ಮತ ಜಾಗೃತಿ ಅಭಿಯಾನದ ಅಂಗವಾಗಿ ಜನ ಪ್ರತಿಜ್ಞೆ
ಕಳೆದ ೨ ತಿಂಗಳಿನಿAದ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ನಡೆದ “ಸಂವಿಧಾನ ರಕ್ಷಿಸಿ ಬಹುತ್ವ ಕರ್ನಾಟಕ ಉಳಿಸಿ” ನಮ್ಮ ಮತ ವಸತಿ ಹಕ್ಕಿಗಾಗಿ, ನಗರ ಉದ್ಯೋಗ ಖಾತ್ರಿ, ಬಡತನ ಮುಕ್ತಕ್ಕಾಗಿ ಮತ್ತು ಸ್ಲಂ ಜನರ ಸಮಗ್ರ ವಿಮೋಚನೆಗಾಗಿ ಮತ ಜಾಗೃತಿ ಅಭಿಯಾನ ಭಾಗದ ಅಂಗವಾಗಿ ಮತದಾರರ ಪ್ರಜಾಪ್ರತಿಜ್ಞಾ ದಿನವನ್ನು ಇಂದು ಯುವಜನ ಸಂಪನ್ಮೂಲ ಕೇಂದ್ರದಲ್ಲಿ ಸ್ವೀಕರಿಸುವ ಮೂಲಕ ಸಮಾರೋಪಗೊಳಿಸಲಾಯಿತು.
ಜನಪ್ರತಿಜ್ಞೆಯನ್ನು ಭೋದಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕದ ಎ.ನರಸಿಂಹಮೂರ್ತಿ, ೩೨ ಕೊಳಚೆ ಪ್ರದೇಶಗಳಲ್ಲಿ ನಡೆದ ಜಾಗೃತಿ ಕೊಳಗೇರಿ ಜನರಲ್ಲಿ ರಾಜಕೀತ ಪ್ರಜ್ಞೆಯನ್ನು ತಂದುಕೊಟ್ಟಿದೆ ಸಂವಿಧಾನದ ಸಮಪಾಲು ಸಮಬಾಳು ಆಶಯವನ್ನು ಘೋಷಿಸಿರುವ ಪಕ್ಷದ ಮೇಲೆ ಜನರ ಒಲವು ಕಂಡು ಬರುತ್ತಿದೆ. ಆದರೆ ಚುನವಾಣೆಯ ೨ ದಿನಗಳ ಮುಂಚಿತವಾಗಿ ಕೊಳಗೇರಿಗಳು ಸೇರಿದಂತೆ ನಗರದ ಮಧ್ಯಮ ವರ್ಗದ ಪ್ರದೇಶ ಹಾಗೂ ಬಡವಾಣೆಗಳಲ್ಲಿ ಆಡಳಿತ ರೂಢ ಮತ್ತು ಇತರೆ ಪಕ್ಷಗಳು ಚುನಾವಣಾ ಆಯೋಗದ ಕಣ್ಣುತಪ್ಪಿಸಿ ಹಣದ ಆಮಿಷ ಮತ್ತು ಪ್ರಲೋಪನೆಗಳಿಂದ ಪ್ರಜಾತಂತ್ರವನ್ನು ದಿಕ್ಕು ತಪ್ಪಿಸುತ್ತಿರುವುದು ಸ್ಪಷ್ಟವಾಗಿದೆ ಹಾಗಾಗಿ ಚುನಾವಣಾ ಆಯೋಗ ಇನ್ನೂ ಹೆಚ್ಚಿನ ಸುಧಾರಣೆಗಳ ಮೂಲಕ ಪ್ರಜಾತಂತ್ರವನ್ನು ಎತ್ತಿಹಿಡಿಯಬೇಕಿದೆ. ನಮ್ಮ ಜಾಗೃತಿಯಿಂದ ಎಲ್ಲಾ ರಾಜಕೀತ ಪಕ್ಷಗಳ ಅಭ್ಯರ್ಥಿಗಳು ಸ್ಲಂ ಜನರ ಸಮಸ್ಯೆಗಳ ಮೇಲೆ ಮಾತನಾಡಿರುವುದು. ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಜನಪ್ರತಿಜ್ಞೆಯನ್ನು ಭೋದಿಸಿದರು.



