ವ್ಯಕ್ತಿತ್ವ ವಿಕಸನದ ಮೂಲಕ ತಮ್ಮತನದ ಅರಿವು ಸಾಧ್ಯ: ಎನ್.ಬಿ. ಪ್ರದೀಪ್ ಕುಮಾರ್
ಹದಿವಯಸ್ಸಿನಲ್ಲಿ ಹಲವಾರು ಬಗೆಯ ಗೊಂದಲಗಳು ಮನಸ್ಸಿನಲ್ಲಿರುವುದು ಸಹಜ. ಅದನ್ನೆಲ್ಲವನ್ನೂ ಮೀರಿ ಗೆಲ್ಲಬೇಕು. ನಿಮ್ಮೊಳಗೆ ಶ್ರದ್ಧಾಭಕ್ತಿಗಳಿದ್ದಾಗ ಯಾವ ಹಂತಕ್ಕಾದರೂ ಏರಬಹುದು ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್ ಬಿ ಪ್ರದೀಪ್ ಕುಮಾರ್ ಹೇಳಿದರು.
ಅವರು ವಿದ್ಯಾನಿಧಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ಉದ್ಘಾಟಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸಿಕೊಟ್ಟಲ್ಲಿ ಅವರು ತಮ್ಮ ಯಶಸ್ಸಿನ ಗುರಿಯನ್ನು ಏರುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸುಪ್ತವಾದ ಪ್ರತಿಭೆ ಇದ್ದೇ ಇರುತ್ತದೆ. ತಮ್ಮ ಕೌಶಲಗಳೇನು ಎಂಬುದನ್ನು ಮಕ್ಕಳು ತಿಳಿದುಕೊಂಡು ಅದರಲ್ಲಿ ಪರಿಣತಿಯನ್ನು ಸಾಧಿಸುವಂತಾಗಬೇಕು. ವ್ಯಕ್ತಿತ್ವ ವಿಕಸನ ಕಾರ್ಯಾಗಾರದ ಮೂಲಕ ಮಕ್ಕಳು ತಮ್ಮನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಒದಗಿಸಿದ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಪ್ರದೀಪ್ ಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತರಬೇತುದಾರರಾಗಿ ಭಾಗವಹಿಸಿದ ಕೈವಲ್ಯ ಅಕಾಡೆಮಿ ಬೆಂಗಳೂರಿನ ಅಂತರರಾಷ್ಟಿçÃಯ ತರಬೇತುದಾರ ಡಾ.ಲೋಕೇಶ್ ಮಾತನಾಡಿ ಸದಾ ಜಾಗೃತ ಮನಸ್ಥಿತಿ, ಸಾಮಾನ್ಯ ಪ್ರಜ್ಞೆ, ಕಲಿಸುವುದನ್ನು ಗಮನವಿಟ್ಟು ಕೇಳುವ ಕೌಶಲ್ಯ ನಿಮ್ಮೊಳಗಿದ್ದರೆ ಗೆಲುವು ಕಟ್ಟಿಟ್ಟ ಬುತ್ತಿ. ಯಾರನ್ನೇ ಆದರೂ ನೋಡಿದ ತಕ್ಷಣ ಅವರ ಕುರಿತು ನಿರ್ಧಾರಕ್ಕೆ ಬರಬೇಡಿ. ಹೊರಗಿನಿಂದ ಸದಾ ಹಸನ್ಮುಖರಾಗಿರುವವರು ಅಂತರAಗದಲ್ಲಿ ದುಃಖಿಗಳಾಗಿರಬಹುದು. ಆದರೆ ಅವರ ನಗುವಿನಿಂದ ಅವರು ಬದುಕನ್ನು ಗೆದ್ದಿರುತ್ತಾರೆ. ಸುತ್ತಲಿರುವವರನ್ನು ಗೌರವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ವಿದ್ಯಾರ್ಥಿಗಳಾದವರು ಶಿಕ್ಷಕರಲ್ಲಿ ಪ್ರಶ್ನೆಗಳನ್ನು ಕೇಳಿ ಅನುಮಾನ ಪರಿಹರಿಸಿಕೊಳ್ಳಬೇಕೇ ಹೊರತು ಶಿಕ್ಷಕರನ್ನೇ ಪ್ರಶ್ನಿಸುವಂಥ ಮನೋಭಾವ ಬೆಳೆಸಿಕೊಳ್ಳಬಾರದು. ವಿದ್ಯಾರ್ಜನೆ ಮಾಡುವಲ್ಲಿ ವಿನಯವಂತಿಕೆಯಿರಬೇಕು ಎಂದು ಕಿವಿಮಾತುಗಳನ್ನು ಹೇಳಿದರು.
ಪ್ರಾಂಶುಪಾಲ ಸಿದ್ಧೇಶ್ವರ ಸ್ವಾಮಿ ಎಸ್. ಆರ್., ಕೈವಲ್ಯ ಅಕಾಡೆಮಿಯ ಪ್ರಬಂಧಕರಾದ ಗೋಪಾಲ್ ಉಪಸ್ಥಿತರಿದ್ದರು. ಉಪನ್ಯಾಸಕಿ ಆರತಿ ಪಟ್ರಮೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿಗಳು ತರಬೇತಿಯ ಪ್ರಯೋಜನ ಪಡೆದುಕೊಂಡರು.
ವ್ಯಕ್ತಿತ್ವ ವಿಕಸನದ ಮೂಲಕ ತಮ್ಮತನದ ಅರಿವು ಸಾಧ್ಯ
Leave a comment
Leave a comment