ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಇಂದಿನ ಅನಿವಾರ್ಯತೆ- ಎನ್.ಬಿ.ಪ್ರದೀಪ್ ಕುಮಾರ್
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಕ್ಕಳು ಸೂಕ್ತವಾಗಿ ಸಿದ್ಧರಾಗಬೇಕೆಂದರೆ ಅದಕ್ಕೆ ಪೂರಕವಾದ ವಾತಾವರಣವನ್ನೂ ಅವಕಾಶವನ್ನೂ ಒದಗಿಸಿಕೊಡುವುದು ಇಂದಿನ ಶಿಕ್ಷಣ ಕ್ಷೇತ್ರದ ಅಗತ್ಯತೆ. ಪ್ರತಿಭಾವಂತ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಬಾರದು ಎಂಬುದು ನಮ್ಮ ಉದ್ದೇಶ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಹೇಳಿದರು.
ಅವರು ವಿದ್ಯಾನಿಧಿ ವಿ-ಟೆಕ್ನೋ ಎಸ್ವಿಪಿ ಕಾಲೇಜು ತಿಪಟೂರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಎಸ್ವಿಪಿ ಸಂಸ್ಥಾಪಕರಾದ ಎಸ್.ಕೆ. ರಾಜಶೇಖರ್ ಮಾತನಾಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಅವಕಾಶವನ್ನು ಒದಗಿಸುವ ನಿಟ್ಟಿನಲ್ಲಿ ಸಂಸ್ಥೆಯನ್ನು ಸ್ಥಾಪಿಸಿದ್ದೆವು. ಇದೀಗ ಒಂದು ಹೆಜ್ಜೆ ಮುಂದಿಟ್ಟು ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಬೇಕಾದ ವೇಗಕ್ಕೆ ಹೊಂದಿಕೊoಡoತಹ ಕಾರ್ಯದಕ್ಷತೆಯುಳ್ಳ ವಿದ್ಯಾನಿಧಿ ವಿ-ಟೆಕ್ನೋ ಸಹಯೋಗದಲ್ಲಿ ಇಲ್ಲಿನ ಮಕ್ಕಳಿಗೆ ಅಗತ್ಯ ಮಾರ್ಗದರ್ಶನವನ್ನು ನೀಡಲಿದೆ. ಪೋಷಕರೂ ವಿದ್ಯಾರ್ಥಿಗಳೂ ನಿಮಗೆ ಒದಗಿ ಬಂದಿರುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಎಸ್. ಬಿ. ಜಗದೀಶ್ ಮತ್ತು ಕೆ.ಎನ್. ರೇಣುಕಯ್ಯ ಉಪಸ್ಥಿತರಿದ್ದರು. ಕಾಲೇಜು ಉಪನ್ಯಾಸಕ ವೃಂದದವರು, ಪೋಷಕರು ಮತ್ತು ವಿದ್ಯಾರ್ಥಿಗಳು ಈ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗಿಯಾದರು. ಅನೇಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಬಬಿತಾ ಮತ್ತು ಚಂದನಾ ಕಾರ್ಯಕ್ರಮ ನಿರೂಪಣೆ ಮಾಡಿದರು. ನಿಸರ್ಗ ಮತ್ತು ಬಳಗದವರು ಪ್ರಾರ್ಥಿಸಿದರು. ನೀಲೇಶ್ ಗೌಡ ಸ್ವಾಗತಿಸಿ, ಸ್ವಾತಿ ವಂದಿಸಿದರು. ವಿದ್ಯಾರ್ಥಿ/ನಿಯರಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳ ಪ್ರಸ್ತುತಿ ಚೆನ್ನಾಗಿ ಮೂಡಿಬಂತು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಇಂದಿನ ಅನಿವಾರ್ಯತೆ-
Leave a comment
Leave a comment