ಕೊಬ್ಬರಿಗೆ ಕ್ವಿಂಟಾಲ್ಗೆ ಕನಿಷ್ಠ ೨೦ ಸಾವಿರ ಬೆಂಬಲ ಬೆಲೆಯನ್ನು ಕೇಂದ್ರ ಸರಕಾರ ಘೋಷಿಸಬೇಕು. ರಾಜ್ಯ ಸರಕಾರ ಕ್ವಿಂಟಾಲ್ ಕೊಬ್ಬರಿಗೆ ೫ ಸಾವಿರ ರೂ ಪ್ರೋತ್ಸಾಹ ದನ ನೀಡಬೇಕೆಂದು ಆಗ್ರಹಿಸಿ ಅಕ್ಟೋಬರ್ ೩ ರಂದು ಸಂಯುಕ್ತ ಹೋರಾಟ-ಕರ್ನಾಟಕ ವತಿಯಿಂದ ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಂಯುಕ್ತ ಹೋರಾಟದ ಸಂಚಾಲಕ ಸಿ.ಯತಿರಾಜು ತಿಳಿಸಿದ್ದಾರೆ.
ಇಂದು ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಸಭೆ ಮತ್ತು ರೈತರ ಸಮಾವೇಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಒಂದೆಡೆ ಪ್ರಕೃತಿ ವಿಕೋಪದಿಂದ ರೈತರು ಸಂಕಷ್ಟಕ್ಕೆ ಒಳಗಾದರೆ,ಇನ್ನೊಂದೆಡೆ ಪ್ರಭುತ್ವದ ನೀತಿಗಳಿಂದ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.ಒಕ್ಕೂಟ ಸರಕಾರ ತೈಲ ಉತ್ಪನ್ನಗಳನ್ನು ಅತ್ಯಂತ ಕಡಿಮೆ ಸುಂಕದಲ್ಲಿ ಮಲೇಶಿಯಾ,ಇಂಡೋನೆಷಿಯಾ,ಸೌಧಿ,ಥಾಯ್ಲ್ಯಾAಡ್ ಮುಂತಾದ ಕಡೆಗಳಿಂದ ಅಮದು ಮಾಡಿಕೊಳ್ಳುತ್ತಿರುವ ಪರಿಣಾಮ ದೇಶದ ಕೊಬ್ಬರಿಯನ್ನು ಕೇಳುವವರೆ ಇಲ್ಲದಂತಾಗಿದೆ.ಸರಕಾರ ತನ್ನ ನೀತಿಗಳಿಂದ ಹಿಂದೆ ಸರಿಯಬೇಕೆಂದು ಒತ್ತಾಯಿಸಿ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್ ೦೩ಕ್ಕೆ ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ,ಕುಸಿದಿರುವ ಕೊಬ್ಬರಿ ಬೆಲೆ ಹೆಚ್ಚಳಕ್ಕೆ ಹಲವಾರು ಹಂತದ ಹೋರಾಗಳನ್ನು ಕೊಬ್ಬರಿ ಬೆಳೆಯುವ ಸುಮಾರು ೧೫ ಜಿಲ್ಲೆಗಳಲ್ಲಿ ರೈತರ ಸಂಘ ಮಾಡಿದೆ.ಸಂಸದರು ಶಾಸಕರಿಗೆ ಮನವಿ, ಜನಪ್ರತಿನಿಧಿಗಳ ಮನೆ ಮುಂದೆ ಧರಣಿ, ಪಾದಯಾತ್ರೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಪ್ರಭುತ್ವದ ಗಮನ ಸೆಳೆಯಲು ಅಕ್ಟೋಬರ್ ೦೩ ರಂದು ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ.ಕೃಷಿ ಬೆಲೆ ನಿಗಧಿ ಆಯೋಗ ನೀಡಿದ ೧೬೭೬೦ ರೂ ಬೆಂಬಲ ಬೆಲೆಯನ್ನು ಕಡೆಗಣಿಸಿ ಕೇಂದ್ರ ಸರಕಾರ ಕೇವಲ ೧೧೭೫೦ ರೂ ನಿಗಧಿ ಪಡಿಸಿದೆ.ಅಲ್ಲದೆ ರಾಜ್ಯ ಸರಕಾರ ಕೇವಲ ೧೨೫೦ ರೂ ಮಾತ್ರ ಪ್ರೋತ್ಸಾಹ ಧನ ನೀಡಿ, ರೈತರನ್ನು ಕಡೆಗಣಿಸಿ, ಹಾಗಾಗಿ ಕೇಂದ್ರ ಸರಕಾರ ಒಂದು ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ ೨೦ ಸಾವಿರ ರೂ ಬೆಂಬಲ ಬೆಲೆ ನೀಡಬೇಕು.ಹಾಗೆಯೇ ರಾಜ್ಯ ಸರಕಕಾರ ೫ ಸಾವಿರ ರೂ ಪ್ರೋತ್ಸಾಹ ಧನ ನೀಡಿದರೆ ಡಾ.ಸ್ವಾಮೀನಾಥನ್ ಆಯೋಗದ ಸಿ.ಟು+೫೦% ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ತೆಂಗು ಬೆಳೆಯುವ ಜಿಲ್ಲೆಗಳ ರೈತರು, ರೈತ ಪ್ರತಿನಿಧಿಗಳು ಸೇರಿ ಅಕ್ಟೋಬರ್ ೦೩ ರಂದು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಅಲ್ಲಿಂದ ರಾಜಭವನ ಚಲೋ ಹಮ್ಮಿಕೊಳ್ಳಲಾಗಿದ್ದು, ತೆಂಗು ಬೆಲೆಯುವ ಪ್ರದೇಶದ ಎಲ್ಲ ರೈತರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ರಾಜ್ಯದ ನೀರಾವರಿ ವಿಚಾರದಲ್ಲಿ ಚಾರಿತ್ರಿಕ ಹಿನ್ನೆಡೆಯಾಗಿದೆ.ಮದ್ರಾಸ್ ಪ್ರಾಂತದಿAದಲೂ ನಮ್ಮ ಜನ ಈ ತೊಂದರೆಯನ್ನು ಅನುಭವಿಸಿಕೊಂಡು ಬಂದಿದಾರೆ. ಇದರಿಂದ ಹೊರಬರಲು ೧೯೩೬ರಲ್ಲಿ, ೧೯೫೦ರಲ್ಲಿ ಮತ್ತು ೧೯೫೬ರಲ್ಲಿ ಅವಕಾಶವಿದ್ದರೂ ಸಹ ಅಂದಿನವರು ಗಮನಹರಿಸಲಿಲ್ಲ.ಇದರ ಫಲವಾಗಿ ಅಂತರರಾಜ್ಯ ನದಿ ನೀರು ಹಂಚಿಕೆಗೆ ಸಂಬAಧಿಸಿದ ಕಾವೇರಿ ನ್ಯಾಯಾಧೀಕರಣ ರಚಿಸಿದಾಗಲು ರಾಜ್ಯದ ಜನಪ್ರತಿನಿಧಿಗಳು ರಾಜ್ಯದ ಹಿತವನ್ನು ಮರೆತ ಪರಿಣಾಮ ಇಂದು ನಮಗೆ ನೀರು ಇಲ್ಲದಿದ್ದಾಗಲೂ, ತೆಮಿಳುನಾಡಿಗೆ ನೀರು ಬಿಡುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.ಇದು ತಪ್ಪಬೇಕೆಂದರೆ,ರಾಜ್ಯ ಸರಕಾರ ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯ ಮುಂದೆ ಅಫೀಲು ಹೋಗಿ,ಸಂಕಷ್ಟ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಸ್ಪಷ್ಟವಾಗಿ ನಮೂದಿಸುವಂತೆ ಕೋರಬೇಕಾಗಿದೆ.ಎರಡು ಕಡೆಯ ನೀರಾವರಿ ತಜ್ಞರು ಕುಳಿತು ಸೌರ್ಹಾಧ ಯುತವಾಗಿ ಸಮಸ್ಯೆ ಬಗೆಹರಿಸಬೇಕಾಗಿದೆ ಎಂದರು.
ದೇಶದ ಪ್ರಧಾನಿ ನರೇಂದ್ರಮೋದಿ ಅವರು ವಿಶ್ವದ ಸಮಸ್ಯೆ ಬಗೆಹರಿಸುವ ಉತ್ಸುಕತೆ ತೋರುತ್ತಾರೆ. ತಮ್ಮದೇ ಒಕ್ಕೂಟ ವ್ಯವಸ್ಥೆಯ ಎರಡು ರಾಜ್ಯಗಳ ನಡುವೆ ಉದ್ಬವಿಸಿರುವ ಕಾವೇರಿ ನೀರು ಹಂಚಿಕೆಯ ಸಮಸ್ಯೆಯನ್ನು ಬಗೆಹರಿಸಲು ಮುಂದಾಗುತ್ತಿಲ್ಲ. ಈಗಲಾದರು ಒಕ್ಕೂಟ ಸರಕಾರ ಕಾವೇರಿ ವಿವಾದದಲ್ಲಿ ಮದ್ಯ ಪ್ರವೇಶಿಸಿ, ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕೆAದು ಬಡಗಲಪುರ ನಾಗೇಂದ್ರ ಆಗ್ರಹಿಸಿದರು.
ಸುದ್ದಿಗೋಷ್ಠಿಯ ನಂತರ ನಗರದ ಸ್ವಾತಂತ್ರ ಚೌಕದಲ್ಲಿ ಕಾವೇರಿ ವಿವಾದ ಬಗೆಹರಿಸುವಂತೆ, ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ,ನೂರಾರು ರೈತರು ಪ್ರತಿಭಟನೆ ನಡೆಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಎಐಕೆಕೆಎಂಎಸನ ಹೆಚ್.ಪಿ.ಶಿವಪ್ರಕಾಶ್, ಕೆ.ಆರ್.ಆರ್.ಎಸ್ನ ಸಿದ್ದವೀರಪ್ಪ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಕೆಪಿಆರ್.ಎಸ್ನ ಬಿ.ಉಮೇಶ್,ಎಐಕೆಕೆಎಂಎಸ್ನ ಎಸ್.ಎನ್.ಸ್ವಾಮಿ, ಎಐಕೆಎಸನ ಗಿರೀಶ್,ಕೆ.ಆರ್.ಆರ್.ಎಸ್ನ ಶಂಕರಪ್ಪ.ಜಿ, ಅಜಪ್ಪ ಮತ್ತಿತರರು ಉಪಸ್ಥಿತರಿದ್ದರು.
ಸಂಯುಕ್ತ ಹೋರಾಟ-ಕರ್ನಾಟಕ ವತಿಯಿಂದ ರಾಜಭವನ ಚಲೋ

Leave a comment
Leave a comment