ಕಾರ್ಯಕ್ರಮ ವಿವರ
ರೊಟರಿ ತುಮಕೂರು ,
ರೊಟರಿ ತುಮಕೂರು ೩೧೯೨ ಘಟಕದ ೨೦೨೩-೨೪ನೇ ಸಾಲಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಭಾನುವಾರ, ಜುಲೈ ೧೬ ರಂದು ನಡೆಯಲಿದೆ.
ಅಂದು ಸಂಜೆ ೬.೩೦ಕ್ಕೆ ತುಮಕೂರಿನ ಎಸ್ಐಟಿ ಇಂಜಿನಿಯರಿAಗ್ ಕಾಲೇಜಿನ ಬಿರ್ಲಾ ಸಭಾಂಗಣದಲ್ಲಿ ನಡೆಯಲಿರುವ ಪದಗ್ರಹಣ ಕಾರ್ಯಕ್ರಮದಲ್ಲಿ ತುಮಕೂರು ರೋಟರಿಯ ೬೬ನೇ ಅಧ್ಯಕ್ಷರಾಗಿ ರೊ. ಸಿ. ನಾಗರಾಜ್ ಪದಗ್ರಹಣ ಸ್ವೀಕರಿಸಲಿದ್ದಾರೆ. ಇವರೊಂದಿಗೆ ರೊ. ಶಿವಕುಮಾರ ಸ್ವಾಮಿ ವಿ.ಎಸ್. ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ರೋ. ಜಿ. ೩೧೯೨ರ ಚುನಾಯಿತ ರಾಜ್ಯಪಾಲ ರೊ. ಮಹದೇವ ಪ್ರಸಾದ್ ಎನ್. ಅವರು ಪದಗ್ರಹಣ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ನಿರೂಪಕಿ, ಸಂಗೀತಗಾರರು ಹಾಗೂ ಸ್ಫೂರ್ತಿದಾಯಕ ಭಾಷಣಕಾರರಾದ ಶ್ರೀಮತಿ ದಿವ್ಯಾ ಆಲೂರು, ವಲಯ ರಾಜ್ಯಪಾಲ ರೊ. ಉಮೇಶ್ ಎಂ.ಎಸ್., ವಲಯ ಕಾರ್ಯದರ್ಶಿ ರೊ. ಗಣೇಶ್ ಬಾಲಕೃಷ್ಣನ್, ಸಹಾಯಕ ರಾಜ್ಯಪಾಲ ರೊ. ಕೆ.ಆರ್. ವನರಾಜ ಹಾಗೂ ರೊಟರಿ ತುಮಕೂರು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರೊ. ಡಾ. ಎಸ್.ಎಲ್. ಕಾಡದೇವರ ಮಠ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಸಂಜೆ ೫ಕ್ಕೆ ಕಾರ್ಯಕ್ರಮದಲ್ಲಿ ಸಂಜನ್ ನಾಗರಾಜ್ ಹಾಗೂ ಪ್ರಿಯಾ ಚಿತ್ರ ಅವರಿಂದ ಸಂಗೀತ ಸುಧೆ ಕಾರ್ಯಕ್ರಮ ನಡೆಯಲಿದೆ.