ಕನ್ನಡ ಸಾಹಿತ್ಯ ಕ್ಷೇತ್ರವನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ರಾಷ್ಟçಕವಿ ಕುವೆಂಪು ಅವರು ನಾಡಿನ ಹೆಮ್ಮೆಯ ಕವಿ ಎಂದು ಹಿರಿಯ ಸಾಹಿತ್ಯ ವಿಮರ್ಶಕ ಡಾ.ಕೆ.ಪಿ.ನಟರಾಜು ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು ಹಾಗೂ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಹಯೋಗದಲ್ಲಿ, ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ ಪತ್ರಿಕಾ ದಿನಾಚರಣೆ ಹಾಗೂ ಕುವೆಂಪು ಜನ್ಮದಿನಾಚರಣೆ ಅಂಗವಾಗಿ ಡಾ.ಎಚ್.ಎಂ ಗಂಗಾಧರಯ್ಯ ನವರ ೧೩ನೇ ಸ್ಮಾರಕ ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುವೆಂಪು ವಿಚಾರಗಳು” ಎಂಬ ವಿಷಯದ ಕುರಿತು ಮಾತನಾಡಿದ ಅವರು, ಜಾತಿ ತಾರತಮ್ಯ, ನಾನು ಮತ್ತು ಅನ್ಯ ಹಾಗೂ ಭೇದ-ಭಾವವನ್ನು ತೊಡೆದು ಹಾಕಿದ ರಾಷ್ಟçಕವಿ ಕುವೆಂಪು ಅವರನ್ನು ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರುವ ಮೂಲಕ ಸಮಾಜದಲ್ಲಿ ಎಲ್ಲರು ಸಮಾನರು ಎಂಬ ಪರಿಕಲ್ಪನೆಯನ್ನು ಹುಟ್ಟುಹಾಕಿದರು. ಅಲ್ಲದೆ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ, ನಾಡಿನ ಹೆಮ್ಮೆಯ ಕವಿ ಎಂದು ವಿಮರ್ಶಕ ಡಾ.ಕೆ ಪಿ ನಟರಾಜು ಹೇಳಿದರು.
ಭಾಷೆಯನ್ನು ಶ್ರೀಮಂತಗೊಳಿಸಿದ ಸಾಹಿತ್ಯಲೋಕದ ಧೀಮಂತರಲ್ಲಿ ಕುವೆಂಪು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಅವರ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಜನಪರ ನಿಲುವುಗಳಿವೆ. ಅಲ್ಲದೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಪ್ರಧಾನವಾದ ಸ್ಥಾನ ನೀಡುವುದನ್ನು ಕಾಣಬಹುದು. ಹಾಗಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಕುವೆಂಪು ಸಾಧನೆ ಮುಗುಲೆತ್ತರಕ್ಕೆ ತಲುಪಿದೆ. ಅವರ ವಿಚಾರಧಾರೆಗಳು-ಚಿಮತನೆಗಳು-ಸಂದೇಶಗಳು ಇಂದಿನ-ಮುoದಿನ ಸಮಾಜಕ್ಕೂ ಪ್ರಸ್ತುತ ಎಂದು ಅವರು
ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ ಪತ್ರಿಕಾ ದಿನಾಚರಣೆ

Leave a comment
Leave a comment