ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರನ್ನು ಸದರಿ ಹುದ್ದೆಯಲ್ಲಿಯೇ ಮುಂದುವರಿಸಲು ಒತ್ತಾಯಿಸಿ ಹಾಗೂ ಎಮ್ ಆರ್ ಡಬ್ಲ್ಯೂ, ವಿ ಆರ್ ಡಬ್ಲ್ಯೂ, ಹಾಗೂ ಯು ಆರ್ ಡಬ್ಲ್ಯೂ ಗಳ ವಿವಿಧ ಬೇಡಿಕೆಗಳ ಈಡೇರಿಗಾಗಿ ಒತ್ತಾಯಿಸಿ ತುಮಕೂರಿನಲ್ಲಿ ವಿಕಲಚೇತನರಿಂದ ಪ್ರತಿಭಟನೆ ನಡೆಸಲಾಯಿತು.ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಶ್ರೀಮತಿ ಲತಾ ಕುಮಾರಿ ರವರು ವಿಕಲಚೇತನರ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನ ರೂಪಿಸಿ ವಿಕಲಚೇತನರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನ ಜಾರಿಗೆ ತಂದು ಹಗಲು ದರೋಡೆಗೆ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ಕೆಲವರು ಪಿತೂರಿ ನಡೆಸಿ ಅವರನ್ನು ವರ್ಗಾವಣೆ ಮಾಡಲು ಮುಂದಾಗಿರುವುದನ್ನ ವಿರೋಧಿಸಿದ ಪ್ರತಿಭಟನಾಕಾರರು ಸದರಿ ನಿರ್ದೇಶಕರನ್ನ ಹಾಲಿ ಕರ್ತವ್ಯದಲ್ಲಿ ಮುಂದುವರಿಸುವ ಸಲುವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಇನ್ನು ಇದೇ ಸಂದರ್ಭದಲ್ಲಿ ಕರ್ನಾಟಕ ವಿಕಲಚೇತನರ ಒಕ್ಕೂಟದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಚಿತ್ತಯ್ಯ ಮಾತನಾಡಿ, ಹಲವು ವಿ ಆರ್ ಡಬ್ಲ್ಯೂ, ಎಂ ಆರ್ ಡಬ್ಲ್ಯೂ ಹಾಗೂ ವಿಆರ್ಡಬ್ಲ್ಯೂಗಳ ಹಲವು ದಿನಗಳ ಬೇಡಿಕೆಗಳಾದ ವಿಶೇಷ ನಿಯಮಾವಳಿ ರಚಿಸಿ ಖಾಯಂಗೊಳಿಸುವುದು, ನಿವೃತ್ತಿ ಇಡುಗಂಟು ಜಾರಿಗೊಳಿಸುವುದು, ಗ್ರಾಮೀಣ ಪುನರ್ವಸತಿ ಯೋಜನೆಯ ಮಾರ್ಗಸೂಚಿಯನ್ನು ತಿದ್ದುಪಡಿ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕಗಾಗಿ ಒತ್ತಾಯಿಸಿದ ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ಸರ್ಕಾರ ವಿರುದ್ಧ ಹೊರಹಾಕಿ ಕೂಡಲೇ ತಮ್ಮ ಮನವಿಗೆ ಸ್ಪಂದಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.ಇದೇ ಸಂದರ್ಭದಲ್ಲಿ ಉಡಸಪ್ಪ ,ಮಂಜುನಾಥ್, ಗಿರಿಜಮ್ಮ, ರಾಜೇಶ್ವರಿ, ಮಂಜುನಾಥ್, ಮಹಾಲಿಂಗಯ್ಯ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು