ಹಿತರಕ್ಷಣೆಯನ್ನು ನಿರಿಕ್ಷಿಸಲಾಗದು , ಉದಾರಿಕಣ ನೀತಿಗಳಿಂದ ಹೊರ ಬಾರದೆ ಜನ ಹಿತ ಕಾಪಾಡಲು ಸಾಧ್ಯವೆ ಇಲ್ಲ ಎಂದು ಅವರು ಅಭಿಪ್ರಾಯ¥ಟ್ಟರು.. ಅವರು ದಿ ; ೩೦-೦೭-೨೦೨೩ ರಂದು ತುಮಕೂರುನ ಜನ ಚಳುವಳಿ ಕೇಂದ್ರದಲ್ಲಿ ಸಿಐಟಿಯು- ಪ್ರಾಂತ ರೈತ ಸಂಘ- ಕೃಷಿಕೂಲಿಕಾರರ ಸಂಘದ ಜಂಟಿಯಾಗಿ ಅಯೋಜಿಸಿದ್ದ ರೈತ- ಕಾರ್ಮಿಕರ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಯಾವ ಸರ್ಕಾರಗಳು ಬಂದರು ಅನ್ನ ಬೇಳೆಯುವ ರೈತನ ಅತ್ಮಹತ್ಯೆಗಳುನಿಲ್ಲುತ್ತಿಲ್ಲ, ನೀತಿಗಳು ಬದಲಾಗದೆ ಜನತೆ ಪರಿಹಾರ ಸಿಗುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.
ಪ್ರಾಂತ ರೈತ ಸಂಘದ ದೊಡ್ಡ ನಂಜಪ್ಪ ಅವರು ಮಾತನಾಡಿ ಕೈಗಾರಿಕೆಗಳಿಗೆ ಭೂಮಿ ನೀಡಲು ತುದಿಗಾಲಲ್ಲಿ ಇರುವ ಸರ್ಕಾರಗಳು ಬಗೇರ್ ಹುಕುಂ ಸಾಗುವಳಿ ದಾರರಿಗೆ ಭೂಮಿ ನೀಡುವಲ್ಲಿ ದಶಕಗಳನ್ನು ತಗೆದು ಕೊಳ್ಳುತ್ತಿದೆ ಎಂದು ಅರೋಪಿಸಿದರು.
ಸಿಐಟಿಯು ಲೋಕೇಶ್ ಅವರು ಮಾತನಾಡಿ ಸರ್ಕಾರ ಬದಲಾದರು ಕಾರ್ಮಿಕರ ಗುಲಾಮರಂತೆ ದುಡಿಸಲು ಅವಕಾಶ ನೀಡುವ ೧೨ ಗಂಟೆಯ ದುಡಿವೆ ರದ್ದಾಗಿಲ್ಲ ಎಂದರು.
ಈ ಜಂಟಿ ಸಮಾವೇಶದ ಇದೆ ಆಗಸ್ಟ್ ೧ ರಿಂದ ೧೪ ತನಕ ಜಿಲ್ಲೆಯಲ್ಲಿ ಜನ ಪರ ನೀತಿಗಳಿಗಾಗಿ ಪ್ರಚಾರಾಂದೋಲನ ನಡೆಸಲು ತೀರ್ಮಾನಿಸಲಾಯಿತು. ರೈತರು, ಕಾರ್ಮಿಕ ಸಂಘಟನೆಗಳು, ಅಂಗನವಾಡಿ ನೌಕರರು, ಗ್ರಾಮ ಪಂಚಾಯತಿ ನೌಕರರು, ಕಟ್ಟಡ ಕಾರ್ಮಿಕರು, ಪೌರಕಾರ್ಮಿಕರು, ಭಾಗವಹಿಸುವ ಮೂಲಕ ಜಂಟಿ ಸಮಾವೇಶವನ್ನು ಯಶಸ್ವಿಗೊಳಿಸಿದರು.