ಕಲಬುರಗಿ ನಗರದಾದ್ಯಂತ ರಸ್ತೆ ಅಗಲಿಕರಣ ಮಾಡಲು ವೀರ ಕನ್ನಡಿಗರ ಸೇನೆಯಿಂದ ಪ್ರತಿಭಟನೆ
ಕಲಬುರಗಿ ನಗರದಲ್ಲಿ ದಿನ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಅದರಲ್ಲೂ ನಗರದ ಸುಪರ ಮಾರ್ಕೇಟನಲ್ಲಿರುವ ಜನತಾ ಬಜಾರದಿಂದ ಸಿಟಿ ಬಸಸ್ಟ್ಯಾಂಡ್ ವರೆಗೆ, ಹಾಗೆ ಚೌಕ ಬಜಾರದಿಂದ ಸರಘ ಬಜಾರ ಗಣೇಶ ಮಂದಿರವರೆಗೆ, ಮತ್ತು ಜನತಾ ಬಜರಾದಿಂದ ಗಂಜವರೆಗೆ, ಸರಘ ಬಜಾರ ಗಣೇಶ ಮಂದಿರದಿಂದ ಚಪ್ಪಲ ಬಜಾರ ರಸ್ತೆ ಮೂಲಕ ಜನತಾ ಬಚಾರವರೆಗೆ, ಚೌಕದಿಂದ ವಿಷಿಯನ್ ಮಾಲ್ವರೆಗೆ ಹಾಗೆ ನ್ಯೂ ಮದನ ಸಿನಿಮಾ ಥೆಟರದಿಂದ ಲೋಹರ ಗಲ್ಲಿ ಮೂಲಕ ಹುಮನಾಬಾದ ಬೇಸ್ವರೆಗೆ ಹಾಗೆ ಎಸ್.ಟಿ.ಭ.ಟಿ ಯಿಂದ ಬಿಜಾಪುರ ಆಸ್ಪತ್ರೆವರೆಗೆ ಮತ್ತು ಲಾಲಗೇರಿ ಕ್ರಾಸ್ದಿಂದ ತಿಮ್ಮಾಪುರವರೆಗೆ ಹೀಗೆ ಇನ್ನಿತರ ಸ್ಥಳಗಳಲ್ಲಿ ಅತಿ ಹೆಚ್ಚು ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಓಡಾಡುತ್ತವೆ. ಇದರಲ್ಲಿ ಅತಿ ಹೆಚ್ಚು ನಾಗರಿಕರು ತಮ್ಮ ದಿನನಿತ್ಯದ ವ್ಯವಹಾರಗಳಿಗಾಗಿ ಸಾವಿರಾರು ಜನ ಓಡಾಡುತ್ತಾರೆ. ಇದರಿಂದ ದಿನ ದಿನಕ್ಕೆ ಸಾರ್ವಜನಿಕರಿಗೆ ಮತ್ತು ಸಂಚಾರಕ್ಕೆ ಗಂಟೆ ಗಂಟೆಗಳ ಕಾಲ ತೊಂದರೆಯಾಗುತ್ತಿದೆ.
ಆದ್ದರಿಂದ ಈ ಎಲ್ಲಾ ಮೇಲೆ ತೋರಿಸಿದ ಸ್ಥಳಗಳಲ್ಲಿ ಶೀಘ್ರವೇ ರಸ್ತೆ ಅಗಲೀಕರಣವನ್ನು ಕೈಗೆತ್ತಿಕೊಂಡು ಸಾರ್ವಜನಿಕರಿಗೆ ಮತ್ತು ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ವೀರ ಕನ್ನಡಿಗರ ಸೇನೆಯು ತಮಗೆ ಮನವಿ ನೀಡುವ ಮುಖಾಂತರ ಮನವಿ ಮಾಡಿಕೊಳ್ಳಲಾಗುತ್ತದೆ.
ಅದೇ ರೀತಿ ಈ ಚಿಕ್ಕ ರಸ್ತೆಗಳ ಮೇಲೆ ಅದರಲ್ಲೂ ಸುಪರ ಮಾರ್ಕೇಟ ಕಪಡಾ ಬದಾರ ಸರಘ ಬಜಾರ, ಚಪ್ಪಲ ಬಜಾರ, ಮತ್ತು ಹನುಮಾನ ಹಾಗೂ ದತ್ತ ಮಹಾರಾಜ ದೇವಸ್ಥಾನದ ಮುಖ್ಯ ರಸ್ತೆ ಇವುಗಳ ಮೇಲೆ ಅತಿ ಹೆಚ್ಚು ಬಂಡಿಗಳನ್ನು ನಿಲ್ಲಿಸಿ ಸಂಚಾರಕ್ಕೆ ಮತ್ತು ಸಾರ್ವಜನಿಕರಿಗೆ ತೊಂದರೆ ಮಾಡುತ್ತಾರೆ. ಆದ್ದರಿಂದ ಇವುಗಳಿಗೆ ಕೂಡ ಕಡಿವಾಣ ಹಾಕಬೇಕು.
ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಅಮೃತ ಪಾಟೀಲ ಸಿರನೂರ, ಉಪಾಧ್ಯಕ್ಷರಾದ ರವಿ ಒಂಟಿ, ಮುಖಂಡರುಗಳಾದ ಶಿವಾನ ಮಾನದ, ಶಿವಾನಂದ ಚಿಕ್ಕಾಣಿ, ಪ್ರಶಾಂತ ವಾಚನಲ್ಲಿ, ಅಣವೀರ ಮಾನ್ಯರುವರು.