ಹಳ್ಳಿ ಹಬ್ಬದಲ್ಲಿ ರಾಶಿ ಪೂಜೆ, ರಾಸುಗಳ ಆಕರ್ಷಕ ಪ್ರದರ್ಶನ
ತುಮಕೂರು: ನಗರದ ಹನುಮಂತಪುರದ ಭಾಗ್ಯ ನಗರದ ಶ್ರೀರಾಮ ಬಾಲ ಭಜನಾ ಸಂಘದಿoದ ಸಂಕ್ರಾoತಿಯoದು ಸಂಭ್ರಮದ ಸುಗ್ಗಿ ಹಬ್ಬ ಆಚರಣೆಯಾಯಿತು. ಶ್ರೀ ರಾಮನಿಗೆ ವಿಶೇಷ ಪೂಜೆ, ಭಜನೆ, ಧಾನ್ಯ ರಾಶಿಯ ಪೂಜೆ, ಅಲಂಕಾರಗೊಳಿಸಿದ್ದ ಎತ್ತುಗಳ ಆಕರ್ಷಕ ಮೆರವಣಿಗೆ, ಪ್ರದರ್ಶನ ಗಮನ ಸೆಳೆಯಿತು. ಸುತ್ತಮುತ್ತಲ ಗ್ರಾಮಗಳ ನೂರಾರು ಜನ ಹಳ್ಳಿ ಹಬ್ಬದ ಸಂಭ್ರಮವನ್ನು ಕಣ್ತುಂಬಿಕೊoಡು ಆನಂದಿಸಿದರು.
ಇಲ್ಲಿನ ಭಜನೆ ಮನೆ ಬಳಿ ಬೃಹತ್ ಶ್ರೀರಾಮ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಅಲಂಕರಿಸಲಾಗಿತ್ತು. ರಾಗಿ, ಭತ್ತದ ರಾಶಿ ಮಾಡಿ ಕಬ್ಬು, ಅವರೆಕಾಯಿ, ಕಡಲೆಕಾಯಿ, ಗೆಣಸು, ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಸುತ್ತಮುತ್ತಲ ಗ್ರಾಮಗಳ ರೈತರು ತಮ್ಮ ಎತ್ತು, ರಾಸುಗಳನ್ನು ಅಲಂಕರಿಸಿಕೊoಡು ಸುಗ್ಗಿ ಹಬ್ಬದ ಪ್ರದರ್ಶನಕ್ಕೆ ಕರೆತಂದಿದ್ದರು. ರಾಸುಗಳ ಮೆರವಣಿಗೆ ನಂತರ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಯಿತು. ಎಲ್ಲರಿಗೂ ಸಂಕ್ರಾoತಿ ಹಬ್ಬದ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು.
ಸಂಸದ ಜಿ.ಎಸ್.ಬಸವರಾಜು ಸುಗ್ಗಿಹಬ್ಬದಲ್ಲಿ ಭಾಗವಹಿಸಿ, ರೈತರು ಬೆಳೆದ ದವಸಧಾನ್ಯವನ್ನು ರಾಶಿ ಮಾಡಿ ಪೂಜಿಸಿ, ಮುಂದೆಯೂ ಒತ್ತಮ ಮಳೆಬೆಳೆಯಾಗಲಿ ಎಂದು ಪ್ರಾರ್ಥಿಸುವ ಸುಗ್ಗಿ ಹಬ್ಬದ ಆಚರಣೆ ಎಲ್ಲರನ್ನೂ ಒಂದುಗೂಡಿಸಿ ಭಾವೈಕ್ಯತೆ ಬೆಳೆಸಲು ಸಹಕಾರಿಯಾಗಿದೆ ಎಂದರು.