ತುಮಕೂರು:ಇತ್ತೀಚಿನ ದಿನಗಳಲ್ಲಿ ದ್ವಿತಳಿ ರೇಷ್ಮೆ ಉತ್ಪಾಧನೆಯಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಿ ಇಂದು ರೇಷ್ಮೆ ಇಲಾಖೆಯ ಉಪನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ರೇಷ್ಮೆ ಚಾಕಿ ಹುಳು ಸಾಕಾಣಿಕೆದಾರರು,ರೇಷ್ಮೆ ಬೆಳೆಗಾರರು ಮತ್ತು ವಿಜ್ಞಾನಿಗಳು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೇಷ್ಮೆ ಇಲಾಖೆಯ ಉಪನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣಪ್ಪ,ಇತ್ತೀಚಿನ ದಿನಗಳಲ್ಲಿ ಬೈವೊಲ್ಟಿನ್ ರೇಷ್ಮೆ ಗೂಡು ಉತ್ಪಾಧನೆಯಲ್ಲಿ ರೈತರು ಮತ್ತು ಚಾಕಿ ಸಾಕಾಣಿಕಾ ಕೇಂದ್ರಗಳ ಮಾಲೀಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಮಾವಾನ ವೈಫರಿತ್ಯದ ಪರಿಣಾಮ ಹಲವು ಸಮಸ್ಯೆಗಳು ತಲೆದೊರಿವೆ.ಇದರಿಂದ ಹೊರ ಬರಲು ಏನು ಮಾಡಬೇಕು ಎಂಬ ನಿಟ್ಟಿನಲ್ಲಿ ಇಲಾಖೆಯ ಇಬ್ಬರು ಹಿರಿಯ ವಿಜ್ಞಾನಿಗಳು ರೈತರೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿ, ಕೈಗೊಳ್ಳಬೇಕಾದ ಕ್ರಮಗಳು, ಕೀಟನಾಟಕ ಸಿಂಪರಣೆ,ರೇಷ್ಮೆ ಗೂಡು ನಿರ್ವಹಣೆ ಕುರಿತಂತೆ ರೈತರ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ ಎಂದರು.
ಕೇoದ್ರ ರೇಷ್ಮೆ ಮಂಡಳಿ ವಿಜ್ಞಾನಿಗಳಾದ ಡಾ.ಮುತ್ತುಲಕ್ಷ್ಮೀ ಅವರು,ರೇಷ್ಮೆ ಬೆಳೆಯ ನಿಯಮಗಳು ಮತ್ತು ಅವುಗಳನ್ನು ಪಾಲಿಸುವುದರಿಂದ ಚಾಕಿ ಸಾಕಾಣಿಕೆದಾರರಿಗೆ ಆಗುವ ಅನುಕೂಲಗಳ ಬಗ್ಗೆ ತಿಳಿಸಿಕೊಟ್ಟರೆ, ಮತ್ತೋಮೆ ವಿಜ್ಞಾನಿ ಮತ್ತು ಡಾ.ಕುಲಕರ್ಣಿ ಅವರು,ಚಾಕಿ ಸಾಕಾಣಿಕಾ ಕೇಂದ್ರಗಳ ಮಾಲೀಕರು ದ್ವಿತಳಿ ರೇಷ್ಮೆ ಸಾಕಾಣಿಕೆಯಲ್ಲಿ ಯಾವೆಲ್ಲಾ ಕ್ರಮಗಳನ್ನು ಅನುಸರಿಸಿದರೆ ಈಗಿರುವ ಸಮಸ್ಯೆಯಿಂದ ಹೊರಬರಬಹುದು ಎಂಬುದನ್ನು ತಿಳಿಸಿಕೊಟ್ಟರು.
ರೇಷ್ಮೆ ಇಲಾಖೆಯ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು, ಚಾಕಿ ಸಾಕಾಣಿಕಾ ಕೇಂದ್ರದ ಮಾಲೀಕರು, ರೇಷ್ಮೆ ಬೆಳೆಗಾರರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ರೇಷ್ಮೆ ಬೆಳೆಗಾರರು ಮತ್ತು ವಿಜ್ಞಾನಿಗಳು ಸಂವಾದ ಕಾರ್ಯಕ್ರಮ
Leave a comment
Leave a comment