ವಿಶ್ವ ದಾಖಲೆಯ ನೃತ್ಯ ಸಾಧಕರಿಗೆ ಪ್ರಶಸ್ತಿ ವಿತರಣೆ
ತುಮಕೂರು: ಪುಷ್ಕರ ಸೆಂಟರ್ ಫಾರ್ ಪರ್ಫಾಮಿಂಗ್ ಆಟ್ಸ್ ಹಾಗೂ ರಾಜರಾಜೇಶ್ವರಿ ನೃತ್ಯ ಕಲಾ ಮಂದಿರದ ಸಹಯೋಗದಲ್ಲಿ ನಗರದಲ್ಲಿ ಪುಷ್ಕರ ನೃತ್ಯ ಹಬ್ಬ ಆಚರಣೆಯಾಯಿತು. ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಗಳ ವಿದ್ಯಾರ್ಥಿಗಳು ಭರತ ನಾಟ್ಯ ಪ್ರದರ್ಶಿಸಿ ಗಮನ ಸೆಳೆದರು.
ಇದರ ಅಂಗವಾಗಿ ನಡೆದ ಸಮಾರಂಭದಲ್ಲಿ ಇತ್ತೀಚೆಗೆ ನಡೆದ ಮೆಘಾ ಈವೆಂಟ್ನಲ್ಲಿ ವಿಶ್ವ ದಾಖಲೆಯ ನೃತ್ಯ ಪ್ರದರ್ಶನ ಮಾಡಿದ ಸಂಸ್ಥೆಯ ವಿದ್ಯಾರ್ಥಿಗಳಿಗೆ ವಿವಿಧ ಹತ್ತು ದೇಶಗಳ ಫಲಕ ಹಾಗೂ ಪ್ರಶಸ್ತಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರಿನ ಡ್ಯಾನ್ಸ್ ಯೂನಿವರ್ಸಿಟಿ ಆಫ್ ಫೈನ್ ಆರ್ಟ್ಸ್ನ ವಿಭಾಗದ ಮುಖ್ಯಸ್ಥರಾದ ಡಾ.ಕೆ.ಕುಮಾರ್, ಸಂಗೀತ, ಸಾಹಿತ್ಯ, ಕಲೆ ಎಲ್ಲಾ ಶಾಸ್ತçಗಳನ್ನೂ ಒಳಗೊಂಡ ನೃತ್ಯ ನಮ್ಮ ದೇಶದ ಹಿರಿಮೆ. ನೃತ್ಯ ಮಕ್ಕಳಲ್ಲಿ ಶಿಸ್ತು, ಸಂಯಮ, ಸಂಸ್ಕಾರ, ಸಂಸ್ಕೃತಿ ಕಲಿಸುತ್ತದೆ, ವಿನಯಶೀಲರಾಗಿ ಬಾಳುತ್ತಾರೆ. ನೃತ್ಯಕ್ಕೆ ಅಂತಹ ಶಕ್ತಿ ಇದೆ ಎಂದು ಹೇಳಿದರು.
ಭಾರತೀಯ ಸಂಸ್ಕೃತಿಯಲ್ಲಿ ಇಂತಹ ನೃತ್ಯ ವಿದ್ಯೆಯ ವಿಶೇಷವಿದೆ. ಮಕ್ಕಳಿಗೆ ಇಂತಹ ಕಲೆ ಕಲಿಸುವುದರಿಂದ ಆವರು ಸಂಸ್ಕಾರವoತ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ತಮ್ಮ ಬದುಕಿನನಲ್ಲಿ ಶಿಸ್ತು, ಸನ್ನಡತೆ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ ಗೌಡ ಮಾತನಾಡಿ, ಪ್ರತಿಯೊಬ್ಬರೂ ಸಂಗೀತ, ಸಾಹಿತ್ಯ, ಲಲಿತ ಕಲೆಯಂತಹ ಯಾವುದಾದರೂ ಕಲೆಯನ್ನು ಅಳವಡಿಸಿಕೊಳ್ಳಬೇಕು. ನಾವು ಯಾವುದೇ ವೃತ್ತಿ ಮಾಡುತ್ತಿರಲಿ ಇಂತಹ ಕಲೆಯು ವಿಶೇಷ ವ್ಯಕ್ತಿಯಾಗಿ ಸಮಾಜ ಗುರುತಿಸುವಂತೆ ಮಾಡುತ್ತದೆ ಎಂದರು.