ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ
ಸೊಗಡು ಶಿವಣ್ಣ ಪರ ಮತಯಾಚನೆÀಗೆ ಚಾಲನೆ
ತುಮಕೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಹಾಗೂ ಮಾಜಿ ಸಚಿವರಾದ ಸೊಗಡು ಶಿವಣ್ಣನವರ ಪರವಾಗಿ ನಗರದ ಎಲ್ಲಾ ವಾರ್ಡ್, ಬೂತ್ ಮಟ್ಟದಲ್ಲಿ ಚುನಾವಣಾ ಮತಯಾಚನೆ ಕಾರ್ಯ ಆರಂಭಗೊAಡಿವೆ.
ಇಂದು ನಗರದ ಶಾಂತಿನಗರ ಪ್ರದೇಶ ವ್ಯಾಪ್ತಿಯ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮತದಾರರ ಬಳಿಗೆ ತೆರಳುವ ಸ್ವಾಭಿಮಾನಿ ಕಾರ್ಯಕರ್ತರ ಜೊತೆ ಸೊಗಡು ಶಿವಣ್ಣ ಮತಯಾಚನೆಯ ಕಾರ್ಯವನ್ನು ಭರ್ಜರಿಯಾಗಿ ಆರಂಭಿಸಿ ಮಾತನಾಡುತ್ತಾ, ಸ್ವಾಭಿಮಾನಿ ತುಮಕೂರಿನ ಮತದಾರರು ನನಗೆ ಸ್ಪಂದಿಸುತ್ತಿದ್ದು ಭಾರೀ ಬೆಂಬಲ ವ್ಯಕ್ತವಾಗುತ್ತಿದೆ ಎಂಬ ಆತ್ಮವಿಶ್ವಾಸದ ನುಡಿಗಳನ್ನಾಡಿದರು.
ತುಮಕೂರು ನಗರದ ಸಮಗ್ರ ಅಭಿವೃದ್ಧಿಗೆ ನಾನು ಕಟಿಬದ್ಧವಾಗಿ ನಡೆಯಲಿದ್ದು, ಸ್ವಾಭಿಮಾನಿ ಪ್ರಬುದ್ಧ ತುಮಕೂರು ಮತದಾರರು ಮತ ನೀಡಿ ಆಶೀರ್ವದಿಸಬೇಕೆಂದರು. ನಗರದ ಎಲ್ಲೆಡೆ ಮೂಲಭೂತ ಸೌಲಭ್ಯಗಳ ಕೊರತೆ, ಕಾನೂನು ಸುವ್ಯವಸ್ಥೆ ಕುಸಿದು ಮಹಾಜನತೆ ತೊಂದರೆಗೊಳಗಾಗಿದ್ದಾರೆ. ಆಡಳಿತzಲ್ಲಿನÀ ಲೋಪದೋಷಗಳು, ಕುಡಿಯುವ ನೀರು, ರಸ್ತೆ, ಯುಜಿಡಿ, ನೈರ್ಮಲ್ಯಗಳ ಬಗ್ಗೆ ಗಮನಹರಿಸಿದ ಆಡಳಿತ ಮತ್ತು ಭ್ರಷ್ಟಾಚಾರದಿಂದ ನಾಗರೀಕರು ಪರಿತಪಿಸುವಂತಾಗಿದೆ ಎಂದು ಸೊಗಡು ಶಿವಣ್ಣ ತಿಳಿಸಿದರು.
ನಗರದಲ್ಲಿ ಶಾಂತಿ, ಅಭಿವೃದ್ಧಿ, ಕಾನೂನು ಸುವ್ಯವಸ್ಥೆ, ಆಡಳಿತ ಬಿಗಿಗೊಳಿಸುವುದು, ಕೋಮು ಸಾಮರಸ್ಯತೆ, ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ಆಡಳಿತಕ್ಕೆ ಚುನಾವಣೆಯಲ್ಲಿ ಆಯ್ಕೆಗೊಂಡರೆ ಒತ್ತು ನೀಡಿ, ನುಡಿದಂತೆ ನಡೆಯುತ್ತೇನೆ ಎಂದು ಸೊಗಡು ಶಿವಣ್ಣ ಹೇಳಿದ್ದಾರೆ.
ಈ ಸಂಧರ್ಭದಲ್ಲಿ ಸ್ವಾಭಿಮಾನಿಗಳಾದ ಬನಶಂಕರಿಬಾಬು, ಜ್ಯೋತಿಪ್ರಕಾಶ್(ಜೆ.ಪಿ), ಅರುಣ್ ಕೃಷ್ಣಯ್ಯ, ದರ್ಶನ್, ಪ್ರಭಾಕರ್, ಆಟೋ ನವೀನ್, ಹೇಮಂತಾಚಾರ್, ಆಟೋ ಗೋಪಿ, ಹರೀಶ್, ಗುಬ್ಬಣ್ಣ, ಯತೀಶ, ಟೈಲ್ಸ್ ಕೇಶವ, ಮೂರ್ತಣ್ಣ, ಬಿ.ಟಿ.ರಾಘವೇಂದ್ರ, ಶ್ರೀನಿವಾಸ್, ದಿಲೀಪ್ ಮುಂತಾದ ನೂರಾರು ಸೊಗಡು ಶಿವಣ್ಣನವರ ಪರವಾಗಿ ಮತಯಾಚನೆ ಸಂಧರ್ಭದಲ್ಲಿದ್ದರು