ಸ್ಲಂ ನಿವಾಸಿಗಳ ಕುಂದು ಕೊರತೆ ಸಭೆ ಕರೆಯಲು ಜಿಲ್ಲಾಧಿಕಾರಿಗಳಿಗೆ ಆಗ್ರಹ
ಇಂದು ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ನಿಯೋಗದೊಂದಿಗೆ ತುಮಕೂರು ನಗರ ಸ್ಲಂ ನಿವಾಸಿಗಳ ಕುಂದು ಕೊರತೆ ಸಬೆ ಕರೆಯಲು ಒತ್ತಾಯಿಸಿ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀಮತಿ ಶುಭಕಲ್ಯಾಣ್ ರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸ್ಲಂ ಸಂಘಟನೆ ಕಾರ್ಯದರ್ಶಿ ಅರುಣ್ ಜಿಲ್ಲಾಧಿಕಾರಿಗಳ ಗಮನ ಸೆಳೆದು ನಗರದ 400 ನಿವೇಶನ ವಂಚಿತ ಕುಟುಂಬಗಳ ಸಮೀಕ್ಷೆ ಅರ್ಧಕ್ಕೆ ನಿಂತಿದ್ದು ಹಾಗೂ ಈಗಾಲೇ ಕರ್ನಾಟಕ ಸರ್ಕಾರದ ಆದೇಶದನ್ವಯ ಸ್ಲಂ ಬೋರ್ಡ್ ಮಂಡಳಿಯಿಂದ ಹಂಚಿಕೆಯಾಗಿರುವ ಹಕ್ಕುಪತ್ರಗಳನ್ನು ನೊಂದಣಿ ಮಾಡದೇ ವಿಳಂಭ ಧೋರಣೆ ತೋರುತ್ತಿದ್ದು ಮತ್ತು ನಗರದ 35 ವಾರ್ಡ್ ವ್ಯಾಪ್ತಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ (ಪಿಎಂಎವೈ) ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಾಣವಾಗುತ್ತಿರುವ 503 ಮನೆಗಳು 2 ವರ್ಷ 7 ತಿಂಗಳು ಕಳೆದರು ಕಾಮಗಾರಿ ಪೂರ್ಣಗೊಳ್ಳದೇ ಅರ್ದಂಬರ್ಧಕ್ಕೆ ನಿಲ್ಲಿಸಿರುವುದು ಫಲಾನುಭವಿಗಳು ಅತಂತ್ರಗೊಳ್ಳಲು ಕಾರಣವಾಗಿದೆ. ನಗರದ ಭಾರತಿ ನಗರ ಭಾಗ-2 ಮತ್ತು ಎಸ್.ಎನ್ ಪಾಳ್ಯ, ಅಮಾನಿಕೆರೆ ಕೋಡಿಹಳ್ಳ ಸ್ಲಂಗಳಿಗೆ ಬಾರಿ ಮಳೆಯಿಂದ ಮನೆಗಳಿಗೆ ನೀರು ನುಗುತ್ತಿದ್ದು ಮಹಾನಗರಪಾಲಿಕೆಯಿಂದ ತಾತ್ಕಾಲಿಕ ತಡೆಗೋಡೆ ನಿರ್ಮಿಸಬೇಕು. ಹಾಗೂ ಇಸ್ಮಾಯಿಲ್ ನಗರ ಹಂದಿ ಜೋಗಿ ಕುಟುಂಬಗಳು ಅಣ್ಣೇನಹಳ್ಳಿಗೆ ಪುನರ್ವಸತಿಗೊಳ್ಳುವವರೆಗೂ ಮಹಾನಗರ ಪಾಲಿಕೆಯಿಂದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು.
ಮನವಿಗೆ ತುರ್ತು ಸ್ಪಂಧಿಸಿ ಪ್ರತಿಕ್ರಿಯಿಸಿ ಜಿಲ್ಲಾಧಿಕಾರಿಳಾದ ಶ್ರೀಮತಿ ಶುಭಕಲ್ಯಾಣ್ ರವರು ಸ್ಲಂ ನಿವಾಸಿಗಳ ಕುಂದು ಕೊರತೆ ಸಭೆಯನ್ನು ಇದೇ ಆಗಸ್ಟ್ 13ರ ಮಂಗಳವಾರ ಸಂಬಧಪಟ್ಟ ಅಧಿಕಾರಿಗಳನ್ನೊಳಗೊಂಡಂತೆ ಸಭೆ ಕರೆಯಲಾಗುವುದು, ಜಿಲ್ಲಾಡಳಿತದಿಂದ ಈಗಾಗಲೇ ನೀರಿನಿಂದ ಹಾನಿಗೊಳಗಾಗುವ ಸ್ಲಂಗಳಿಗೆ ಭೇಟಿ ನೀಡಲಾಗಿದ್ದು, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಲಂ ಸಮಿತಿ ಪದಾಧಿಕಾರಿಗಳಾದ ಶಂಕರಯ್ಯ, ಕೃಷ್ಣಮೂರ್ತಿ, ತಿರುಮಲಯ್ಯ, ಮನುಕುಮಾರ್, ನಂದೀಶ್, ವೆಂಕಟೇಶ್, ಗಣೇಶ್, ಅಶ್ವತ್, ಮೋಹನ್, ಮುಂತಾದವರು ಪಾಲ್ಗೊಂಡಿದ್ದರು.