ಅಫಜಲಪೂರ :ನಮನ್ನು ರಕ್ಷಿಸುವ ಮತ್ತು ರಕ್ಷಣೆ ನೀಡುವ, ಕಾನೂನು ಕಾಪಾಡುವ ರಕ್ಷಕ ಎಂದು ಹೆಸರುವಾಸಿಯಾದ ಪೊಲೀಸ ಇಲಾಖೆ ಇವತ್ತು ಬೇಲಿಯೇ ಎದ್ದು ಹೊಲ ಮೇಯಿದಂತೆ ಎದ್ದು ಕಾಣುತಿದ್ದು ಇದಕ್ಕೆ ಸ್ಪಷ್ಟ ನಿದರ್ಶನ ಎಂಬಂತೆ ದೇವಲ್ ಗಾಣಗಾಪುರ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಪ್ರದೀಪ್ ಬುಳ್ಳ ಅವರ ಭ್ರಷ್ಟಾಚಾರ ಸಹಿತ ಕರ್ತವ್ಯವೇ ಸಾಕ್ಷಿ. ಹಲವು ಭ್ರಷ್ಟಾಚಾರ ಸಹಿತ ಕರ್ತವ್ಯದಲ್ಲಿ ಭಾಗಿಯಾಗಿದ್ದರಿಂದ ಪೇದೆ ಪ್ರದೀಪ್ ಅವರನ್ನು ಅಮಾನತ್ತು ಮಾಡಲಾಗಿದೆ.ಪ್ರದೀಪ್ ಬುಳ್ಳ ಅವರು ಸದರಿ ದೇವಲ ಗಾಣಗಾಪೂರ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು , ಕರ್ತವ್ಯದ ಅವಧಿಯಲ್ಲಿ ಅಕ್ರಮ ಮರಳುಗಾರಿಕೆ,ವಯುಕ್ತಿಕ ಹಿತಾಸಕ್ತಿಗಾಗಿ ಅನವಶ್ಯಕವಾಗಿ ಜನರಿಗೆ ತೊಂದರೆ ಕೊಡುವದು, ಜನರಿಂದ ಹಣ ಸುಲಿಗೆ ಮಾಡಿ ಫೋನ್ ಪೇ ಮುಖಾಂತರ ಹಣ ಪಡೆದಿರುವದು, ಮರಳುಗಾರಿಕೆಯಲ್ಲಿ ತೊಡಗಿದ ಜನರರೊಂದಿಗೆ ನಿರಂತರ ಸಂಪರ್ಕ ಹೊಂದಿ ಸಹಕರಿಸಿರುವದು, ಮರಳು ದಂದೆ ಅಕ್ರಮದಲ್ಲಿ ಭಾಗಿಯಾಗಿರುವದಕ್ಕೆ ಸ್ಪೋಟಕ ಆಡಿಯೋ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು , ಇದರ ಅನ್ವಯ ಪೊಲೀಸ್ ಪೇದೆ ಪ್ರದೀಪ್ ವಿರುದ್ಧ ದೂರು ಕೂಡ ದಾಖಲಾಗಿತ್ತು. ನರಹರಿ ಪಟೇದ ವಿಜಯ್ ವಡಗೇರಿ ಸೇರಿದಂತೆ ಗ್ರಾಮಸ್ಥರು ಕೊಟ್ಟ ದೂರಿನ ಅನ್ವಯ ವಿಚಾರಣೆ ನಡೆಸಿದ ಹೆಚ್ಚುವರಿ ಪೊಲೀಸ್ ಅಧಿಕ್ಷಕರು ಅರ್ಜಿ ವಿಚಾರಣೆ ವೇಳೆ ಮೇಲ್ನೋಟಕ್ಕೆ ಆರೋಪ ಸಾಭಿತಾಗಿರುವದರಿಂದ ಕರ್ನಾಟಕ ರಾಜ್ಯ ( ಶಿಸ್ತಿನ ನಡಾವಳಿಗಳು )ನಿಯಮಗಳು 1965/1989 ನಿಯಮ 5 ರ ಅಡಿಯಲ್ಲಿ ತಕ್ಷಣವೇ ಅಮಾನತ್ತು ಮಾಡಿ ಎಂದು ಅದೇಶಿಸಿದ್ದಾರೆ.ಪೇದೆ ಪ್ರದೀಪ್ ಅವರ ಅಮಾನತ್ತು ಆದೇಶದಿಂದ ಸಂಬಳಕ್ಕೂ ಹಾಗೂ ಅಕ್ರಮವಾಗಿ ಪಡೆಯುತ್ತಿದ ಗಿಂಬಳಕ್ಕೂ ಕತ್ತರಿ ಬಿದ್ದಂತಾಗಿದೆ.