ಸುಮಾರು ವರ್ಷಗಳಿಂದ KBS ಬ್ಯಾಂಕಿನ CSR ಅನುದಾನದಲ್ಲಿ 100 ವಿಕಲ ಚೇತನರಿಗೆ ಉಚಿತ ಸಾಧನ ಸಲಕರಣೆಗಳ ವಿತರಣೆ.ಕಲಬುರಗಿ:- ಕೆಬಿಎಸ್ ಬ್ಯಾಂಕಿನ ೨೩ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಇಂದು ನಗರದಲ್ಲಿ ಜರುಗಿತು. ಅಂಗವಿಕಲರಿಗೆ ಅವಶ್ಯಕ ವಿರುವ ಸಾಮಾಗ್ರಿಗಳನ್ನು ವಿತರಿಸಲಾಯಿತು. ಸುಮಾರು ೧೦೦ ಜನ ಅಂಗವಿಕಲರಿಗೆ ಉಚಿತವಾಗಿ ಕೆಬಿಎಸ್ ಬ್ಯಾಂಕಿನ ಸಿ ಎಸ್ ಆರ್ ಅನುದಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ೧೦೦ ಜನ ವಿಕಲಚೇತನರಿಗೆ ಅವರಿಗೆ ಅವಶ್ಯಕತೆ ಇರುವ ಸಲಕರಣೆಗಳನ್ನು ನೀಡಲಾಯಿತು. ಬ್ಯಾಂಕಿನ ವಾರ್ಷಿಕ ಆದಾಯದಲ್ಲಿ ಶೇ ಇಂತಿಷ್ಟು ಮೊತ್ತ ಅಂದು ಸಾರ್ವಜನಿಕರಿಗಾಗಿ ಮೀಸಲಿಟ್ಟು ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಬಂದಿದೆ.ಹೀಗೆ ಮುಂದಿನ ದಿನಗಳಲ್ಲಿ ಈ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳೆಯಲ್ಲಿ ಎಂದು ಸಾರ್ವಜನಿಕರು ಶುಭ ಕೋರಿದರು. ಈ ಸಂದರ್ಭದಲ್ಲಿ ಕೆಬಿಸ್ ನ ಜನರಲ್ ಮ್ಯಾನೇಜರ್ ಗುರುಪ್ರಸಾದ ದೇಶಪಾಂಡೆ, ಅಂಗವಿಕಲರ ಜಿಲ್ಲಾ ಅಧಿಕಾರಿ ಸಾಧಿಕ್ ಹುಸೇನ್ ಖಾನ್, ಕೆಬಿಎಸ್ ಬ್ಯಾಂಕ್ ನ ಮುಖ್ಯಸ್ಥರಾದ ವಂದನಾ ಪಿ., ಕಲಬುರಗಿ ಶಾಖಾ ವ್ಯೆವಸ್ಥಾಪಕರಾದ ನರೇಶ ಚಿತ್ರಸಾಲ್, ಸಿಬ್ಬಂದಿಗಳಾದ ಬಸವರಾಜ್ ಸಿ , ಮೋನಪ್ಪ ಸಿ ,ಪ್ರಕಾಶ ಗೌರೆ, ಶರಣಯ್ಯ ಪಾಟಿಲ್ ,ಪುಂಡಲೀಕ ಹೊಸಮನಿ, ಪ್ರತೀಭಾ ಕಟ್ಟಿ, ಸುಧಾ ಕಡಗದ ಹಾಗೂ ಇತರರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ವರದಿ:- ರವಿಕುಮಾರ್ ಬಡಿಗೇರ .