ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲ ಗಾಣಗಿಪೂರ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಪ್ರದೀಪ್ ಬಲ್ಲಾ [PC No 1951 ಸ್ಥಳೀಯ ಅಫಜಪೂರ ತಾಲೂಕಿನ ಮಣೂರ್ ಗ್ರಾಮದವರಾಗಿದ್ದು. ಈ ಠಾಣೆ PSI ಅವರ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು ಇವರು – – ಠಾಣೆಯಲ್ಲಿ ಸುಮಾರು ನಾಲ್ಕು, ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿದ್ದು ಬಂದಾಗಿನಿಂದ ಹಲವಾರು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದಾರೆ. ಇವರು ಸ್ವತಃ ತಾವೇ ಮುಂದೆ ನಿಂತು ಅಕ್ರಮವಾಗಿ ಮರಳು ಸಾಗಿಸುವುದು, ದೇವಲ ಗಾಣಗಾಪುರ ಮತ್ತು ಸುತ್ತ ಮುತ್ತ ಗ್ರಾಮಗಳಾದ ಬಂದರವಾಡ, ಟಾಕಳಿ, ಸಾಗನೂರ, ಬೆಟಗೇರಿ, ತೆಗಳಿ, ಗುಳನೂರು, ಗ್ರಾಮಗಳಿಂದ ಮರಳು ಬೇಕಾದ ಇವರೇ ಮುಂದೆ ನಿಂತು ಮರಳುಗಾರಿಕೆ ಮಾಡಿಸುತ್ತಾರೆ. ಫೋನ್ ಪೇ ಮುಖಾಂತರ ಹಣ ಪಡೆದಿರುತ್ತಾರೆ. ಇದಲ್ಲದೆ ಜೂಜು, ಮಟಕ’, ‘ಗಾಂಜಾ ಇನ್ನಿತರ ಕಾನೂನು ಬಾಹಿರ ಚಟುವಟಿಕೆ ಕುಂಮಕ್ಕೂ, ಕೊಟ್ಟ ಅವರಿಂದ ಹಪ್ತಾ ವಸೂಲಿ ಮಾಡುವುದು, ಅಮಾಯಕರು ಭೀಮಾ ನದಿಯಲ್ಲಿ ಸ್ಥಾನ ಮಾಡಲು ಹೋದರೆ ಅವರಿಗೆ ಹೆದರಿಸಿ ಬೆದರಿಸಿ ನೀವು ಮರಳು ತುಂಬಲು ಬಂದಿದ್ದೀರಿ ಎಂದು ಕೇಸ್ ಹಾಕುತ್ತೇನೆ ಎಂದು ಭಯವಡಿಸಿ ಹಣ ವಸೂಲಿ ಮಾಡುವುದು ಅದೇ ವಿಷಯವಾಗಿ ಒಂದು ಬಾರಿ ಬಡ ರೈತ ವಿರೋಧಿಸಿದರೆ ಅವನಿಗೆ ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿರುತ್ತಾರೆ, ಇದೇ ರೀತಿ ದಿನಾಲು ಕುಡಿದು
ಒಂದು ಬಾರಿ ಸರಾಯಿ ಕುಡಿದ ಮತ್ತಿನಲ್ಲಿ ಗಾಣಗಾಪುರ ಹಾಗೂ ಇಟಗಾ ಬ್ರಿಡ್ಜ್ ಮೇಲೆ ಒಬ್ಬ ವ್ಯಕ್ರಿಯ ಕಾರನ್ನು ಬ್ರಿಝ ಕೆಳಗೆ ತಳ್ಳಿ ಜಕಮಗೊಳಿಸುತ್ತಾನೆ. ಆ ನುಜ್ಜು ಗುಜ್ಜಾದ ಕಾರಿಗೆ ಆ ಮಾಲೀಕನೇ ಲಕ್ಷಗಟ್ಟಲೆ ಖರ್ಚು ಮಾಡಿ ರಿಪೇರಿ ಮಾಡಿಸಿಕೊಂಡಿರುತ್ತಾನೆ, ಆ ಪೊಲೀಸ್ ಪ್ರದೀಪ್ ಬಲ್ಲಾ ಗೆ ಯಾರಾದರೂ ಪ್ರಶ್ನೆ ಮಾಡಿದರೆ ನಾನ್ ಬೇಲ್ ಕೇಸ್ ಹಾಕಿಸಿ ಜೈಲಿಗೆ ಹಾಕಿಸುತ್ತೇನೆ ಎಂದು ಹೆದರಿಸುತ್ತಾರೆ. ಅನೇಕ ಜನರಿಗೆ ರೌಡಿ ಶೀಟ್ ಹಾಕಿಸುವ ಬೆದರಿಕೆ ಹಾಕಿರುತ್ತಾನೆ, ಈ ವಿಚಾರ ಅಕ್ಟೋಬರ್ 12/10-2023 ಎಂದು ಮಾನ್ಯ ಜಿಲ್ಲಾ ವರಿಷ್ಠ ಧಿಕಾರಿಗಳು ಕಲಬುರಗಿ ಇವರಿಗೆ ಗ್ರಾಮದ ಮುಖಂಡರು ಗ್ರಾಮ ಪಂಚಾಯಿತಿಯ , ಸದಸ್ಯರು ಹೋರಾಟಗಾರರು, ಚಿಂತಕರು ಸೇರಿ ಈತನ ವಿರುದ್ಧ ಅರ್ಜಿ ಸಲ್ಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಸುಮಾರು ಗ್ರಾಮದ 50 ಜನರ ಸಹಿ ಮುಖಾಂತರ ಅರ್ಜಿ ಕೊಟ್ಟಿರುತ್ತೇವೆ, ಇನ್ನುವರೆಗೂ ಈತನ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಆದರಿಂದ ಇಂತಹ ಗುಂಡಾ ವರ್ತನೆ ಇರುವ ಪೊಲೀಸರಿಂದ ಸಾರ್ವಜನಿಕರಿಗೆ ರಕ್ಷಣೆ ಆಗುವುದಿಲ್ಲ ಮತ್ತು ಪೊಲೀಸ್ ಇಲಾಖೆಗೆ ಸಾರ್ವಜನಿಕ ವಲಯದಲ್ಲಿ ಕೆಟ್ಟ ದೃಷ್ಟಿಕೋನ ಆಗುವುದೆಂದು ಕೂಡಲೆ ಈತವನ್ನು, ಅನಾಮತು ಮಾಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ದೇವಲ ಗಾಣಗಾಪುರ ಪೊಲೀಸ್ ಸ್ಟೇಷನ್ ಮುಂದೆ ಉಗ್ರವಾದ ಹೋರಾಟ ಕೈಗೊಳ್ಳಬೇಕಾಗುತ್ತದೆ. ಎಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಮಾಜ ಸೇವಕ ಜೆಡಿಎಸ್ ಪಕ್ಷದ ಮುಖಂಡ ಯಲ್ಲಪ್ಪ ರಮಗಾ.