ತಳವಾರ ಸಮಾಜವನ್ನು ಮಾಹಿತಿ ವಂಚಿತ ಸಮಾಜವನ್ನಾಗಿಸುವ ಹುನ್ನಾರು ನಡೆಯುತ್ತಿದೆ : ಸರ್ದಾರ್ ರಾಯಪ್ಪ ಆಕ್ರೋಶ.
ತಳವಾರ್ ಸಮಾಜವನ್ನು ಇತ್ತೀಚಿಗೆ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಬೆನ್ನೆಲೆ ಅಧಿಕಾರಿಗಳು ಈ ಸಮಾಜಕ್ಕೆ ಸೂಕ್ತವಾದ st ಸೌಲಭ್ಯದ ಸ್ಥಾನಮಾನ್ ನೀಡದೆ ವಂಚಿತರನ್ನಾಗಿ ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ತಳವಾರ್ st ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಸರ್ದಾರ್ ರಾಯಪ್ಪ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಲಬುರ್ಗಿಯಲ್ಲಿ ಸುದ್ದಿಗರಾರನ್ನುದ್ದೇಶೀಸಿ ಮಾತನಾಡಿದ ಅವರು, ತಳವಾರ್,ಪರಿವಾರ ಸಮಾಜವನ್ನು ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಹಲವು ದಿನಗಳು ಕಳೆದು ಹೋಗಿವೆ ಆದರೆ ಈ ಸಮಾಜವನ್ನು ವಿನಾ ಕಾರಣ ಸರ್ಕಾರದ ಸೌಲಭ್ಯಗಳಿಂದ ವಂಚಿತವನ್ನಗಿಸುವ ಹುನ್ನಾರು ನಡೆಯುತ್ತಿದೆ ಎಂದು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಅಷ್ಟೇ ಅಲ್ಲದೆ ಸರ್ಕಾರ ಒಂದು ವೇಳೆ ಈ ತಾರತಮ್ಯವನ್ನು ಸರಿಪಡಿಸದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರವಾದ್ ಹೋರಾಟ ನಡೆಸಲಾಗುವದು ಎಂದ್ ಎಚ್ಚರಿಕೆ ನೀಡಿದರು