ಝಕಾತ್ ಹಣದಿಂದ ದಿನಸಿ ಕಿಟ್ ವಿತರಣೆ: ರೆಸ್ಪಾನ್ಸಿವ್ ಕೇರ್ ಫೌಂಡೇಶನ್ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ
ತುಮಕೂರು: ನಾಡಿನಾದ್ಯಂತ ಮುಸ್ಲಿಂ ಭಾಂದವರು ಪವಿತ್ರ ರಂಜಾನ್ ಉಪವಾಸ ಕೈಗೊಂಡಿದ್ದು ಶ್ರದ್ಧಾ, ಭಕ್ತಿಯಿಂದ ವೃತ ಆಚಾರಣೆ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದ ಬಡವರು, ನಿರ್ಗತಿಕರಿಗೆ ರೆಸ್ಪಾನ್ಸಿವ್ ಕೇರ್ ಫೌಂಡೇಶನ್ ವತಿಯಿಂದ ದಿನಸಿ ಕಿಟ್ ವಿತರಣೆ ಮಾಡಲಾಯಿತು.
ಜಿಲ್ಲೆಯ ಗುಬ್ಬಿ ತಾಲೂಕಿನ ಕೆ.ಜಿ ಟೆಂಪಲ್ ಗ್ರಾಮದಲ್ಲಿ ಬಡವರಿಗೆ, ನಿರ್ಗತಿಕರಿಗೆ ಝಕಾತ್ ಹಣದಿಂದ ಸಹಾಯ ಮಾಡುವ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದ ಜನರಿಂದ ರೆಸ್ಪಾನ್ಸಿವ್ ಕೇರ್ ಫೌಂಡೇಶನ್ ವತಿಯಿಂದ ಝಕಾತ್ ಹಣವನ್ನು ಸಂಗ್ರಹಿಸಿ ದಿನನಿತ್ಯ ಬಳಸುವ ದಿನಸಿ
ಕಿಟ್ ಗಳು ವಿತರಿಸಿದರು.
ಪವಿತ್ರವಾದ ರಂಜಾನ್ ಮಾಹೆಯಲಿ ಮುಸ್ಲಿಂ ಸಮುದಾಯದಿಂದ ಝಕಾತ್ ಹಣದಲ್ಲಿ ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡುವ ಪದ್ಧತಿ, ಸಮುದಾಯದ ಜನರಿಂದ ಸಂಗ್ರಹಿಸಿದ ಹಣದಿಂದ ರೆಸ್ಪಾನ್ಸಿವ್ ಕೇರ್ ಫೌಂಡೇಶನ್ ವತಿಯಿಂದ ದಿನನಿತ್ಯ ಬಳಸುವ ದಿನಸಿ ಅಕ್ಕಿ, ಬೇಳೆ, ಇತರೆ ದಿನಸಿ ಕಿಟ್ ಗಳನ್ನು ಬಡವರಿಗೆ, ನಿರ್ಗತಿಕರಿಗೆ ಸುಮಾರು 60 ಮನೆಗಳಿಗೆ ಪರಿಶೀಲಿಸಿ ದಿನಸಿ ಕಿಟ್ ಗಳು ವಿತರಿಸಿದರು.
ಈ ಸಂದರ್ಭದಲ್ಲಿ ರೆಸ್ಪಾನ್ಸಿವ್ ಕೇರ್ ಫೌಂಡೇಶನ್ ಅಧ್ಯಕ್ಷರಾದ ರಹಮತ್ ಅಲಿ, ನಿರ್ದೇಶಕರಾದ ಮೋಯಿನುದ್ದಿನ್ ರಹ್ಮಾನ್, ಪತ್ರಕರ್ತರಾದ ಸೈಯದ್ ಯೂಸುಫ್ ಉಲ್ಲಾ, ಸೇರಿದಂತೆ ಮತ್ತಿತರರು ಇದ್ದರು.
Masha allha❤❤❤❤