ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಮತ್ತು ಸಂಘಮಿತ್ರ ಸ್ಲಂ ನಿವಾಸಿಗಳ ಸೌಹಾರ್ದ ಸಹಕಾರ ಸಂಘದಿAದ ಅಕ್ಷರದವ್ವ ಸಾವಿತ್ರಿ ಬಾಯಿಪುಲೆ ಅವರ 193ನೇ ಜಯಂತಿಯನ್ನು ನಗರ ವಂಚಿತ ಯುವಜನ ಸಂಪನ್ಮೂಲ ಕೇಂದ್ರದಲ್ಲಿ ಆಚರಿಸಲಾಯಿತು.
ಸಂಘಮಿತ್ರ ಸ್ಲಂ ನಿವಾಸಿಗಳ ಸೌಹಾರ್ದ ಸಹಕಾರ ಸಂಘದ ನಿರ್ದೇಶಕರಾದ ಅನುಪಮ ಮತನಾಡಿ ಅಸ್ಪೃಶ್ಯರ ಕೇರಿಗಳಲ್ಲಿ ಅಕ್ಷರದ ಕ್ರಾಂತಿಯ ಜ್ಯೋತಿಯನ್ನು ಹಚ್ಚುವ ಮೂಲಕ ದೇಶದ ಮೊಟ್ಟ ಮೊದಲ ಶಿಕ್ಷಕಿಯಾಗಿ ಮಹಿಳೆಯರಿಗೆ ಬಿಡುಗಡೆಯ ದಾರಿಯನ್ನು ತೋರಿ ಮರು ಹುಟ್ಟು ನೀಡಿದ ಸಾವಿತ್ರಿ ನಮ್ಮೆಲ್ಲರ ಸ್ವಾಭಿಮಾನ ಅಕ್ಷರಗಳ ಚರಿತ್ರೆಯ ಪುಟಗಳಲ್ಲಿ ಅಕ್ಷರವನ್ನು ಮುಟ್ಟಬಾರದವರಿಂದ ಮುಟ್ಟಿಸಿ ಅಂದಕಾರದಲ್ಲಿದ್ದ ಈ ದೇಶದ ಪೂರೋಹಿತ ಶಾಹಿಗಳಿಗೆ ಕಣ್ಣು ತೆರಸಿ ವೈದ್ಧಿಕ ಶಾಸ್ತçಗಳಿಂದ ಹೆಣ್ಣು ಮಕ್ಕಳ ಮೇಲೆ ಪುರುಷ ಪ್ರಧಾನ ದೌರ್ಜನ್ಯವನ್ನು ಮೆಟ್ಟಿನಿಲ್ಲಲು ಸತ್ಯ ಶೋಧಕ ಸಮಾಜವನ್ನು ಕಟ್ಟಿ ಅಧುನಿಕ ಭಾರತದ ವಿಮೋಚಕಿಯಾಗಿ ಸಾವಿತ್ರಿ ಬಾಪುಲೆ ಅವರನ್ನು ಸ್ಮರಿಸಬೇಕು. ಪುಲೆ ದಂಪತಿಗಳ ಬದುಕು ಮತ್ತು ಬದ್ಧತೆ 19ನೇ ಶತಮಾನದ ವಿಶಿಷ್ಟವಾದ ಸಾಮಾಜಿಕ ಕ್ರಾಂತಿಯಾಗಿದೆ. 1860ರಲ್ಲಿ ವಿಧವೆಯರ ತಲೆಬೋಲಿಸುವುದನ್ನು ವಿರೋಧಿಸಲು ಕ್ಷೌರಿಕರನ್ನು ಸಂಘಟಿಸಿದರು. ಅಂತರ್ ಜಾತಿ ಪ್ರೇಮ ವಿವಾಹಕ್ಕೆ, ವಿಧವ ಮರು ವಿವಾಹದ ಬಗ್ಗೆ ಅರಿವು ಮೂಡಿಸಿ, ವೇಶ್ಯರು, ವಿಧವೆಯರ ಮಕ್ಕಳಿಗೆ ಆಸರೆ ನೀಡುವ ಬಾಲ ಮಂದಿರಗಳನ್ನು ತೆರದು ಮಾನಸಿಕ ಪರಿವರ್ತನೆಗೆ ಮಹತ್ವದ ಪಾತ್ರ ವಹಿಸಿದರು. 19ನೇ ಶತಮಾನದಲ್ಲಿ ನಡೆದ ಈ ಸಾಮಾಜಿಕ ಬದಲಾವಣೆಯನ್ನು ಇಂದು ಸರ್ಕಾರಗಳು ತಮ್ಮ ಯೋಜನೆಗಳನ್ನಾಗಿ ಜಾರಿಗೆ ತರುತ್ತಿವೆ. ಈ ಎಲ್ಲಾ ಆಯಾಮದಲ್ಲಿ ಸ್ಲಂ ಜನರ ಅಸ್ಪೃಶ್ಯರ, ಮಹಿಳೆಯ ಕೇರಿಗಳ ಸ್ವಾಭಿಮಾನವಾಗಿ ಸಾವಿತ್ರಿ ಬಾಯಿಪುಲೆ ಮಹತ್ವದ ಸ್ಪೂರ್ತಿ ನೀಡಿದ್ದಾರೆ ಎಂದರು.