ಗೂಳೂರು ಹೋಬಳಿ ಹೊನ್ನುಡಿಕೆಯ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹೊನ್ನುಡಿಕೆ ಶಾಲಾ ಆವರಣದಲ್ಲಿ ೨೦ ೨೩ – ೨೪ ನೇ ಸಾಲಿನ ಹೊನ್ನುಡಿಕೆ ಕ್ಲಸ್ಟರ್ ನ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ಇಸ್ಮಾಯಿಲ್ ರವರು ಭಾಗವಹಿಸಿ ಶಾಲೆಯ ಮಕ್ಕಳ ಕುರಿತು ಮಾತನಾಡುತ್ತಾ ಮುಂದಿನ ಜೀವನ ರೂಪಿಸಿಕೊಳ್ಳುವಂತ ಭವಿಷ್ಯದ ಬಗ್ಗೆ ಹಾಗೂ ತಮ್ಮ ತಂದೆ ತಾಯಿಗಳಿಗೆ ಮತ್ತು ಶಾಲೆಗೆ ಒಳ್ಳೆ ಹೆಸರು ತರುವಂತ ವಿಧ್ಯಾರ್ಥಿಗಳಾಗುವಂತೆ ಕರೆ ನೀಡಿದರು. ಈ ಕಾರ್ಯಕ್ರಮಕ್ಕೆ ಹೊನ್ನುಡಿಕೆ ಕ್ಲಸ್ಟರ್ ಸಿ ಆರ್ ಪಿ ಯಾದ ನಾಗವೇಣಿಯವರು. ಹೊನಸಿಗೆರೆ ಸಿ ಆರ್ ಪಿ ಯಾದ ಶಂಕರ್ ರವರು ಭಾಗವಹಿಸಲು ಇವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಮಾರ್ಗದರ್ಶನ ನೀಡಲಾಗಿತ್ತು.
ಹಾಗೂ ಶಾಲೆಯ ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷರು. ಸದಸ್ಯರು. ಮತ್ತು ಎಸ್ ಡಿ ಎಂ ಸಿ . ಅಧ್ಯಕ್ಷರು. ಸದಸ್ಯರು. ಪೋಷಕರು ಮತ್ತು ಶಿಕ್ಷಕರುಗಳು ಭಾಗವಹಿಸಿದ್ದರು.
ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮ
Leave a comment
Leave a comment