ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಕಾಯಕ್ರಮವನ್ನು ಇಲ್ಲಿನ ಪಿ.ಜಿ ಸೆಮಿನಾರ್ ಹಾಲ್ ನಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹೊರ ತರುತ್ತಿರುವ ಸಿದ್ಧಾರ್ಥ ಸಂಪದ ಪ್ರಾಯೋಗಿಕ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಪ್ರಜಾಪ್ರಗತಿ ಪತ್ರಿಕೆಯ ಹಿರಿಯ ವರದಿಗಾರ ಹರೀಶ್ ಆಚಾರ್ಯ ಒಬ್ಬ ಪತ್ರಕರ್ತರು ಹಲವಾರು ರೀತಿಯ ವಿಷಯಗಳಲ್ಲಿ ಜ್ಞಾನ ಹೊಂದಿರಬೇಕು, ಜನರನ್ನು ಕುತೂಹಲ ಕೆರಳಿಸುವಂತ ಸುದ್ದಿ ಬರೆಯಬೇಕು, ಪತ್ರಕರ್ತರಾದರವರು ಹೆಚ್ಚು ಹೆಚ್ಚು ಮಾನವೀಯ ವರದಿಗಳನ್ನು ಬರೆಯುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಸಿದ್ಧಾರ್ಥ ಸಂಪದ ಪ್ರಾಯೋಗಿಕ ಪತ್ರಿಕೆಯ ವಿನ್ಯಾಸ, ಸುದ್ದಿ ಪರಿಷ್ಕರಣೆ ಹಾಗೂ ಲೇಖನಗಳ ಆಯ್ಕೆ ಹಾಗೂ ಮೂಡಿ ಬಂದಿರುವ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪತ್ರಕರ್ತರು ಸಮಯ ಪಾಲನೆ ಹೆಸರಿನಲ್ಲಿ ವೇಳಪಟ್ಟಿಗೆ ಸಿಮೀತವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ, ಎಂತಹ ಪರಿಸ್ಥಿತಿಯಲ್ಲೂ ಕೆಲಸ ಮಾಡಲು ಸಿದ್ಧವಿರಬೇಕು ಎಂದರು.
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಆಡಳಿತಾಧಿಕಾರಿ ಖಲಂದರ್ ಪಾಷ ಮಾತನಾಡಿ ಬೀಳ್ಕೊಡುಗೆ ಕಾರ್ಯಕ್ರಮ ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿದೆ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ನಮ್ಮನ್ನು ನಾವೇ ಗುರುತಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಈ ಅವಿನಾಭಾವ ಸಂಬAಧ ಕಾಲೇಜಿನೊಂದಿಗೆ ಹೀಗೆ ನಿರಂತರವಾಗಿ ಇರಲಿ ಎಂದರು.
ಎಸ್ಎಸ್ಸಿಎAಎಸ್ನ ನಿರ್ದೇಶಕರಾದ ಡಾ ಬಿ.ಟಿ.ಮುದ್ದೇಶ್ ಮಾತನಾಡಿ, ವಿದ್ಯಾರ್ಥಿಗಳು ವಿವಿಧ ರೀತಿಯ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಮನರಂಜನಾ ಕ್ಷೇತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು, ಸಾರ್ವಜನಿಕ ಸಂಪರ್ಕ ಕೆಲಸವನ್ನು ನಿರ್ವಹಿಸುವ ಸಾಮರ್ಥ್ಯ ಬೆಳಸಿಕೊಳಬೇಕು ಎಂದರು.
ಬರವಣಿಗೆಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ತಾಂತ್ರಿಕ ನೈಪುಣ್ಯತೆಯನ್ನು ಪಡೆದುಕೊಂಡರೆ ಮಾಧ್ಯಮ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳು ಹುದ್ದೆಗಳು ದೊರೆಯಲಿವೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ವಿದ್ಯಾರ್ಥಿ ದಿಸೆಯಲ್ಲಿಯೇ ಪತ್ರಕರ್ತರಂತೆ ನಡೆದುಕೊಳ್ಳವ ಪ್ರವೃತ್ತಿ ಬೆಳಸಿಕೊಳ್ಳಬೇಕು, ಬದಲಾವಣಿಗೆ ತಕ್ಕಂತೆ ನಮ್ಮಮಾಧ್ಯಮ ಕ್ಷೇತ್ರದ ಅಧ್ಯಯನದಲ್ಲೂ ಬದಲಾವಣೆ ಮಾಡಿಕೊಳ್ಳಬೇಕು ಎಂದರು.
ಅಂತಿಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ
Leave a comment
Leave a comment