ನಿಸ್ವಾರ್ಥ ಸೇವೆಗೆ ಪ್ರತಿರೂಪವೇಡಾ. ಪುನೀತ್ರಾಜ್ಕುಮಾರ್ :ತುಮಕೂರು ಅರಳಿಮರ ಗೆಳೆಯರ ಬಳಗ
ತುಮಕೂರು :ಕರುನಾಡರತ್ನ, ನಟಸಾರ್ವಭೌಮ, ಡಾ. ಪುನೀತ್ರಾಜ್ಕುಮಾರ್ರವರ ೨ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ತುಮಕೂರುತಾಲ್ಲೂಕು ಪಂಚಾಯಿತಿ ಬಳಿಯಿರುವ ಅರಳಿಮರ ಗೆಳೆಯರ ಬಳಗದ ವತಿಯಿಂದಅಪ್ಪು ಪುಣ್ಯಸ್ಮರಣೆಕಾರ್ಯಕ್ರಮವನ್ನುಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆಅನ್ನ ಸಂತರ್ಪಣೆಯನ್ನು ನೆರವೇರಿಸಲಾಯಿತು. ಪುಣ್ಯಸ್ಮರಣೆಯನ್ನು ಆಚರಿಸಿ ಮಾತನಾಡಿದ ಗೆಳೆಯರ ಬಳಗದವರು ಅಪ್ಪುಅವರುತಮ್ಮಜೀವಿತಾವಧಿಯಲ್ಲಿ ಮಾಡಿದ ಸಾಕಷ್ಟು ಜನೋಪಯೋಗಿ ಕಾರ್ಯಗಳು ಇಂದಿಗೂ ಎಷ್ಟೋ ಜನರಿಗೆ ಪ್ರೇರಣೆಯಾಗಿದೆಎಂದರು.
ಅಪ್ಪುಅವರುತಾವು ಮಾಡಿದ ಪುಣ್ಯ ಕಾರ್ಯಗಳು, ಅವರುಅಗಲಿದ ನಂತರವಷ್ಟೇ ಸಾರ್ವಜನಿಕರಿಗೆ ತಿಳಿದಿದ್ದು ಅವರ ನಿಸ್ವಾರ್ಥ ಸೇವೆಗೆ ಪ್ರತಿರೂಪವಾಗಿದೆಎಂದು ತಿಳಿಸಿದರು, ನಾವುಗಳು ಅವರಷ್ಟು ಸೇವೆಯನ್ನು ಮಾಡಲಾಗದಿದ್ದರು, ನಮ್ಮಗಳಿಗೆ ಕೈಲಾದ ಸಹಕಾರವನ್ನುಜನರಿಗೆ ಮಾಡುತ್ತಿದ್ದೇವೆಎಂಬುದರತೃಪ್ತಿ ನಮಗಿದೆಂದುತಮ್ಮ ಹೆಸರನ್ನು ಹೇಳಲು ಇಚ್ಛಿಸಿದ ಅರಳಿಮರ ಗೆಳೆಯರ ಬಳಗದ ಒಬ್ಬರು ಹೇಳಿದರು, ಇದಕ್ಕೆ ಪ್ರೇರಣೆಯೂ ಸಹ ಅಪ್ಪುಅವರೇಆಗಿದ್ದು, ಅವರಂತೆಅಲ್ಲದಿದ್ದರೂಅವರರೀತಿಯಲ್ಲಿ ಸೇವೆ ಮಾಡಬೇಕುಎಂಬುದೇ ನಮ್ಮಗಳ ಆಶಯವಾಗಿದೆಂದು ಹೇಳಿದರು.