ಥೆಗೆ ಸಂಬAಧಪಟ್ಟ ದಾಖಲೆಗಳು, ಡಿಜಿಟಲ್ ಲೈಬ್ರರಿ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಹಾಸ್ಟೆಲ್, ಕ್ರೀಡಾ ಸಮುಚ್ಛಯ, ಆರೋಗ್ಯ ಕೇಂದ್ರ, ಸಮುದಾಯ ರೇಡಿಯೋ, ಟೆಲಿವಿಷನ್ ಸ್ಟುಡಿಯೋ ಸೇರಿದಂತೆ ಎಲ್ಲಾ ಮುಖ್ಯ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ, ನಿರ್ವಹಣೆ ಹಾಗೂ ಪ್ರತಿ ಹಂತದ ಶೈಕ್ಷಣಿಕ ಪ್ರಗತಿಗಳನ್ನು ಪರಿಶೀಲಿಸಿದ್ದರು.
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ, ನುರಿತ ಪ್ರಾಧ್ಯಾಪಕರು, ಸಂಶೋಧಕರು, ಡಿಜಿಟಲ್ ಲೈಬ್ರರಿ, ವೈಫೈ ಕ್ಯಾಂಪಸ್ ಸೇರಿದಂತೆ ಉತ್ತಮ ಸೌಲಭ್ಯ, ಕಲಿಕಾ ಬೋಧನೆ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಜೊತೆಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗುತ್ತಿದೆ. ಉತ್ತಮ ತಾಂತ್ರಿಕ ಕಲಿಕಾ ಬೋಧನೆ ಮೂಲಕ ವಿದ್ಯಾರ್ಥಿಗಳಿಗೆ ನೆರವಾಗುತ್ತಿರುವುದರ ಬಗ್ಗೆಯು ನ್ಯಾಕ್ ತಂಡಕ್ಕೆ ಮಾಹಿತಿ ನೀಡಲಾಗಿತ್ತು.
ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ ಬಿ. ಲಿಂಗೇಗೌಡ, ರಿಜಿಸ್ಟಾçರ್ ಡಾ.ಎಂ.ಝೆಡ್ ಕುರಿಯನ್, ಸಾಹೇ ಕುಲಾಧಿಪತಿಗಳ ಸಲಹೆಗಾರರಾದ ಪ್ರೊ. ವಿವೇಕ್ ವೀರಯ್ಯ, ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಬಿ.ಸಾಣಿಕೊಪ್ಪ, ಶ್ರೀ ಸಿದ್ಧಾರ್ಥ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ ಪ್ರವೀಣ್ ಬಿ ಕುಡ್ವ, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ.ಎಸ್. ರವಿಪ್ರಕಾಶ, ಸಾಹೇ ವಿಶ್ವವಿದ್ಯಾಲಯದ ಅಂಗ ಸಂಸ್ಥೆಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು ಮತ್ತು ತಂಡದವರು ಅಗತ್ಯವಾದ ಎಲ್ಲಾ ಮಾಹಿತಿಯನ್ನು ನ್ಯಾಕ್ ತಂಡಕ್ಕೆ ಒದಗಿಸಿದರು.