ಜನ ಹಿತ ಮರೆತ ರಾಜಕಾರಣವನ್ನು ಸೊಲಿಸಬೇಕಿದೆ.
ದೇಶದಲ್ಲಿ ಜನ, ರೈತ, ಕಾರ್ಮಿಕರು, ಮಹಿಳೆಯುರು, ವಿದ್ಯಾರ್ಥಿ ಯುವಜನರು ಆಳರಸರ ನೀತಿಗಳಿಂದಾಗಿ ಸಂಕಷ್ಟದಲ್ಲಿ ಸಿಲುಕಿದ್ದಾರೆ, ನಿರಂತರ ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು, ಹೆಚ್ಚುತ್ತಿರುವ ನಿರುದ್ಯೋಗ, ಅಸಂಘಟಿತರಿಗೆ ಸಿಗದ ಸಾಮಾಜಿಕ ಭದ್ರತೆ, ದುಡಿಯುವವರಿಗೆ ಸಿಲುಕದ ಬದುಕಲು ಯೋಗ್ಯವಾದ ಕೂಲಿ ಈ ಪ್ರಶ್ನೆಗಳ ಜೊತೆಗೆ ಗುತ್ತಿಗೆ ಕಾರ್ಮಿಕರ ಸಂಕಷ್ಟಗಳು ಹಾಗೂ ಸರ್ಕಾರದ ಸ್ಕೀಂಗಳಲ್ಲಿ ಕೆಲಸ ಮಾಡುವ ನೌಕರರ ಬದುಕು ಸಂಕಷ್ಟಗಳ ಸರಮಾಲೆಯಿಂದ ತುಂಬಿದೆ. ಈ ಎಲ್ಲಾ ಬದುಕಿನ ಪ್ರಶ್ನೆಗಳನ್ನು ನಿರ್ದರಿಸುವ ನೀತಿಗಳು ರೂಪಿಸುವ ಕೇಂದ್ರ ಸರ್ಕಾರವು ಜನ ಹಿತ ಮರೆತ ಕಾರಣವೆ ಹಿಗಾಗುತ್ತಿದೆ. ಜನ ಹಿತ ಮರೆತ ರಾಜಕಾರಣ ಬದಲಿಸದೆ ಈ ಸಂಕಷ್ಟಗಳಿಗೆ ಪರಿಹಾರ ಸಾದ್ಯವಿಲ್ಲ. ಈ ನಿಟ್ಟಿನಲ್ಲಿ ಸಿಐಟಿಯು ನಡೆಸುತ್ತಿರುವ ಕೋಟಿ ಸಹಿ ಸಂಗ್ರಹ ಕೈಜೊಡಿಸಿ ಸಹಕಾರಿಸುವಂತೆ ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಸೈಯದ ಮುಜೀಬ್ ಅವರು ಮನವಿ ಮಾಡಿದುರು
ಅವರು ದಿನಾಂಕ; 12-06-2024 ರಂದು ಅಂತರಸನ ಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಿಐಟಿಯು ರಾಜ್ಯದ್ಯಂತ ನಡೆಸುತ್ತಿರುವ ಕೋಟಿ ಸಹಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದರು . ಮುಂದುವರಿದು ಮಾತನಾಡಿದ ಅವರು ಕೈಗಾರಿಕಾ ಕಾರ್ಮಿಕರ ಕೆಲಸದ ಅವಧಿ ಹೆಚ್ಚಳ, ಹಾಗು ಕಾರ್ಮಿಕ ಸಂಹಿತೆಗಳ ಜಾರಿ ಮೂಲಕ ಕೇಂದ್ರ ಸರ್ಕಾರ ಮತ್ತೆ ಗುಲಾಮಿ ಸಮಾಜಕ್ಕೆ ಹಿಂಚಲನೆಗೆ ಸರ್ಕಾರ ಸಾಗುತ್ತಿದೆ ಇದು ಸಮಾಜದ ಮುನ್ನಡೆಗೆ ಮಾರಕ ಎಂದರು
ಸಿಐಟಿಯು ಜಿಲ್ಲಾ ಖಚಾಂಚಿ ಎ. ಲೊಕೇಶ್ ಅವರು ಮಾತನಾಡಿ. ದೀರ್ಘಕಾಲಿಕ ಸ್ವರೂಪದಲ್ಲಿರುವ ಎಲ್ಲಾ ರೀತಿಯ ಉದ್ಯೋಗಗಳಲ್ಲಿ ಗುತ್ತಿಗೆ ಕಾರ್ಮಿಕ ವ್ಯವಸ್ಥೆಯನ್ನು ರದ್ದುಪಡಿಸಬೇಕು ಮತ್ತುದೀರ್ಘಕಾಲಿಕ ಮತ್ತು ಖಾಯಂ ಸ್ವರೂಪದಲ್ಲಿ ಕೆಲಸ ಮಾಡುವ ಎಲ್ಲ ಗುತ್ತಿಗೆ ಹಾಗು ತಾತ್ಕಾಲಿಕ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಲು ತಮಿಳುನಾಡು ಮತ್ತು ಆಸ್ಸಾಂಮಾದರಿಯಲ್ಲಿ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು .
ಪ್ರಸ್ತಾವಿಕವಾಗಿ ಮಾತನಾಡಿದ ಕರ್ನ ಲಿರ್ಸ್ ಕಾರ್ಮಿಕ ಸಂಘದ ಸಹ ಕಾರ್ಯಧರ್ಶಿ ಶಿವಕುಮಾರ್ ಸ್ವಾಮಿ ಅವರು . ರೈತ ವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಬೇಕು. ಕೃಷಿ ಬೆಳೆಗಳಿಗೆ ಲಾಭದಾಯಕ ಬೆಂಬಲ ಬೆಲೆ ಖಾತರಿಪಡಿಸಬೇಕು, ರೈತ- ಕಾರ್ಮಿಕ ವಿರೋಧಿ ನೀತಿಗಳನ್ನು ಬದಲಿಸುವಂತೆ ಅಗ್ರಹಿಸಿದರು.
ಕರ್ನ ಲಿರ್ಸ್ ಕಾರ್ಮಿಕ ಸಂಘದ ಪ್ರಧಾನ ಕಾರ್ಯಧರ್ಶಿ ದಿಲಿಪ್ ಕುಮಾರ್ ಅವರು ಮಾತನಾಡಿ ಇಎಸ್ಐ, ಇಪಿಎಫ್, ಗ್ರಾಚ್ಯುಟಿ, ಬೋನಸ್ ಕಾಯಿದೆಯಲ್ಲಿ ವಿಧಿಸಲಾದ ಎಲ್ಲಾ ವೇತನ ಮಿತಿಗಳನ್ನು ತೆರೆವುಗೊಳಿಸಬೇಕು. ಈಸವಲತ್ತುಗಳನ್ನು ಎಲ್ಲಾ ಕಾರ್ಮಿಕರಿಗೂ ವಿಸ್ತರಿಸಬೇಕು. ಜಿಲ್ಲೆಯ ಎಲ್ಲಾ ಕೈಗಾರಿಕಾ ವಲಯ ಇಎಸ್ಐ ಮಲ್ಟಿಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸುವ ಮೂಲಕ ಉಚಿತ ವೈದ್ಯಕೀಯ ಸೌಲಭ್ಯವನ್ನು ಖಾತ್ರಿಪಡಿಸಬೇಕು ಅಗ್ರಹಿಸಿದರು
. ಕನಿಷ್ಟ ವೇತವನ್ನು ಅಕುಶಲ ಕಾರ್ಮಿಕರಿಗೆ ರೂ 31,000/- ಹಾಗು ಹೆಚ್ಚಿನ ಕೌಶಲ್ಯದ ಪ್ರತಿ ಹಂತಕ್ಕೆ ಶೇ 15% ಹೆಚ್ಚಳದೊಂದಿಗೆನಿಗದಿಪಡಿಸಬೇಕು. ಗ್ರಾಹಕ ಬೆಲೆ ಸೂಚ್ಯಾಂಕದ ಪ್ರತಿ ಅಂಶದ ಹೆಚ್ಚಳಕ್ಕೆ ಪ್ರತಿ ದಿನಕ್ಕೆ 6ಪೈಸೆಗಳ ತುಟ್ಟಿಭತ್ಯೆ ನಿಗಧಿಪಡಿಸಬೇಕು. ಕೆಲಸದ ಅವಧಿಯನ್ನು ವಾರಕ್ಕೆ ಗರಿಷ್ಟ 36 ಗಂಟೆಗಳು ಹಾಗು ದಿನದ ಪಾಳಿಯನ್ನು 6 ಗಂಟೆಗಳಿಗೆ ಮಿತಿಗೊಳಿಸಬೇಕು ಹಾಗೂಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಗಮನ ನೀಡಬೇಕು.ದೇಶದ ಐಕ್ಯತೆಯನ್ನು ಛಿದ್ರಗೊಳಿಸುವ, ಸೌಹಾರ್ದತೆಯನ್ನು ಹಾಳುಮಾಡುವ ಕೃತ್ಯಗಳನ್ನು ಹಾಗು ಶಕ್ತಿಗಳನ್ನು ನಿಗ್ರಹಿಸಬೇಕು.ಸಂವಿಧಾನದ ಧರ್ಮನಿರಪೇಕ್ಷ ಮೌಲ್ಯಗಳನ್ನು ಸಂರಕ್ಷಿಸಬೇಕು. ಕೆಲಸದ ಅವಧಿಯನ್ನು ವಾರಕ್ಕೆ ಗರಿಷ್ಟ 36 ಗಂಟೆಗಳು ಹಾಗು ದಿನದ ಪಾಳಿಯನ್ನು 6 ಗಂಟೆಗಳಿಗೆ ಮಿತಿಗೊಳಿಸಬೇಕು ಹಾಗೂಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಗಮನ ನೀಡಬೇಕು.
ರೈಲ್ವೆ, ವಿದ್ಯುತ್ ಒಳಗೊಂಡು ಎಲ್ಲಾ ಸಾರ್ವಜನಿಕ ಕ್ಷೇತ್ರಗಳ ಎಲ್ಲಾ ಸ್ವರೂಪದ ಖಾಸಗಿಕರಣವನ್ನು ಕೈಬಿಡಬೇಕು. ಸಾರ್ವಜನಿಕರಂಗದ ಕೈಗಾರಿಕೆ ಹಾಗು ಸೇವೆಗಳನ್ನು ಬಲಪಡಿಸಬೇಕು. ಶಿಕ್ಷಣವನ್ನು ದುಬಾರಿಗೊಳಿಸುವ ಹಾಗು ಅವೈಜ್ಞಾನಿಕ ಹೊಸ ಶಿಕ್ಷಣನೀತಿಯನ್ನು ಜಾರಿಗೊಳಿಸಬಾರದು. ಸೇರಿದಂತೆ ಒಟ್ಟು 21 ಹಕ್ಕೋತ್ತಾಯಗಳ ಅಧಾರದಲ್ಲಿ ಇಂದಿನಿAದ ಪೇ16 ತನಕ ಜಿಲ್ಲೆ÷ಯಲ್ಲಿ ಸಹಿ ಸಂಗ್ರಹ ಚಳುವಳಿ ನಡೆಸಯಲಿದೆ