ನವ್ಯದಿಶಾ ಸಂಸ್ಥೆಯು ಕಳೆದ 17 ವರ್ಷಗಳಿಂದನೀರು, ನೈರ್ಮಲ್ಯ, ಮಹಿಳಾಸಬಲೀಕರಣ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಪರಿಸರ ಕ್ಷೇತ್ರಗಳಲ್ಲಿ ಸೇವೆಸಲ್ಲಿಸುತ್ತಾ ಬಂದಿದೆ. ಇಂದು ಯುವಜನರು ಔದ್ಯೋಗಿಕ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸವಾಲನ್ನು ಮನಗಂಡು ಮಹಿಳೆಯರಿಗೆ ಸಣ್ಣಆರ್ಥಿಕ ಸಹಾಯ ಮಾಡುವುದರ ಮೂಲಕ ಅವರ ಉದ್ಯಮಶೀಲತಾ ಕೌಶಲ್ಯವನ್ನು ಅಭಿವೃದ್ದಿಪಡಿಸುವತ್ತಾ ಪ್ರಾರಂಭವಾದ ಈ ಕಾರ್ಯಕ್ರಮವನ್ನು ತುಮಕೂರುಜಿಲ್ಲೆಯ ಯುವಜನರಿಗೂ ಪಸರಿಸಬೇಕೆಂದು ಆಲೋಚನೆಮಾಡಿದ ನವ್ಯದಿಶಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಸುರೇಶ್ಕೆಕೃಷ್ಣರವರು ಈ ಒಂದು ಕಾರ್ಯಕ್ರಮದ ರೂಪುರೇಷೆ ರೂಪಿಸಿ ಈ ಕಾರ್ಯಕ್ರಮದ ಮೊದಲ ಹೆಜ್ಜೆಯಾಗಿ ಸಿರಾ ತಾಲ್ಲೂಕಿನ ಚಿಕ್ಕನಹಳ್ಳಿಯ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಉದ್ಯಮಶೀಲತಾ ಅರಿವು ಕಾರ್ಯಕ್ರಮದಲ್ಲಿ ಪ್ರೇರೇಪಿತರಾಗಿ ಮುಂದೆ ಬಂದ ಯುವಜನರಿಗೆ ಉದ್ಯಮಶೀಲತಾ ಅಭಿವೃದ್ದಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವ ಇಚ್ಚೆಯನ್ನು ನವ್ಯದಿಶಾಸಂಸ್ಥೆಯು ಹೊಂದಿದೆ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಉದ್ಘಾಟಕರಾದ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಪ್ರಿನ್ಸಿಪಾಲ್ ಸೈಂಟಿಸ್ಟ್ ಮತ್ತು ಮುಖ್ಯಸ್ಥರಾದ ಶ್ರೀ ಲೋಗಾನಂದನ್ರವರು ಕೃಷಿ ಕ್ಷೇತ್ರದಲ್ಲೂ ಉದ್ಯಮವನ್ನು ಆರಂಭಿಸಿ ಬದುಕನ್ನು ಹಸನಾಗಿಸಿಕೊಳ್ಳಬಹುದು ಎಂದರು. ಕೃಷಿ ಉದ್ಯಮಶೀಲತೆಗೆ ಸಂಬ0ಧಿಸಿದ0ತೆ ಕೃಷಿ ವಿಜ್ಞಾನ ತರಬೇತಿ ಕೇಂದ್ರದಿ0ದ ಸಹ ಹಲವಾರು ತರಬೇತಿಗಳನ್ನು ಪಡೆಯಬಹುದು. ಅಣಬೆ ಬೇಸಾಯ, ಬೀಜಗಳ ಉತಾ ್ಪದನೆ ಮತ್ತು ಮಾರಾಟ ಕ್ಷೇತ್ರಗಳಲ್ಲಿ ವಿಪುಲವಾದ ಅವಕಾಶಗಳಿವೆ ಎಂದರು. ಹಾಗೂ ಅವರು ಸದಾ ನವ್ಯದಿಶಾ ಸಂಸ್ಥೆಯೊಟ್ಟಿಗೆ ಮತು ್ತ ಉದ್ಯಮಶೀಲ ಯುವಜನರೊಟ್ಟಿಗೆ ನಮ್ಮ ಸಹಕಾರ ಇರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತುಮಕೂರು ಜಿಲ್ಲೆಯ ಯಶಸ್ವಿ ಉದ್ಯಮಿಯಾದ ಶ್ರೀಶಿವಕುಮಾರ್ರವರು ಉದ್ಯಮಶೀಲತೆಯಲ್ಲಿ ತಾವು ಕಂಡು ಕೊAಡ ಅನುಭವಗಳನ್ನು ಹಂಚಿಕೊAಡು ಇಚ್ಛಾಶಕ್ತಿ, ಪ್ರೇರಣೆ ಇದ್ದರೆ ಯಶಸ್ವಿ ಉದ್ಯಮಿಯಾಗಬಹುದು ಎಂದು ಯುವಜನರನ್ನು ಪ್ರೇರೇಪಿಸಿದರು.
ಮುಖ್ಯ ತರಬೇತಿ ಸಂಪನ್ಮೂಲವ್ಯಕ್ತಿಯಾಗಿ ಶ್ರೀರಾಮ್ಭಟ್ರವರು ಈ ಕಾರ್ಯಕ್ರಮದಲ್ಲಿ ಉದ್ಯಮದಲ್ಲಿ ಆಸಕ್ತಿಯುಳ್ಳ ಯುವಜನರಿದ್ದು ಅವರೊಟ್ಟಿಗೆ ಉದ್ಯಮಶೀಲತೆ ಮತ್ತು ಉದ್ಯಮಶೀಲತೆ ಸುತ್ತಲಿನ ವಿಚಾರಗಳು ಕುರಿತು ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶ್ರೀಮತಿ ಅರ್ಚನಾನಂಬಿಯ ರ್ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.