ಕಲ್ಬುರ್ಗಿ ನಗರದಲ್ಲಿ ಇಂದು ಕಾನಿಪ ಧ್ವನಿ ಪತ್ರಿಕಾ ಭವನದಲಿಂದು ರಾಷ್ಟ್ರೀಯ ಸಮಾಜ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾದ ಶಿವಲಿಂಗಪ್ಪ ಕಿನ್ನೂರ ಅವರು ಸುದ್ದಿ ಗೋಷ್ಠಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಇತ್ತೀಚೆಗೆ ದಿನಾಂಕ 29.02.2024 ರಂದು 2015ರ ವರದಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ನೀಡಿರುವ ಸನ್ಮಾನ್ಯ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅವರು ಈ ವರದಿಯನ್ನು ಸ್ವೀಕರಿಸುವುದಕ್ಕೆ RSP ಪಕ್ಷ ಸ್ವಾಗತಿಸುತ್ತದೆ ಎಂದರು.
ಈ ವರದಿ ಹಿಂದುಳಿದ ವರ್ಗಗಳ ಎಸ್ಸಿ .ಎಸ್ಟಿ ಅಲ್ಪಸಂಖ್ಯಾತರ ಜನಸಾಮಾನ್ಯರ ಅಂಕಿ ಅಂಶಗಳ ನಮೂದಿಸಿರುವುದು ಸರಿಯಾಗಿದೆ. ಈ ವರದಿಯನ್ನು ಮುಂದುವರಿದ ಸಮುದಾಯದವರು ವಿರೋಧ ವ್ಯಕ್ತಪಡಿಸುತ್ತಿದ್ದು ಇದು ಖಂಡನಿಯವಾದದ್ದು. 160 ಕೋಟಿ ರೂಪಾಯಿ ಸಾರ್ವಜನಿಕರ ತೆರಿಗೆಯಿಂದ ಖರ್ಚಾಗಿದೆ
ಆಡಳಿತದಲ್ಲಿರುವ ಸರಕಾರ ಈ ವರದಿ ಜಾರಿಗೆ ತರಲಿ ನಮ್ಮ ಪಕ್ಷದ ಸಂಪೂರ್ಣವಾದ ಬೆಂಬಲವಿದೆ ಎಂದರು. ಒಂದು ವೇಳೆ ಯಾರೇ ಶಾಸಕರು ಮಂತ್ರಿ ಸಚಿವರು ಈ ವರದಿಗೆ ವೀರೋಧ ವ್ಯಕ್ತಪಡಿಸಿದರೆ ಹಿಂದುಳಿದ ವರ್ಗಗಳ ಶೇಕಡ 70/-ರಷ್ಟು ಮತದಾರರ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದರು.
ಈ ಸಂದರ್ಭದಲ್ಲಿ RSP ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾದ ಶಿವಲಿಂಗಪ್ಪ ಕಿನ್ನೂರ್, ರಾಜ್ಯಾಧ್ಯಕ್ಷರಾದ ಧರ್ಮಣ್ಣ ತೊಂಟಾಪೂರ, ಸಿದ್ದರಾಜ್ ಎಸ್ ಕಿನ್ನೂರ ರಾಜ್ಯ ಉಸ್ತುವಾರಿಗಳು ಕರ್ನಾಟಕ, ಪ್ರಧಾನ ಕಾರ್ಯದರ್ಶಿಗಳು ಶರಣಬಸಪ್ಪ ದೊಡ್ಮನಿ, ದೇವೇಂದ್ರ ಕ್ಯಾಶಪಳ್ಳಿ, ಶ್ರೀಮತಿ ಮನುಬಾಯಿ ಮುಕ್ಕ, ಮಾಂತೇಶ್ ದೊಡ್ಮನಿ ರಮೇಶ್ ಕೋಣೇಶ್ವರ್ ಉಪಸ್ಥಿತರಿದ್ದರು.