ತುಮಕೂರು:ಶಿವನಲ್ಲಿ ಅಪಾರ ಭಕ್ತಿ ಉಳ್ಳವರಾಗಿದ್ದ ಶಿವಶರಣ ದೇವರ ದಾಸಿಮಯ್ಯ ಅವರು ಸಾರಿದ ಸರಳ ಮತ್ತು ಪಾರದರ್ಶಕ ಜೀವನ ನಮ್ಮದಾಗಬೇಕು ಎಂದು ತುಮಕೂರು ತಾಲೂಕು ತಹಶೀಲ್ದಾರ್ ರಾಜೇಶ್ವರಿ ಅಭಿಪ್ರಾಯಪಟ್ಟಿದ್ದಾರೆ.ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ನಗರಪಾಲಿಕೆ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ನೇಕಾರ ಸಮುದಾಯಗಳಾದ ದೇವಾಂಗ, ಕುರುಹೀನಶೆಟ್ಟಿ,ತೋಗಟವೀರಪದ್ಮಶಾಲಿ ಸಂಘಗಳ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀದೇವರ ದಾಸಿಮಯ್ಯನವರ ಜಯಂತಿ ಕಾರ್ಯಕ್ರಮ