ಒಡೆಯುವ ಕೆಲಸಕ್ಕಿಂತ ಕಟ್ಟುವ ಕೆಲಸ ಅತ್ಯಂತ ಶ್ರೇಷ್ಠ ಎಂಬುದನ್ನು ಮನಗಾಣಬೇಕಿದೆ ಎಂದರು.
ನಮ್ಮ ಸಮಾಜದಲ್ಲಿ ಮಹಿಳೆಗೆ ದೇವತೆಯ ಸ್ಥಾನ ಕಲ್ಪಿಸಲಾಗಿದೆ. ವಾಸ್ತವವಾಗಿ ಕೆಲವು ತಾರತಮ್ಯಗಳು ಇಂದಿಗೂ ಇವೆ. ಇವುಗಳ ನಿವಾರಣೆಗಾಗಿಯೆ ಕಾನೂನುಗಳು ರಚನೆಯಾಗಿವೆ. ವಿವಾಹ ಮಾಡುವ ಸಂದರ್ಭದಲ್ಲಿ ವರದಕ್ಷಿಣೆ ಇತ್ಯಾದಿಗಳ ಹೆಸರಿನಲ್ಲಿ ಹೆಣ್ಣು ಹೆತ್ತವರು ಸಾಕಷ್ಟು ಸಾಲ ಮಾಡಿಕೊಳ್ಳುವ ಪರಿಸ್ಥಿತಿ ಇದೆ. ಇವೆಲ್ಲವನ್ನೂ ಮೀರಿ ನಾವು ಬೆಳೆಯಬೇಕಿದೆ. ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ವಿದ್ಯೋದಯ ಕಾನೂನು ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕಿ ಪುಷ್ಪ ಅವರು ೧೯೬೧ರಲ್ಲಿಯೆ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಗೆ ಬಂದಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳು ಇನ್ನೂ ನಿಂತಿಲ್ಲ. ವರದಕ್ಷಿಣೆ ಸಾವು ನೋವುಗಳು ಅಲ್ಲಲ್ಲಿ ವರದಿಯಾಗುತ್ತಲೆ ಇವೆ. ವಿವಾಹದ ಸಂದರ್ಭದಲ್ಲಿ ನೀಡುವ ನಗದು ಹಣ ಅಥವಾ ಒಡವೆಗಳಷ್ಟೆ ವರದಕ್ಷಿಣೆ ಎಂದು ತಿಳಿದುಕೊಂಡಿದ್ದಾರೆ. ಆದರೆ ವಿವಾಹಕ್ಕೂ ಮುನ್ನ, ವಿವಾಹದ ಸಂದರ್ಭ ಹಾಗೂ ವಿವಾಹದ ನಂತರವು ಕಿರುಕುಳ ಕೊಟ್ಟರೆ ವರದಕ್ಷಿಣೆ ಕಿರುಕುಳದ ಪ್ರಕರಣವಾಗುತ್ತದೆ ವಿವಾಹವಾಗಿ ೭ ವರ್ಷಗಳ ಒಳಗೆ ಗೃಹಿಣಿ ಸಾವನ್ನೊಪ್ಪಿದ್ದರೆ ಅದನ್ನು ವರದಕ್ಷಿಣೆ ಸಾವು ಎಂದು ವ್ಯಾಖ್ಯಾನಿಸಲಾಗುತ್ತದೆ. ದುಡಿಯುವ ಛಲ ಮನುಷ್ಯನಿಗೆ ಇರಬೇಕೇ ಹೊರತು ಸಂಕಟ ಬಂದಾಗ ಹೆಣ್ಣು ಹೆತ್ತವರ ಕಡೆ ನೋಡುವುದು, ಮತ್ತಷ್ಟು ವರದಕ್ಷಿಣೆಗೆ ಒತ್ತಾಯಿಸುವುದು ಒಳಿತಲ್ಲ ಎಂದು ವಿವರಿಸಿದರು.
ಇತ್ತೀಚಿನ ದಿನಗಳಲ್ಲಿ ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ. ಕುಟುಂಬಗಳಲ್ಲಿ ಸಾಮರಸ್ಯ ಜೀವನ ಮರೆಯಾಗುತ್ತಿದೆ. ಹೆಣ್ಣಿಗೆ ಗೌರವ ಕೊಡುವುದಕ್ಕಿಂತ ಕಿರುಕುಳ ಕೊಡುವುದು ಹೆಚ್ಚುತ್ತಿದೆ. ನಮ್ಮ ದೇಶದಲ್ಲಿ ಭ್ರಷ್ಟಚಾರ ಎಂದು ನಿರ್ಮೂಲನೆಯಾಗುವುದೊ ಅಂದು ವರದಕ್ಷಿಣೆ ಸಮಸ್ಯೆಯೂ ಇಲ್ಲವಾಗುತ್ತದೆ. ಆದರೆ ಈ ಎರಡು ಅನಿಷ್ಠಗಳು ನಮ್ಮ ವ್ಯವಸ್ಥೆಯಲ್ಲಿ ತುಂಬಾ ಬೇರುಬಿಟ್ಟಿವೆ. ಈ ಬೇರುಗಳನ್ನು ನಿರ್ಮೂಲನೆ ಮಾಡಲು ಯುವಜನಾಂಗ ಪ್ರಯತ್ನಿಸಬೇಕು ಎಂದರು.
ಸಾಧನೆಗೆ ಬಡತನ ಎಂದಿಗೂ ದೌರ್ಬಲ್ಯ ಆಗಬಾರದು.
Leave a comment
Leave a comment