ಶಹಾಬಾದ್ ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ.
ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ್ ಮತ್ತಿಮುಡ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಹಾಬಾದ್ ,ವಾಡಿ, ಕಲಬುರಗಿ ಮತ್ತು ದೇವಲ ಗಾಣಗಾಪುರ ನಾಲ್ಕು ರೈಲ್ವೆ ನಿಲ್ದಾಣಗಳಿಗೆ ಹೈಟೆಕ್ ಸ್ಪರ್ಶ ನೀಡಿ ನವೀಕರಣ ಗೊಳಿಸಲು ಅಮೃತ್ ಭರತ್ ಯೋಜನೆ ಅಡಿಯಲ್ಲಿ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಚಾಲನೆ ನೀಡಿದ್ದಾರೆ. ಇದು ಈ ಭಾಗದ ಜನರಿಗೆ ತುಂಬಾ ಸಂತೋಷದ ವಿಷಯವಾಗಿದೆ ಎಂದು ಮಾನ್ಯ ಶಾಸಕರಾದ ಬಸವರಾಜ ಮತ್ತಿಮುಡ್ ಹೇಳಿದರು.
ಶಹಾಬಾದ್ ತಾಲೂಕು ಹೋರಾಟ ಸಮಿತಿ ಅಧ್ಯಕ್ಷರು ಹಾಗೂ ಕಲ್ಯಾಣ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಸದಸ್ಯರಾದ ಶಿವರಾಜ್ ಇಂಗನ್ ಶೆಟ್ಟಿ ಮಾತನಾಡಿ ಶಹಾಬಾದ್ ಅಭಿವೃದ್ಧಿಗಾಗಿ ಸುಮಾರು ವರ್ಷಗಳಿಂದ ಈ ಹೋರಾಟ ಸಮಿತಿಯ ಹಿರಿಯರು ಶ್ರಮ ವಹಿಸಿದ್ದಾರೆ ಅದರ ಪ್ರತಿಫಲವಾಗಿ ನಾವು ಈ ಅಭಿವೃದ್ಧಿಯನ್ನು ಕಾಣುತ್ತಿದ್ದೇವೆ ಎಂದು ಹೇಳಿದರು. ಇತ್ತೀಚಿಗೆ ನಮ್ಮ ಹೋರಾಟ ಸಮಿತಿಯಿಂದ ಸಂಸದರಾದ ಡಾಕ್ಟರ್ ಉಮೇಶ್ ಜಾದವ್ ಅವರ ಜೊತೆ ಚರ್ಚಿಸಿ ದೆಹಲಿಯ ವರೆಗೂ ತೆರಳಿ ಶಹಾಬಾದ್ ರೈಲ್ವೆ ನಿಲ್ದಾಣದ ಅಭಿವೃದ್ಧಿ ಬಗ್ಗೆ ಮತ್ತು ಎಲ್ಲಾ ರೈಲುಗಳು ನಿಲ್ಲಿಸಲು ಚರ್ಚಿಸಿದ್ದೇವೆ ಹೇಳಿದರು.
ಈ ಸಂದರ್ಭದಲ್ಲಿ ಶಹಾಬಾದಿನ ಪ್ರಮುಖ ಗಣ್ಯರು ವ್ಯಾಪಾರಸ್ಥರು ಉದ್ಯಮಿಗಳು ವಿವಿಧ ಪಕ್ಷದ ಮುಖಂಡರು ಸಂಘ ಸಂಸ್ಥೆಯವರು ಮತ್ತು ರೈಲ್ವೆ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಸೇರಿದಂತೆ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.