ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಉಪಾಧ್ಯಕ್ಷರಾದ ಬಿ.ಆರ್.ಉಮೇಶ್ರವರು ಮಾತನಾಡುತ್ತಾ ಸಮ್ಮೋಹಿನಿ ಚಿಕಿತ್ಸೆ ಎಂಬುದು ಸನಾತನ ವೇದೋಕ್ತವಾಗಿ ಬಂದ ಒಂದು ಪ್ರಾರ್ಚಿನ ಚಿಕಿತ್ಸಾ ವಿಧಾನ ಇದರಲ್ಲಿ ವ್ಯಕ್ತಿಯು ಅನುಭವಾತ್ಮಕ ಸಂವೇದನೆಗಳು, ಗ್ರಹಿಕೆಗಳು, ಅಲೋಚನೆಗಳು ಅಥವಾ ನಡವಳಿಕೆಗಳಲ್ಲಿ ಬದಲಾವಣೆಗಳನ್ನು ಕಾಣುತ್ತಾರೆ. ಸಮ್ಮೋಹಿನಾ ಸ್ಥಿತಿಯಲ್ಲಿರುವ ವ್ಯಕ್ತಿಯ ಅಥವಾ ವಿದ್ಯಾರ್ಥಿಯ ಸುಪ್ತ ಮನಸ್ಸಿನಲ್ಲಿ ಅಡಗಿರುವ ತಪ್ಪು ಗ್ರಹಿಕೆಗಳು, ಭಯಗಳು, ನೋವುಗಳು, ಕಹಿ ನೆನಪುಗಳನ್ನು ತೆಗೆದು ವ್ಯಕ್ತಿಗೆ ಅನುಕೂಲಕ್ಕೆ ಬೇಕಾದಂತಹ ಒಳ್ಳೆಯ ಗುಣಗಳನ್ನು ವಿಷಯಗಳನ್ನು ಭಿತ್ತಬಹುದಾಗಿದೆ. ವಿದ್ಯಾರ್ಥಿಗಳಿಗೆ ಈ ಚಿಕಿತ್ಸಾ ಅಥವಾ ಈ ವಿದ್ಯೆ ಬಹಳ ಉಪಯುಕ್ತವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅನನ್ಯ ಸಂಸ್ಥೆಯ ಟ್ರಸ್ಟಿಯಾದ ಡಾ.ಹೆಚ್.ಹರೀಶ್ರವರು ಮಾತನಾಡುತ್ತಾ ಪ್ರಾರ್ಚಿನ ವಿದ್ಯೆಗಳಾದ ಯೋಗ, ಸಮ್ಮೋಹಿನಿ ವಿದ್ಯೆ, ಧ್ಯಾನ ಇವುಗಳನ್ನು ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಅನನ್ಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ವಿಶ್ವಾಸ್, ಪ್ರಾಧ್ಯಾಪಕರಾದ ದೇವಕಿಪ್ರಸಾದ್, ಆರ್.ಅನಂತ ಲಕ್ಷ್ಮಿ ಹಾಗೂ ಸಂಸ್ಥೆಯ ಬೋಧಕ ಬೋಧಕೇತರ ಸಿಬ್ದಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅನನ್ಯ ಕಾಲೇಜಿನಲ್ಲಿ ಬಿ.ಕಾಂ ವಿದ್ಯಾರ್ಥಿಗಳಿಗೆ ಸಮ್ಮೋಹಿನಿ ಚಿಕಿತ್ಸಾ ಕಾರ್ಯಾಗಾರ
Leave a comment
Leave a comment