ತುಮಕೂರು:ಕೇಂದ್ರದ ಬಜೆಟ್ನಲ್ಲಿ ರಾಜ್ಯವನ್ನು ಕಡೆಗಣಿಸಲಾಗಿದೆ.ರಾಜ್ಯದ ಬಗ್ಗೆ ಕೇಂದ್ರ ಸರಕಾರ ಮಲತಾಯಿ ಧೋರಣೆಯನ್ನು ಮುಂದುವರೆಸಿದೆ, ಚೆಂಬು ನೀಡಿದೆ ಎಂದು ಆಪಾದಿಸಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಅವರ ನೇತೃತ್ವದಲ್ಲಿ ಇಂದು ಭದ್ರಮ್ಮ ವೃತ್ತದಲ್ಲಿ ಪ್ರತಿಭಟನೆ ನಡಸಲಾಯಿತು.ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಭದ್ರಮ್ಮ ವೃತ್ತಕ್ಕೆ ತೆರಳಿದ ಕಾಂಗ್ರೆಸ್ ಕಾರ್ಯಕರ್ತರು, ತಲೆಯ ಮೇಲೆ,ಕೈಯಲ್ಲಿ ಚೊಂಬು ಪ್ರದರ್ಶಿಸುವ ಮೂಲಕ ಕೇಂದ್ರ ಸರಕಾರ ಈ ಬಾರಿಯೂ ಕರ್ನಾಟಕಕ್ಕೆ ಚೆಂಬು ನೀಡಿದೆ.ರಾಜ್ಯದಿಂದ ಬಿಜೆಪಿಯ 19 ಜನ ಸಂಸತ್ ಸದಸ್ಯರು ಆಯ್ಕೆಯಾಗಿ, ನಾಲ್ವರು ಸಚಿವರಾಗಿದ್ದರೂ ರಾಜ್ಯಕ್ಕೆ ಮಲತಾಯಿ ಧೋರಣೆಯನ್ನು ಮುಂದುವೆರಿಸಿದೆ ಎಂದು ಆಪಾದಿಸಿದರು.ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ,ಕೇoದ್ರ ಸರಕಾರದಲ್ಲಿ ರಾಜ್ಯದ 4 ಜನ ಮಂತ್ರಿಗಳಿದ್ದಾಗ್ಯೂ ರಾಜ್ಯಕ್ಕೆ ಬಿಜೆಪಿಯಿಂದ ಘನ ಘೋರ ಅನ್ಯಾಯವಾಗಿದೆ.ಮಿತ್ರ ಪಕ್ಷಗಳಿಂದ ಕುರ್ಚ ಉಳಿಸಿಕೊಳ್ಳಲು ಬಿಹಾರ ಮತ್ತು ಆಂದ್ರ ಪ್ರದೇಶಕ್ಕೆ ಬಜೆಟ್ನ ಬಹುಪಾಲು ನೀಡಿ,ಕರ್ನಾಟಕವನ್ನು ಕಡೆಗಣಿಸಲಾಗಿದೆ.ಇದರ ವಿರುದ್ದ ಮುಂದಿನ ಮೂರು ದಿನಗಳ ಕಾಲ ಕೇಂದ್ರ ಸರಕಾರದ ವಿರುದ್ದ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದರು.ರಾಜ್ಯದ ಬಹು ಪ್ರಮುಖ ನೀರಾವರಿ ಯೋಜನೆಯಾದ ಮೇಕುದಾಟುಗೆ ಅನುಮತಿ ನೀಡಲು ಕೇಂದ್ರ ಸರಕಾರ ನಿರಾಕರಿಸಿದೆ.ಅಲ್ಲದೆ ಚಾಲ್ತಿಯಲ್ಲಿದ್ದ ಹಲವಾರು ಯೋಜನೆಗಳಿಗೆ ಅನುದಾನ ನೀಡಿಲ್ಲ.ಸಚವ ಸೋಮಣ್ಣ ಅವರ ಆರಂಭ ಶೂರತ್ಯ ಕೆಲವೇ ದಿನಗಳಲ್ಲಿ ಬಯಲಾಗಿದೆ.ರಾಜ್ಯದ ಜನತೆ ಬಿಜೆಪಿ ಹೆಚ್ಚು ಸ್ಥಾನಗಳನ್ನು ನೀಡಿದ್ದಾರೆ. ಜವಾಬ್ದಾರಿ ಅರಿತು ಕೆಲಸ ಮಾಡಬೇಕಾಗಿದೆ.ರಾಜ್ಯದ ಜನರಿಗೆ ಮೋಸ ಮಾಡುವುದನ್ನು ನಿಲ್ಲಿಸಬೇಕು ಎಂದು ಚಂದ್ರಶೇಖರಗೌಡ ಆಗ್ರಹಿಸಿದರು.