ತುಮಕೂರು- ದೇಶದಲ್ಲಿ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ರಾಷ್ಟಿçÃಯ ಸಹ ಸಂಚಾಲಕರು ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ನಗರದ ಸಿದ್ದಿವಿನಾಯಕ ಸಮುದಾಯ ಭವನದಲ್ಲಿ ಬಿಜೆಪಿ ವತಿಯಿಂದ ನಡೆದ ರಾಜ್ಯಮಟ್ಟದ ಶಕ್ತಿ ವಂದನಾ ಅಭಿಯಾನ ಹಾಗೂ ಮಹಿಳಾ ಸ್ವಸಹಾಯ ಸಂಘ ಎನ್ಜಿಓ ಸಂಪರ್ಕ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಸ್ವಾತಂತ್ರ÷್ಯವಾಗಿ 77 ವರ್ಷಗಳಾಗಿವೆ. ಅದರಲ್ಲಿ 67 ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ನಂತರ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ನಿಜವಾದ ಅಭಿವೃದ್ಧಿಯನ್ನು ನೋಡಿದೆವು. ತದ ನಂತರ ಅಭಿವೃದ್ಧಿ ಮುಂದುವರೆಯಲಿಲ್ಲ. ಈಗ ಮತ್ತೆ ಕಳೆದ 9 ವರ್ಷಗಳಿಂದ ದೇಶದಲ್ಲಿ ಅಭಿವೃದ್ದಿ ಪರ್ವ ಸೃಷ್ಠಿಯಾಗಿದೆ ಎಂದರು.
ನಮ್ಮ ದೇಶದ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿಯವರು ಸ್ವಾಮಿ ವಿವೇಕಾನಂದರ ಪುನರ್ ಜನ್ಮವಾಗಿ ನಮ್ಮ ನಡುವೆ ಇದ್ದಾರೆ. ಇಂತಹ ದೈವಿಪುರುಷನನ್ನು ಮತ್ತೆ ದೇಶದ ಪ್ರಧಾನಿಯನ್ನಾಗಿ ಮಾಡಲು ನಾವೆಲ್ಲರೂ ಪಣ ತೊಡಬೇಕು ಎಂದು ಅವರು ಕರೆ ನೀಡಿದರು.
ಪ್ರಸ್ತುತ 9-10 ವರ್ಷಗಳಿಂದ ಪ್ರಧಾನಿ ನರೇಂದರ ಮೋದಿಯವರ ನೇತೃತ್ವದಲ್ಲಿ ನಮ್ಮ ದೇಶ ಪ್ರಗತಿಯ ಪಥದಲ್ಲಿ ಸಾಗುತ್ತಿದೆ. ನರೇಂದ್ರ ಮೋದಿಯವರ ಸರ್ಕಾರದಲ್ಲಿ ದೇಶ ಬದಲಾವಣೆ ಕಂಡಿದೆ ಎಂದರು.
ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾದ ಜ. 22 ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ದಿನ. 500 ವರ್ಷಗಳ ಕನಸು ಪ್ರಧಾನಿಗಳ ನೇತೃತ್ವದಲ್ಲಿ ನನಸಾಯಿತು. ಈ ಅಭೂತಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳಬೇಕು ಎನ್ನುವ ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದ ಲಕ್ಷಾಂತರ ಜನ ಇಂದು ನಮ್ಮೊಂದಿಗೆ ಇಲ್ಲ. ಆ ಕ್ಷಣವನ್ನು ನಾವೆಲ್ಲಾ ಕಣ್ತುಂಬಿಕೊAಡು ಆನಂದಿಸಿದೆವು ಎಂದ ಅವರು, ಇಡೀ ವಿಶ್ವದಲ್ಲೇ ಜೈಶ್ರೀರಾಮ್ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದು ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ವಿಶ್ವಮಾನ್ಯ ಸಾಧನೆ ಎಂದರು.
ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗುವ ಯೋಜನೆ, ದೇಶದ ಸುರಕ್ಷತೆ, ರೈತರ ಹಿತ, ಯುವಕರಿಗೆ ಉದ್ಯೋಗಾವಕಾಶ ಯೋಜನೆ, ರೈಲುಗಳು, ವಿಮಾನ ನಿಲ್ದಾಣಗಳು, ರಸ್ತೆಗಳು, ಜಲಜೀವನ್ ಮಿಷನ್, ಹೆಣ್ಣು ಮಕ್ಕಳ ಹೆಸರಿನಲ್ಲಿ ಮನೆಗಳ ಉಚಿತ ನಿರ್ಮಾಣ, ಉಜ್ವಲ್ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಪ್ರಧಾನಿಗಳು ನೀಡಿದ್ದಾರೆ ಎಂದರು.
ನಾವೆಲ್ಲರೂ ಕೆಲಸ ಕಾರ್ಯಗಳನ್ನು ನಮ್ಮ ಮಕ್ಕಳು, ಕುಟುಂಬಕ್ಕೋಸ್ಕರ ಮಾಡುತ್ತೇವೆ. ಆದರೆ ಪ್ರಧಾನಿಗಳಿಗೆ ಯಾವುದೇ ಕುಟುಂಬ ಇಲ್ಲ. ಅವರು ಹಗಲಿರುಳು ಸೇವೆ ಮಾಡುತ್ತಿರುವುದು ದೇಶದ ಜನರಿಗೋಸ್ಕರ. ಭಾರತ ಮಾತೆಯನ್ನು ವಿಶ್ವದ ಗುರುವಿನ ಸಿಂಹಾನಸದ ಮೇಲೆ ರಾರಾಜಿಸುವಂತೆ ಮಾಡುವ ಕಾಲ ಸಮೀಪಿಸುತ್ತಿದೆ ಎಂದು ಅವರು ಹೇಳಿದರು.
ಒಬ್ಬರಿಗೊಬ್ಬರು ಅನ್ಯೋನ್ಯತೆಯಿಂದ ಇದ್ದರೆ ಮಾತ್ರ ಸಮಾಜ ಸಮೃದ್ಧಿಯಿಂದ ಇರಲು ಸಾಧ್ಯ. ಎಲ್ಲಿ ನಾರಿಯರಿಗೆ ಗೌರವ ಸಿಗುತ್ತದೆಯೋ ಅಲ್ಲಿ ಯಾವುದೂ ಕಡಿಮೆಯಾಗುವುದಿಲ್ಲ. ಮಹಿಳೆಯರು ಸಬಲರಾಗಬೇಕು. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕು ಎಂಬ ಉದ್ದೇಶದಿಂದ ಶಕ್ತಿ ವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಶಕ್ತಿ ವಂದನಾ ಕಾರ್ಯಕ್ರಮ
Leave a comment
Leave a comment