ಶ್ರೀಮಠದ ಆವರಣದಲ್ಲಿ ಗಿಡನೆಡುವ ಮೂಲಕ ಸೂಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ.ಮ.ನಿ.ಪ್ರ.ಸ್ವ.ಶ್ರೀ ಖಾರದ ವೀರಬಸವ ಮಹಾಸ್ವಾಮಿಗಳು ಮಾತನಾಡಿ ಮನೆಯ ಮುಂದೆ ದೇವಾಲಯ, ಶಾಲಾ ಕಾಲೇಜುಗಳು, ಸರ್ಕಾರಿ ಕಛೇರಿಗಳು, ಪಾರ್ಕ್ಗಳು ಖಾಲಿ ಆವರಣದಲ್ಲಿ ಹೆಚ್ಚು ಹೆಚ್ಚು ಮರಗಿಡಗಳನ್ನು ಬಳಸಬೇಕಾಗಿದೆ. ಗಿಡಗಳನ್ನು ಬೆಳೆಸಲು ಯಾವುದೇ ಪದವಿ ಬೇಕಿಲ್ಲ, ಹಣ ಅಂತಸ್ತು ಅಧಿಕಾರ ಬೇಕಿಲ್ಲ, ಬೇಕಿರುವುದು ಒಂದೇ ನಿಸ್ವಾರ್ಥ ಮನಸ್ಸು, ಪರಿಸರ ಪರ ಕಾಳಜಿ ಅಷ್ಟೇ ಸಾಕು ಪರಿಸರ ರಕ್ಷಿಸುವ ಪ್ರವೃತ್ತಿ ಇಲ್ಲವಾದರೆ ಮುಂದೆ ಬದುಕು ನಾಶವಾದಿತೂ ಎಂದರು,
ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷರಾದ ಕೋಡಿಹಳ್ಳಿ ಜಗದೀಶ್ರವರು ಮಾತನಾಡಿ ನಾವು ರೈತರು ಹಸಿರನ್ನು ಕಾಪಾಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯ , ಮಠಮಾನ್ಯಗಳಿಗೆ ಬರುವ ಭಕ್ತರಿಗೆ ಪ್ರಸಾದವಾಗಿ ಗಿಡಗಳನ್ನು ನೀಡುವಂತೆ ಸ್ವಾಮೀಜಿಗಳಿಗೆ ಗೌರವಪೂರ್ವಕವಾಗಿ ಮನವಿ ಮಾಡಿಕೊಳ್ಳಲಾಯಿತು,ಅರಣ್ಯವಿಲ್ಲದೆ ಮಳೆಯಿಲ್ಲ, ಮಳೆಯಿಲ್ಲದೆ ಬೆಳೆಯಿಲ್ಲ, ಬೆಳೆಯಿಲ್ಲದೆ ರೈತನಿಲ್ಲ, ಮುದೊಂದು ದಿನ ರೈತನಿಲ್ಲದೆ ದೇಶವೇ ಇಲ್ಲ ಎಂಬAತಾಗುತ್ತದೆ. ಇತ್ತೀಚಿನ ಆಧುನಿಕ ಮಕ್ಕಳು, ಸಿನಿಮಾ ನೋಡಿ, ನಟನ ಅನುಕರಣೆ ಮಾಡಿ ಅಂದರೆ, ಕೆ.ಜಿ.ಎಫ್, ಸಿನಿಮಾ ನೋಡಿ ಗಡ್ಡಬೆಳೆಸುವ ಬದಲು ಸಾಲುಮರದ ತಿಮ್ಮಕ್ಕನ ನೋಡಿ ಒಂದೆರಡು ಗಿಡಗಳನ್ನು ಬೆಳೆಸಬೇಕೆಂದು ಮಕ್ಕಳಿಗೆ ತಿಳಿಸಿದರು,
ಕಾರ್ಯಕ್ರಮದಲ್ಲಿ ಶಿವಕುಮಾರ್, ಸಂತೋಷ್, ಮಠದ ವಿದ್ಯಾರ್ಥಿಗಳು ಸಾರ್ವಜನಿಕರು ಇದ್ದರು,
ಶ್ರೀ ಖಾರದೇಶ್ವರ ಮಠದ ಆವರಣದಲ್ಲಿ ಗಿಡನೆಡುವ ಕಾರ್ಯಕ್ರಮ,

Leave a comment
Leave a comment