ತುಮಕೂರು(ಕ.ವಾ.)ಆ.೨೩: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಖಾಲಿಯಿರುವ ೧೩,೦೦೦ ಚಾಲಕ/ನಿರ್ವಾಹಕರನ್ನು ನೇಮಕ ಮಾಡಲು ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಆರ್ಥಿಕ ಇಲಾಖೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.
ದಾವಣಗೆರೆ ನಗರದಲ್ಲಿಂದು ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸುತ್ತಿರುವ ಕೆಎಸ್ಆರ್ ಟಿಸಿ ಬಸ್ನಿಲ್ದಾಣವನ್ನು ಪರಿಶೀಲಿಸಿ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಸ್ಮಾರ್ಟ್ ಸಿಟಿ ಯೋಜನೆಯಡಿ ೩೯,೮೧೭ ಚ.ಮೀ. ಅಳತೆ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಕಾಮಗಾರಿ ಪರಿಶೀಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಎಲ್ಲಾ ಬಸ್ಸುಗಳು ತುಮಕೂರು ನಗರದ ಮೂಲಕವಾಗಿಯೇ ಸಂಚರಿಸುವುದರಿAದ ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಸುಮಾರು ೪.೧೭ ಎಕರೆ ಪ್ರದೇಶದಲ್ಲಿ ೧೧೧.೪೬ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಬಸ್ ನಿಲ್ದಾಣ ೨೦೨೪ರ ಜನವರಿ ಮಾಹೆಯ ಅಂತ್ಯಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು.
ಪ್ರಸ್ತುತ ಶೇಕಡಾ ೭೮.೧೦ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ೭೪.೩೮ ಕೋಟಿ ರೂ. ಖರ್ಚಾಗಿದೆ. ಒಟ್ಟಾರೆ ೯೭೫೪.೪೯ ಚ.ಮೀ. ಅಳತೆಯಲ್ಲಿ ಬೇಸ್ಮೆಂಟ್, ೬೨೯೨.೩೩೧ ಚ.ಮೀ. ಅಳತೆಯಲ್ಲಿ ಲೋಯರ್ ಗ್ರೌಂಡ್ ಫ್ಲೋರ್, ೫೦೬೬.೦೮ ಚ.ಮೀ. ಅಳತೆಯಲ್ಲಿ ಅಪ್ಪರ್ ಗ್ರೌಂಡ್ ಫ್ಲೋರ್, ೩೬೨೯.೧೬ ಚ.ಮೀ. ಅಳತೆಯಲ್ಲಿ ಮೊದಲ/ಎರಡನೇ/ಮೂರನೇ ಮಹಡಿಯನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ನಗರದ ಈ ನೂತನ ಬಸ್ ನಿಲ್ದಾಣದಲ್ಲಿ ಲೋಯರ್ ಗ್ರೌಂಡ್ ಫ್ಲೋರ್ನಲ್ಲಿ ೩೦ ಹಾಗೂ ಅಪ್ಪರ್ ಗ್ರೌಂಡ್ ಫ್ಲೋರ್ನಲ್ಲಿ ೩೫ ಸೇರಿದಂತೆ ಒಟ್ಟು ೬೫ ಬಸ್ಗಳು ನಿಲ್ಲಲು ಅವಕಾಶ ಕಲ್ಪಿಸಲಾಗಿದೆ. ಬೇಸ್ಮೆಂಟ್ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆಯಲ್ಲದೇ, ಮೇಲ್ಮಹಡಿಗಳಲ್ಲಿ ಕೆಎಸ್ಆರ್ಟಿಸಿ ಆಡಳಿತ ಕಚೇರಿ, ಶಾಪಿಂಗ್ ಮಾಲ್, ಕುಡಿಯುವ ನೀರು, ಶೌಚಾಲಯ, ಲಿಫ್ಟ್, ಮಳೆನೀರು ಕೋಯ್ಲು, ಮೆಡಿಕಲ್ ಸೆಂಟರ್, ಮುಂಗಡ ಟಿಕೇಟ್ ಕಾಯ್ದಿರಿಸುವ ಕೌಂಟರ್, ಕ್ಲಾಕ್ ರೂಂ, ಫೈರ್ ಸೇಫ್ಟಿ, ಮಹಿಳೆಯರಿಗಾಗಿ ರೆಸ್ಟ್ ರೂಂ, ಬೇಬಿ ಕೇರ್ ಕೊಠಡಿಗಳ ಸೌಕರ್ಯವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಪ್ರದೇಶವನ್ನು ಮುಂದಿನ ಯೋಜನೆಗಳಿಗಾಗಿ ಕಾಯ್ದಿರಿಸುಲಾಗುವುದು. ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಯಾವುದೇ ಅನುದಾನದ ಕೊರತೆ ಇಲ್ಲ ಎಂದು ತಿಳಿಸಿದರು.
ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರಳಲು ಬಸ್ಸುಗಳಿಗಾಗಿ ಪರದಾಡಬೇಕಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಉತ್ತರಿಸಿದ ಸಚಿವರು, ಕೊರೋನಾ ಸಂದರ್ಭದಲ್ಲಿ ಬಸ್ಸುಗಳ ಕಾರ್ಯಾಚರಣೆ ಸಂಖ್ಯೆ ಕಡಿಮೆಯಾಗಿದ್ದರಿಂದ ಈ ಪರಿಸ್ಥಿತಿ ಉಂಟಾಗಿದೆ. ಈ ಹಿಂದೆ ೨೦೧೬ರಲ್ಲಿ ಸಾರಿಗೆ ಸಚಿವರಾಗಿದ್ದಾಗ ಚಾಲಕ/ನಿರ್ವಾಹಕರನ್ನು ನೇಮಕಾತಿ ಮಾಡಲಾಗಿತ್ತು. ನಂತರ ೭ ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಈ ನಿಟ್ಟಿನಲ್ಲಿ ಹೊಸ ನೇಮಕಾತಿ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ. ಅಲ್ಲದೇ ೫೦೦೦ ಹೊಸ ಬಸ್ಸುಗಳ ಖರೀದಿಗೆ ಮುಖ್ಯಮಂತ್ರಿಗಳು ೫೦೦ ಕೋಟಿ ರೂ.ಗಳ ಅನುದಾನ ಒದಗಿಸಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯದಲ್ಲಿ ೧೫ ವರ್ಷ ಪೂರ್ಣಗೊಂಡ ಸರ್ಕಾರಿ ವಾಹನ ಸೇರಿದಂತೆ ಎಲ್ಲಾ ವಾಹನಗಳನ್ನು ನೋಂದಣಿ ಮಡಲು ಅವಕಾಶವಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಪ್ರಾದೇಶಿಕ ಸಾರಿಗೆ ಇಲಾಖೆಯ ಎಲ್ಲಾ ಸೇವೆಗಳನ್ನು ಆನ್ಲೆöÊನ್ ಮೂಲಕ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಶಾಸಕ ಜ್ಯೋತಿಗಣೇಶ್, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ, ಕೆ.ಎಸ್.ಆರ್.ಟಿ.ಸಿ. ಎಂ.ಡಿ. ಅನ್ಬುಕುಮಾರ್ ಹಾಗೂ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಉಪಸ್ಥಿತರಿದ್ದರು.
ಚಾಲಕ/ನಿರ್ವಾಹಕ ನೇಮಕಕ್ಕೆ ಕ್ರಮ- ರಾಮಲಿಂಗರೆಡ್ಡಿತುಮಕೂರು
Leave a comment
Leave a comment