ಕಲಬುರ್ಗಿ ಜಿಲ್ಲೆ ಶಹಬಾದ್ ತಾಲ್ಲೂಕು ವಾಡಿ ಕ್ರಾಸ್ ನಿಂದ ಜೇವರ್ಗಿ ಕ್ರಾಸ್ ವರೆಗೆ ಎರಡು ಬಾರಿ ಟೆಂಡರ್ ಕರೆದು ಸುಮಾರು 6 ಕೋಟಿ ಖರ್ಚು ಮಾಡಿ ರಾಜ್ಯ ಹೆದ್ದಾರಿ 125 ಅಭಿವೃದ್ಧಿ ಮಾಡಿದ್ದಾರೆ. ಆದರೆ ಅದು ಸಂಪೂರ್ಣವಾಗಿ ಹಾಳಾಗಿ ಹೋಗಿದೆ ಎಂದು ಶಹಾಬಾದ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆರೋಪಿಸಿದೆ.
ಈ ರಸ್ತೆಯಲ್ಲಿ ಚಲಿಸುವ ಲಾರಿ ಚಾಲಕರು ಆಟೋ ಚಾಲಕರು ಶಾಲಾ- ಕಾಲೇಜ್ ವಾಹನಗಳು ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಓಡಾಡುವ ಸಾರ್ವಜನಿಕರು ಹಿಡಿ ಶಾಪವನ್ನು ಹಾಕುತ್ತಿದ್ದಾರೆ.
ಈ ಹೆದ್ದಾರಿಗೆ ಶಾಸಕರು, ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ, ಆದರೂ ಕೂಡ ಈ ನರಕ ಯಾತನೆ ಅನುಭವಿಸುವುದು ತಪ್ಪಲಿಲ್ಲ, ನಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಪಯಣ ಮಾಡುತ್ತಿದ್ದೇವೆ, ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹದಗೆಟ್ಟ ರಸ್ತೆಯಿಂದಾಗ ಶಹಾಬಾದ ನಿಂದ ಜೇವರ್ಗಿ ಹೋಗುವ ಬಸ್ಸುಗಳು ಸಂಪೂರ್ಣವಾಗಿ ನಿಲ್ಲಿಸಲಾಗಿದೆ, ಇದರಿಂದ ಪ್ರಯಾಣಿಕರು ಪರದಾಡುವಂತಹ ಆಗಿದೆ. ಶಹಾಬಾದ ಜನತೆಯ ಈ ಸಮಸ್ಯೆಯನ್ನು ಬಗೆಹರಿಸಲು ಪ್ರಗತಿಪರ ಸಂಘಟನೆಗಳು ಹಾಗೂ ಪ್ರಗತಿಪರ ಒಕ್ಕೂಟದಿಂದ ಇಂದು ವಾಡಿ ಕ್ರಾಸ್ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿ ರಸ್ತಾ ರೋಕೊ ಚಳುವಳಿಯನ್ನು ಮಾಡಲಾಯಿತು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಹಾಗೂ ಸೇಡಂ ತಾಲೂಕು ಪಿಡಬ್ಲ್ಯೂಡಿ AEE ಮತ್ತು ಶಹಬಾದ್ ತಸಿಲ್ದಾರ್ ಅವರಿಗೂ ಪ್ರತಿಭಟನಾಕಾರರು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು, ಮನವಿ ಪತ್ರ ಸ್ವೀಕರಿಸಿದ ಅಧಿಕಾರಿಗಳು ನಾಳೆಯಿಂದಲೇ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡುತ್ತೇವೆ ಮತ್ತು ಒಂದು ತಿಂಗಳ ಒಳಗಾಗಿ ರಸ್ತೆ ನಿರ್ಮಾಣ ಕಾರ್ಯವನ್ನು ಆರಂಭಿಸುತ್ತೇವೆ ಟೆಂಡರ್ ಕರೆಯುತ್ತೇವೆ ಎಂದು ಹೇಳಿದರು. ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಈ ಸಂದರ್ಭದಲ್ಲಿ ದಲಿತ ಸಂಘಟನಾ ರಾಜ್ಯ ಸಂಚಾಲಕರಾದ ಮರೆಪ್ಪ ಹಳ್ಳಿ, ಗುಂಡಮ್ಮ ಮಡಿವಾಳ, ಜಗನ್ನಾಥ ಎಸ್ ಹೆಚ್ , ಪೂಜಪ್ಪ ಎಸ್ ಮೇತ್ರೆ, ನಾಗಣ್ಣ ರಾಂಪುರ, ಸಾಬಣ್ಣ ಗುಡುಬಾ, ರಾಮಣ್ಣ ಇಬ್ರಾಹಿಂಪುರ, ಮಹಮ್ಮದ್ ಮಸ್ತಾನ್, ಕಿಷ್ಣಪ್ಪ ಕರ್ಣಿಕ್ , ರಾಘವೇಂದ್ರ ಎಂ ಜಿ, ನಾಗಪ್ಪ ರಾಯಚೂರುಕರ, ಯಲ್ಲಾಲಿಂಗ ಹೈಯ್ಯಳಕರ್, ಗಣಪತಿರಾವ ಕೆ ಮಾನೆ, ಮಹಮ್ಮದ್ ಯೂನೋಸ್, ಡಾಕ್ಟರ್ ಅಹಮದ್ ಪಟೇಲ್, ಗೋವಾ ಬಾಬು, ಅಬ್ಬಾಸ್ ಅಲಿ, ಪ್ರವೀಣ್ ರಾಜನ್, ಸೇರಿದಂತೆ ಲಾರಿ ಮಾಲೀಕರ ಸಂಘ, ಅಂಗವಿಕಲರ ಸಂಘ, ಆಟೋ ಚಾಲಕರ ಸಂಘ, ಹಣ್ಣು ತರಕಾರಿ ಮಾರಾಟಗಾರ ಸಂಘ, ಶಹಾಬಾದ ವ್ಯಾಪಾರಸ್ಥರ ಸಂಘ, ಹಾಗೂ ಇತರೆ ಸಂಘಟನೆಗಳ ಪದಾಧಿಕಾರಿಗಳು. ಈ ಒಂದು ಚಳವಳಿಯಲ್ಲಿ ಭಾಗವಹಿಸಿದ್ದರು.