ನಗರದ ಟೌನ್ಹಾಲ್ ವೃತ್ತದಲ್ಲಿ ರಾಷ್ಟಿçÃಯ ಮಹಿಳಾ ಕುಸ್ತಿಪಟುಗಳ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಮತ್ತು ದೆಹಲಿ ಪೋಲಿಸರ ವರ್ತನೆ ಖಂಡಿಸಿ ಹಾಗೂ ಆರೋಪಿ ಬಿಜೆಪಿ ಸಂಸದ ಬ್ರಿಜ್ಭೂಷಣ್ ಸಿಂಗ್ ರವರನ್ನು ಬಂಧಿಸಲು ಒತ್ತಾಯಿಸಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ಒಲಂಪಿಕ್ ಕ್ರೀಡಾ ವಿಜೇತರ ಮೇಲಿನ ಧೌರ್ಜನ್ಯ ಖಂಡನೀಯ ಟಿ.ಕೆ ಆನಂದ್
ಪ್ರತಿಭಟನೆಯಲ್ಲಿ ರಾಷ್ಟಿçÃಯ ಅಥ್ಲೇಟಿಕ್ ಕ್ರೀಡಾಪಟು ಟಿ.ಕೆ ಆನಂದ್ ಭಾಗವಹಿಸಿ ಮಾತನಾಡಿ ಒಲಂಪಿಕ್ ಕ್ರೀಡೆಯಲ್ಲಿ ಭಾಗವಹಿಸಿ ಪದಕ ಗೆಲ್ಲುವುದು ಅಸ್ಟು ಸುಲಭದ ಮಾತಲ್ಲ ನಮ್ಮ ದೇಶದ ತ್ರಿವರ್ಣ ಧ್ವಜವನ್ನು ಜಗತ್ತಿನಾದ್ಯಂತ ಮಲ್ಲ ಯುದ್ಧದಲ್ಲಿ (ಕುಸ್ತಿ) ರಾರಾಜಿಸುವಂತೆ ಸಾಕ್ಷಿ ಮಲ್ಲಿಕ್ ಮತ್ತು ವಿನೇಶ್ ಪೋಗಟ್ ಸಾಧನೆ ಮಾಡಿದ್ದು ಇಂತಹ ಕ್ರೀಡಾಪಟುಗಳ ಮೇಲೆ ದೆಹಲಿ ಪೋಲಿಸರು ನಡೆಸಿರುವ ಧೌರ್ಜನ್ಯ ಅಮಾನವೀಯ ಮತ್ತು ಖಂಡನೀಯವಾಗಿದೆ. ಜಗತ್ತಿನಾದ್ಯಂತ ಮಹಿಳಾ ಕುಸ್ತಿಪಟುಗಳ ಹೋರಾಟಕ್ಕೆ ಬೆಂಬಲ ವ್ಯಕ್ತವಾಗುತ್ತಿದೆ ಸಂಸತ್ ಭವನ ಮುಖ್ಯವಾಗಿದೆ ಹೊರತು ಈ ದೇಶದ ಪ್ರಧಾನಿಗೆ ಕ್ರೀಡಾ ಪಟುಗಳ ನ್ಯಾಯಯುತ ಹೋರಾಟ ಮುಖ್ಯವಾಗಲಿಲ್ಲ ಕೂಡಲೇ ಆರೋಪಿಯನ್ನು ಬಂಧಿಸಿ ಕ್ರೀಡಾಪಟುಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ನಂತರ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕದ ಸಂಚಾಲಕರಾದ ಎ.ನರಸಿಂಹಮೂರ್ತಿ ಕ್ರೀಡಾಪಡುಗಳ ಭವಿಷ್ಯ ದೇಶದಲ್ಲಿ ಆಪಾಯದಲ್ಲಿದೆ ಕ್ರೀಡಾಪಟುಗಳ ಬಗ್ಗೆ ಸುಳ್ಳು ಸುದ್ಧಿ ಹಬ್ಬಿಸಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಎಸಗಿರುವ ಲೈಂಗಿಕ ಕಿರುಕುಳವನ್ನು ಮರೆಮಾಚಲಾಗುತ್ತಿದೆ. ಬ್ರಿಜ್ ಭೂಷಣ್ ಮೇಲಿನ ಪ್ರಕರಣಗಳು ಒಂದೆರೆಡಲ್ಲ ಹಲವಾರು ಪ್ರಕರಣಗಳು ಇದ್ದರು ಇದುವರೆಗೂ ಬಂಧಿಸಿಲ್ಲ ಭಾರತದ ಪ್ರಖ್ಯಾತ ಕುಸ್ತಿಪಟುಗಳು ಬೀದಿಗೆ ಬಂದು ಕುಸ್ತಿ ಫೆಡರೇಷನ್ ಅಧ್ಯಕ್ಷ ಲೈಂಗಿಕ ಕಿರುಕುಳ ನೀಡುವ ಬಗ್ಗೆ ಹೋರಾಟ ಮಾಡುತ್ತಿದ್ದರು. ದೂರು ದಾಖಲಾದರು ಸರ್ಕಾರ ಇನ್ನೂ ಏಕೆ ಬಂಧಿಸಿಲ್ಲ..? ಆತ ಅಷ್ಟೋಂದು ಪ್ರಭಾವಿಯೇ ಎಂಬ ಪ್ರಶ್ನೆ ಭಾರತಿಯರಲ್ಲಿ ಕಾಡುತ್ತಿದೆ, ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ, ದೈಹಿಕ ಕಿರುಕುಳ, ಸರ್ವಾಧಿಕಾರದ ಧೋರಣೆ ಮತ್ತು ಹಣಕಾಸಿನ ಅಕ್ರಮಗಳು ಸೇರಿದಂತೆ ಗಂಭೀರ ಆರೋಪಗಳು ಕೇಳಿ ಬಂದಿವೆ ಒಂದು ಪೋಸ್ಕೋ ಪ್ರಕರಣ ದಾಖಲಾಗಿದೆ. ಆದರೂ ಬ್ರಿಜ್ ಭೂಷಣ್ನನ್ನು ಸರ್ಕಾರ ಬಂಧಿಸದೇ ರಾಜಕೀಯ ಲೇಪನ ನೀಡುತ್ತಿರುವುದು ಸರಿಯಲ್ಲ, ಹಲವಾರು ಸಾಕ್ಷಧಾರಗಳು ಇದ್ದರು ಆರೋಪಿಯನ್ನು ಬಂಧಿಸದ ಈ ವಿಚಾರದ ಬಗ್ಗೆ ಮಾತನಾಡದ ಪ್ರಧಾನಿಗಳ ನಡೆ ಪ್ರಜಾಪ್ರಭುತ್ವದ ವಿರೋಧಿ ನಡೆಯಾಗಿದೆ. ಹಾಗಾಗಿ ದೇಶಾದ್ಯಂತ ಚಳುವಳಿ ರೂಪ ಪಡೆಯುತ್ತಿರುವ ಕುಸ್ತಿಪಟುಗಳ ಹೋರಾಟವನ್ನು ಬೆಂಬಲಿಸಬೇಕಿರುವುದು ಪ್ರಜ್ಞಾವಂತ ನಾಗರೀಕರ ಕರ್ತವ್ಯವಾಗಿದ್ದು. ಸ್ಲಂಗಳಲ್ಲಿರುವ ಶ್ರಮ ಜೀವಿಗಳು ಈ ಹೋರಾಟವನ್ನು ಬೆಂಬಲಿಸಿರುವುದು ವಿಶೇಷವಾಗಿದೆ ಎಂದರು.
ರಾಷ್ಟ್ರೀಯ ಕುಸ್ತಿಪಟುಗಳ ಹೋರಾಟ ಬೆಂಬಲಿಸಿ ಸ್ಲಂ ಸಮಿತಿಯಿಂದ ಟೌನ್ಹಾಲ್ನಲ್ಲಿ ಪ್ರತಿಭಟನೆ
Leave a comment
Leave a comment