ಶಿಕ್ಷಣ ಕ್ಷೇತ್ರದ ಧ್ವನಿಯಾಗುವ ಭರವಸೆ ನೀಡಿದ ಲೋಕೇಶ್ ತಾಳಿಕಟ್ಟೆ
ತುಮಕೂರು: ಖಾಸಗಿ ಅನುದಾನರಹಿತ ಶಾಲೆಗಳ ಸಮಸ್ಯೆ ನಿವಾರಣೆಗೆ ಸರ್ಕಾರಗಳು ಸರಿಯಾದ ಪ್ರಯತ್ನ ಮಾಡಲಿಲ್ಲ. ಅವೈಜ್ಞಾನಿಕ ಕಾನೂನು, ನಿಯಮಗಳ ಮೂಲಕ ಸಮಸ್ಯೆಗಳನ್ನು ಸರ್ಕಾರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಖಾಸಗಿ ಅನುದಾನರಹಿತ ಶಾಲೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದರು.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಆಗ್ನೇಯ ಶಿಕ್ಷಕರ ಕ್ಷೇತ್ರದ ಪಕ್ಷೇತ್ರ ಅಭ್ಯರ್ಥಿಯಾಗಿ ತಾವು ಸ್ಪರ್ಧೆ ಮಾಡುವುದಾಗಿ ಇಂಗಿತವ್ಯಕ್ತಪಡಿಸಿ, ಶಿಕ್ಷಣ ಕೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾದ ಯಾರೊಬ್ಬರೂ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಿಲ್ಲ. ಈ ಕಾರಣದಿಂದ ಒಕ್ಕೂಟದ ಪ್ರತಿನಿಧಿಯಾಗಿ ತಾವು ಚುನವಣೆಗೆ ಸ್ಪರ್ಧಿಸಲು ಒಕ್ಕೂಟದ ಸಭೆಯಲ್ಲಿ ಒಮ್ಮತದಿಂದ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
ಹಲವು ವರ್ಷಗಳಿಂದ ಖಾಸಗಿ ಶಾಲೆ ಶಿಕ್ಷಕರು, ಆಡಳಿತ ಮಂಡಳಿಗಳು ನೋವು ಉಂಡಿವೆ. ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳ ಬಗ್ಗೆ ಯಾವ ವಿಧಾನಪರಿಷತ್ ಸದಸ್ಯರು ಸ್ಪಂದಿಸಲಿಲ್ಲ, ಕೋವಿಡ್ ಸಂಕಷ್ಟ ಕಾಲದಲ್ಲಿ ಟೀರ್ಸ್ ವೆಲ್ಫೇರ್ ಫಂಡ್ ಬಳಸಿ ಕಷ್ಟಕ್ಕೆ ನೆರವಾಗಿರಿ ಎಂದು ಒಕ್ಕೂಟದಿಂದ ಮನವಿ ಮಾಡಿದರೂ ಅದರಲ್ಲಿ ಕೇವಲ ಬಿಡಿಗಾಸು ಬಳಸಲಾಯಿತು. ನಮ್ಮ ವಿವಿಧ ಸಮಸ್ಯೆಗಳ ಬಗ್ಗೆ ಕಲಾಪದಲ್ಲಿ ಚರ್ಚೆ ಮಾಡಲು ಮನವಿ ಮಾಡಿದರೂ
ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ರುಪ್ಸಾ ಅಧ್ಯಕ್ಷ ಸ್ಪರ್ಧೆ ಇಂಗಿತ
Leave a comment
Leave a comment