ತುಮಕೂರು : ಭಾರತ್ ಸ್ಕೌಟ್ಸ್ & ಗೈಡ್ಸ್, ಸ್ಥಳೀಯ ಸಂಸ್ಥೆ, ತುಮಕೂರು ವತಿಯಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ, ಕುರುಡೀರಯ್ಯನ ಹಟ್ಟಿ, ಓಬಳಾಪುರ ಕ್ಲಸ್ಟರ್ನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಬುಲ್ ಬುಲ್ ದಳವನ್ನು ಪ್ರಾರಂಭಿಸಲಾಯಿತು. ಈ ಶಾಲೆಯಲ್ಲಿ ಇದುವರೆವಿಗೂ ಸ್ಕೌಟ್ಸ್ & ಗೈಡ್ಸ್ ಘಟಕವಿಲ್ಲದೇ ಇದ್ದ ಪ್ರಯುಕ್ತ ಇದೇ ಪ್ರಪ್ರಥಮ ಬಾರಿಗೆ ಘಟಕವನ್ನು ಪ್ರಾರಂಭ ಮಾಡಲಾಗಿದೆ, ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಶಿಸ್ತು, ಸಂಯಮ, ಸ್ವಚ್ಛತೆಯೊಂದಿಗೆ ಇರುವುದನ್ನು ರೂಢಿಮಾಡಿಕೊಳ್ಳಬೇಕು, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ಶಿಸ್ತು ಸಂಯಮವನ್ನು ಕಲಿತರೆ ಶಿಕ್ಷಣದ ನಂತರ ಔದ್ಯೋಗಿಕ ಜೀವನ ಮತ್ತು ಸಮಾಜದಲ್ಲಿ ಇತರೆ ಜನರಿಗೆ ಮಾದರಿಯಾಗುವಂತಹ ವ್ಯಕ್ತಿಗಳಾಗಿ ರೂಪುಗೊಳ್ಳುವಂತೆ ನಮ್ಮ ಸ್ಕೌಟ್ಸ್ & ಗೈಡ್ಸ್ ಮಕ್ಕಳನ್ನು ತಯಾರು ಮಾಡಲಾಗುತ್ತದೆ ಎಂದು ಘಟಕವನ್ನು ಉದ್ಘಾಟಿಸಿದ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಉಪ್ಪಾರಹಳ್ಳಿ ಕುಮಾರ್ರವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಚಂದ್ರಶೇಖರ್, ಎಸ್.ಡಿ.ಎಂ.ಸಿ. ಉಪಾಧ್ಯಕ್ಷರಾದ ಶಿಲ್ಪ, ಕೋಮಲ, ನಾಗಲತಾ, ವಿಜಯಲಕ್ಷಿö್ಮÃ, ಬಿ.ಟಿ.ಸಿಂಧಗೀಕರ್, ಚಂದ್ರಶೇಖರ್, ನವೀನ್ ಕುಮಾರ್ ಸೇರಿದಂತೆ ಶಾಲಯೆ ಮಕ್ಕಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.