ತುಮಕೂರು: ಉತ್ತಮ ಇಂಜಿನಿಯರಿoಗ್ ಶಿಕ್ಷಣದ ಅವಶ್ಯಕತೆಯಿರುವ ಎಲ್ಲಾ ಪ್ರತಿಭಾವಂತರಿಗೂ ಅವಕಾಶ ದೊರಕಿಸಲು ಸಂಸ್ಥೆಯಿoದ ಸ್ಕಾಲರ್ಶಿಪ್ ಟೆಸ್ಟ್ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ಇದರ ಉತ್ತಮ ಪ್ರಯೋಜನ ಪಡೆದುಕೊಳ್ಳಬೇಕು, ಅತ್ಯುತ್ತಮವಾದ ಶೈಕ್ಷಣಿಕ ಅನುಭವದ ಅರ್ಪಣಾ ಮನೋಭಾವದ ವಿದ್ಯಾರ್ಹತೆಯ ಉಪನ್ಯಾಸಕರ ತಂಡವು ಸಂಸ್ಥೆಯಲ್ಲಿದ್ದು, ವಿದ್ಯಾರ್ಥಿಗಳಿಗೆ ಶ್ರೇಷ್ಠ ಬೋಧನಾ ವಿಧಾನಗಳ ಮೂಲಕ ತರಗತಿಗಳನ್ನು ನಡೆಸಿ ಉತ್ತಮ ಫಲಿತಾಂಶ ಮತ್ತು ಉದ್ಯೋಗ ಲಭ್ಯತೆಗೆ ಹುರಿದುಂಬಿಸಲಾಗುತ್ತಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಸ್ಕಿಲ್ ಲ್ಯಾಬ್ ತರಬೇತಿಗೆಂದು ವಿಶೇಷ ಅನುಮತಿ ಹೊಂದಿರುವ ವಿದ್ಯಾಲಯವು ಪ್ರತಿ ಸೆಮಿಸ್ಟರ್ನಲ್ಲಿ ಸ್ಕಿಲ್ ಲ್ಯಾಬ್ ತರಬೇತಿ ನೀಡುವುದರ ಮೂಲಕ ಅತ್ಯಾಧುನಿಕ ವಿಷಯಗಳ ಕಲಿಕೆಗೆ ನೆರವಾಗಿ ತನ್ಮೂಲಕ ಉದ್ಯೋಗ ಲಭ್ಯತೆಗೆ ಸುಗಮ ಮಾರ್ಗವನ್ನುಂಟುಮಾಡಿದೆ ಎಂದು ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಮುಖ್ಯಸ್ಥರಾದ ಡಾ.ಎಂ.ಆರ್.ಹುಲಿನಾಯ್ಕರ್ರವರು ನುಡಿದರು.
ನಗರದ ಶಿರಾರಸ್ತೆಯ ಶ್ರೀದೇವಿ ಇಂಜಿನಿಯರಿoಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ವತಿಯಿಂದ ಮೇ. 17 ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಶ್ರೀದೇವಿ ಇಂಜಿನಿಯರಿoಗ್ ಕಾಲೇಜಿನ ಆವರಣದಲ್ಲಿ ಪ್ರವೇಶಾತಿ ಮತ್ತು ವಿದ್ಯಾರ್ಥಿ ವೇತನ ಪರೀಕ್ಷೆಯ ಪ್ರತಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕರಾದ ಎಂ.ಎಸ್.ಪಾಟೀಲ್ರವರು ಮಾತನಾಡುತ್ತಾ ಇಂಜಿನಿಯರಿoಗ್ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದ್ದು ಪ್ರತಿವರ್ಷವೂ ಹಲವಾರು ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆಂದು ತಿಳಿಸಿ ಕಾಲೇಜಿನಲ್ಲಿ ವ್ಯಾಸಂಗಕ್ಕೆ ಅಗತ್ಯವಾದ ಉತ್ತಮ ಕಲಿಕಾ ವಾತಾವರಣ, ಲ್ಯಾಬ್ಗಳು ಹಾಗೂ ಮತ್ತೆಲ್ಲಾ ಸೌಕರ್ಯಗಳನ್ನು ಒದಗಿಸಿದ್ದು ಉದ್ಯೋಗ ನಿಯೋಜನೆ ಮತ್ತು ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆಯೆಂದರು.